Pariksha Pe Charcha 2025: ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜೊತೆಗೆ ಸದ್ಗುರು, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಗಣ್ಯರು ಭಾಗಿ!
ಫೆ.10 ರಂದು 18ನೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಯಲಿದೆ. ದೆಹಲಿಯ ಭಾರತ್ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಲಕ್ಷಾಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಬಾರಿ ಹೊಸ ಮಾದರಿಯಲ್ಲಿ ನಡೆಯುವ ಪರೀಕ್ಷೆ ಕುರಿತು ಚರ್ಚೆ ನಡೆಯಲಿದೆ. ಪರೀಕ್ಷೆ ಕುರಿತು ವಿದ್ಯಾರ್ಥಿಗಳ ಸಮಸ್ಯೆಯನ್ನು ಪ್ರಧಾನಿ ಮೋದಿ ಆಲಿಸಲಿದ್ದಾರೆ. ಮೋದಿ ಜೊತೆಗೆ ಚರ್ಚೆಯಲ್ಲಿ ಸದ್ಗುರು ದೀಪಿಕಾ ಪಡುಕೋಣೆ ಮತ್ತು ವಿಕ್ರಾಂತ್ ಮ್ಯಾಸ್ಸೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Pariksha Pe Charcha 2025

ನವದೆಹಲಿ: ಫೆ.10 ರಂದು18ನೇ ಪರೀಕ್ಷಾ ಪೇ ಚರ್ಚಾ(Pariksha Pe Charcha 2025) ಕಾರ್ಯಕ್ರಮ ನಡೆಯಲಿದೆ. ದೆಹಲಿಯ(Delhi) ಭಾರತ್ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,ಲಕ್ಷಾಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಬಾರಿ ಹೊಸ ಮಾದರಿಯಲ್ಲಿ ನಡೆಯುವ ಪರೀಕ್ಷೆ ಕುರಿತು ಚರ್ಚೆ ನಡೆಯಲಿದೆ. ಪರೀಕ್ಷೆ ಕುರಿತು ವಿದ್ಯಾರ್ಥಿಗಳ ಸಮಸ್ಯೆಯನ್ನು ಪ್ರಧಾನಿ ಮೋದಿ ಆಲಿಸಲಿದ್ದಾರೆ. ಮೋದಿ ಜೊತೆಗೆ ಚರ್ಚೆಯಲ್ಲಿ ಸದ್ಗುರು(Sadhguru) ದೀಪಿಕಾ ಪಡುಕೋಣೆ(Deepika Padukone) ಮತ್ತು ವಿಕ್ರಾಂತ್ ಮ್ಯಾಸ್ಸೆ(Vikrant Massey) ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಭಾಗಿಯಾಗಲಿದ್ದಾರೆ. ಇದೊಂದು ಮಹತ್ವದ ಸಂವಾದ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ನರೇಂದ್ರ ಮೋದಿ ಎಲ್ಲರ ಪ್ರಶ್ನೆಗಳಿಗೂ ವಿವರವಾಗಿ ಉತ್ತರಿಸಲಿದ್ದು, ಹಲವು ಗಣ್ಯರು ವೇದಿಕೆಯಲ್ಲಿ ಅವರಿಗೆ ಸಾಥ್ ಕೊಡಲಿದ್ದಾರೆ.
This year, Pariksha Pe Charcha is getting a next-level upgrade!
— MyGovIndia (@mygovindia) February 6, 2025
It’s not just PM @narendramodi—a power squad is joining in with wisdom, motivation, and some serious life hacks!
🎤 @SadhguruJV's wisdom
🎬 @deepikapadukone's confidence boost
🥊 @MangteC’s winning mindset
…and… pic.twitter.com/fwZSRDJuXi
ಚರ್ಚೆಯಲ್ಲಿ ಪಾಲ್ಗೊಳ್ಳುವ ಇತರ ಗಣ್ಯರು
- ಮೇರಿ ಕೋಮ್
- ಅವನಿ ಲೇಖನ
- ರುಜುತಾ ದಿವೇಕರ್
- ಸೋನಾಲಿ ಸಭರ್ವಾಲ್
- ರೇವಂತ್ ಹಿಮತ್ಸಿಂಕಾ
- ವಿಕ್ರಾಂತ್ ಮ್ಯಾಸ್ಸಿ
- ಭೂಮಿ ಪೆಡ್ನೇಕರ್
- ಗೌರವ್ ಚೌಧರಿ
- ರಾಧಿಕಾ ಗುಪ್ತಾ
ಫೆ.10 2025 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಟೌನ್ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಿರುವ ಪರೀಕ್ಷಾ ಒತ್ತಡವನ್ನು ನಿವಾರಿಸಲು ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂವಾದದಲ್ಲಿ ಪಾಲ್ಗೊಳ್ಳುವವರು ಪ್ರಧಾನಿ ಮೋದಿ ಅವರಲ್ಲಿ ಪ್ರಶ್ನೆ ಕೇಳುವ ಅವಕಾಶವಿರುತ್ತದೆ. ಆಯ್ದ ಪ್ರಶ್ನೆಗಳಿಗೆ ಮೋದಿ ಉತ್ತರಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ನಗರ ನಕ್ಸಲ್ ಭಾಷೆ, ಗುಡಿಸಲಲ್ಲಿ ಫೋಟೊ ಸೆಷನ್; ರಾಹುಲ್ ಗಾಂಧಿ ವಿರುದ್ಧ ಮೋದಿ ಗುಡುಗು
PPC 2025ಕ್ಕೆ ಭಾರತ ಮತ್ತು ವಿದೇಶಗಳಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಂದ 3.30 ಕೋಟಿಗೂ ಹೆಚ್ಚು ನೋಂದಣಿಗಳಾಗಿವೆ. PPC 2025 ಗಾಗಿ ಆನ್‌ಲೈನ್ ನೋಂದಣಿ ಡಿಸೆಂಬರ್ 14, 2024 ರಂದು ಪ್ರಾರಂಭವಾಗಿತ್ತು. ಜನವರಿ 14, 2025 ರಂದು ಮುಕ್ತಾಯಗೊಂಡಿತು.