ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಪೈಲಟ್‌ನಿಂದ ಹಲ್ಲೆ; ಕರ್ತವ್ಯದಿಂದ ಅಮಾನತು

Passenger assaulted by pilot: ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕರ್ತವ್ಯ ನಿರತ ಪೈಲಟ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಮಾನಯಾನ ಸಂಸ್ಥೆಯು, ಪೈಲಟ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಪೈಲಟ್‌ನಿಂದ ಹಲ್ಲೆ

ಸಾಂದರ್ಭಿಕ ಚಿತ್ರ -

Priyanka P
Priyanka P Dec 20, 2025 5:42 PM

ನವದೆಹಲಿ, ಡಿ. 20: ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express)ನ ಕರ್ತವ್ಯ ನಿರತ ಪೈಲಟ್ (Pilot) ಒಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಯಾಣಿಕನೊಬ್ಬರು ಆರೋಪಿಸಿರುವ ಘಟನೆ ನಡೆದಿದೆ. ಶುಕ್ರವಾರ (ಡಿಸೆಂಬರ್‌19) ದೆಹಲಿ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 1ರಲ್ಲಿ ಸ್ಪೈಸ್ ಜೆಟ್ (spice jet) ಪ್ರಯಾಣಿಕನೊಬ್ಬರು, ಭದ್ರತಾ ಸರತಿ ಸಾಲನ್ನು ಮುರಿದಿದ್ದಾರೆ. ಈ ಬಗ್ಗೆ ನಡೆದ ವಾಗ್ವಾದ ಉಲ್ಬಣಗೊಂಡ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕರ್ತವ್ಯ ನಿರತ ಪೈಲಟ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯ, ಪೈಲಟ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ. ಅಂಕಿತ್ ದಿವಾನ್ ಎಂಬ ಪ್ರಯಾಣಿಕ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‍ನ ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜು; 150 ಕ್ಕೂ ವಿಮಾನ ಸಂಚಾರದಲ್ಲಿ ವ್ಯತ್ಯಯ

ನಮಗೆ 4 ತಿಂಗಳ ಮಗು ಇದ್ದ ಕಾರಣ, ನಾನು ಮತ್ತು ನನ್ನ ಕುಟುಂಬಕ್ಕೆ ಸಿಬ್ಬಂದಿ ಬಳಸುವ ಭದ್ರತಾ ತಪಾಸಣೆಯನ್ನು ಬಳಸಲು ಮಾರ್ಗದರ್ಶನ ನೀಡಲಾಯಿತು ಎಂದು ದಿವಾನ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಸೆಜ್ವಾಲ್ ಸೇರಿದಂತೆ ಸಿಬ್ಬಂದಿ ದಿವಾನ್‌ ಅವರ ಮುಂದೆ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಸೆಜ್ವಾಲ್ ದಿವಾನ್‌ನನ್ನು ಕರೆದಿದ್ದಾನೆ. ಈ ವೇಳೆ ನಡೆದ ಮಾತಿನ ಚಕಮಕಿ ದೈಹಿಕ ಹಲ್ಲೆಗೆ ಕಾರಣವಾಯಿತು ಎಂದು ಅವರು ಹೇಳಿದರು.

ತನ್ನನ್ನು ಅಶಿಕ್ಷಿತ ಎಂದು ಪೈಲಟ್ ಕರೆದಿದ್ದಾಗಿ ಪ್ರಯಾಣಿಕ ಆರೋಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆಯಿತು ಎಂದು ಹೇಳಿದರು. ಪೈಲಟ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರು. ಸಂಯಮವನ್ನು ನಿರ್ವಹಿಸಲು ಸಾಧ್ಯವಾಗದೆ, ಪೈಲಟ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ರಕ್ತ ಬರುವ ಹಾಗೆ ಹೊಡೆದಿದ್ದಾರೆ ಎಂದು ಪ್ರಯಾಣಿಕ ಬರೆದಿದ್ದಾರೆ.

ದೈಹಿಕ ಹಲ್ಲೆಯಿಂದ ತನಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ್ದಾಗಿ ಅವರು ವಿವರಿಸಿದರು. ತನ್ನ ತಂದೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವುದನ್ನು ನೋಡಿದ ನನ್ನ 7 ವರ್ಷದ ಮಗಳು ಇನ್ನೂ ಆಘಾತಕ್ಕೊಳಗಾಗಿದ್ದಾಳೆ ಮತ್ತು ಭಯಭೀತಳಾಗಿದ್ದಾಳೆ ಎಂದು ಅವರು ಹೇಳಿದರು. ಶಾಂತವಾಗಿರಲು ಸಾಧ್ಯವಾಗದ ಪೈಲಟ್‌ಗಳು ಹೇಗೆ ವಿಮಾನ ಚಲಾಯಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.

ದಿವಾನ್ ಅವರ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಪೈಲಟ್ ಅನ್ನು ತಕ್ಷಣವೇ ಅವರ ಅಧಿಕೃತ ಕರ್ತವ್ಯಗಳಿಂದ ತೆಗೆದುಹಾಕಲಾಗಿದೆ ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

ಇಲ್ಲಿದೆ ಎಕ್ಸ್‌ ಪೋಸ್ಟ್‌:



ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ ನಮ್ಮ ಉದ್ಯೋಗಿಯೊಬ್ಬರು ಮತ್ತೊಂದು ವಿಮಾನಯಾನ ಸಂಸ್ಥೆಯ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. ಘಟನೆಯಿಂದ ಉಂಟಾದ ತೊಂದರೆಗೆ ನಾವು ನಮ್ಮ ಹೃದಯಪೂರ್ವಕ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. ಅಂತಹ ನಡವಳಿಕೆಯನ್ನು ಖಂಡಿಸುತ್ತೇವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಈ ಘಟನೆ ನಡೆದಿದ್ದು, ನಂತರ ಸೆಜ್ವಾಲ್ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು ಎಂದು ಹೇಳಲಾಗಿದೆ.