ಸುಂಕ ರಹಿತ ಸಕ್ಕರೆ ಆಮದಿಗೆ ಅನುಮತಿ: ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ
ದೇಶದಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ 10 ಲಕ್ಷ ಮೆಟ್ರಿಕ್ ಟನ್ (1 ಮಿಲಿಯನ್ ಟನ್) ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ.
-
ಸಕ್ಕರೆ ಉತ್ಪಾದನಾ ಕಂಪನಿಗಳ ಷೇರುಗಳು ಶೇ.5ರಷ್ಟು ಕುಸಿತ
ಮುಂಬೈ: ದೇಶದಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ 10 ಲಕ್ಷ ಮೆಟ್ರಿಕ್ ಟನ್ (1 ಮಿಲಿಯನ್ ಟನ್) ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ.
ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಸಕ್ಕರೆ ಉತ್ಪಾದನಾ ಕಂಪನಿಗಳ ಷೇರುಗಳು ಶೇ.5ರ ವರೆಗೆ ಭಾರಿ ಕುಸಿತ ಕಂಡಿವೆ. ಸರಕಾರದ ಆದೇಶ ದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆ ಹೆಚ್ಚಾಗಿ, ಬೆಲೆಗಳು ಮತ್ತು ಕಂಪನಿಗಳ ಲಾಭಾಂಶ ಕಡಿಮೆಯಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಪರಿಣಾಮವಾಗಿ ಪ್ರಮುಖ ಕಂಪನಿಗಳ ಷೇರುಗಳಲ್ಲಿ ತೀವ್ರ ಇಳಿಕೆ ದಾಖಲಾಗಿದೆ.
ಯಾಕೆ ಈ ನಿರ್ಧಾರ?: ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿ ತಯಾರಿಕೆಗೆ ಸಕ್ಕರೆ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಶೇ.40ರಷ್ಟು ಏರಿಕೆಯಾಗಿತ್ತು. ಅಸಮರ್ಪಕ ಮಳೆ ಯಿಂದಾಗಿ ಕಬ್ಬು ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿತ್ತು. ಸಾಮಾನ್ಯವಾಗಿ ಭಾರತದಲ್ಲಿ ಸಕ್ಕರೆ ಆಮದಿನ ಮೇಲೆ ಶೇ.100ರಷ್ಟು ಆಮದು ಸುಂಕ ಇರುತ್ತದೆ. ಆದರೆ ಪ್ರಸ್ತುತ ಬೆಲೆ ನಿಯಂತ್ರಣಕ್ಕಾಗಿ ಸುಂಕ ದರದ ಕೋಟಾ (TRQ) ಅಡಿಯಲ್ಲಿ ಯಾವುದೇ ತೆರಿಗೆ ಇಲ್ಲದೆ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅನುಮತಿಸಲಾಗಿದೆ. ಕಚ್ಚಾ ಸಕ್ಕರೆಯನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಸಕ್ಕರೆ ಗಿರಣಿಗಳು ಮತ್ತು ರಿಫೈನರ್‌ಗಳು ಆನ್‌ಲೈನ್ ಮೂಲಕ ಆಗ 21 ರಿಂದ ಆಗ 28 ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಕ್ಟೋಬರ್ 15ರೊಳಗೆ ಆಮದು ಪ್ರಕ್ರಿಯೆ ಮುಗಿಸುವ ಆಮದುದಾರರಿಗೆ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ: Sugar Export: ಕೇಂದ್ರ ಸರ್ಕಾರ ಸಕ್ಕರೆ ರಫ್ತು ಹೆಚ್ಚಿಸಲಿ; ಸಿಎಂ ಸಿದ್ದರಾಮಯ್ಯ ಆಗ್ರಹ
ಕೃತಕ ಅಭಾವ ಸೃಷ್ಟಿ ತಡೆಗೆ ಕ್ರಮ: ಕೃತಕ ಅಭಾವ ಮತ್ತು ದಾಸ್ತಾನು ಮಾಡುವುದನ್ನು ತಡೆಯಲು ಸರಕಾರ ಬಿಗಿಯಾದ ಕ್ರಮ ಕೈಗೊಂಡಿದೆ. ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆ ಬಳಸುವ ಬೃಹತ್ ಗ್ರಾಹಕರು (ಉದಾಹರಣೆಗೆ ಮಿಠಾಯಿ ತಯಾರಕರು, ತಂಪು ಪಾನೀಯ ಸಂಸ್ಥೆಗಳು) ತಮ್ಮ 15 ದಿನಗಳ ಬಳಕೆಗೆ ಬೇಕಾಗುವಷ್ಟು ಮಾತ್ರ ದಾಸ್ತಾನು ಇಟ್ಟುಕೊಳ್ಳಬಹುದು. ಈ ನಿಯಮವು ಸೆಪ್ಟೆಂಬರ್ 1 ರಿಂದ ನವೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ. ದೇಶೀಯವಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕೇವಲ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಶೇ.40 ರಷ್ಟು ಏರಿಕೆಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಗಳು ಪ್ರತಿ ಕೆಜಿಗೆ 52 ರು. ದಾಟಿದ್ದರಿಂದ ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಹೊಸ ಸಕ್ಕರೆ ಹಂಗಾಮು (2026-27) ಆರಂಭವಾಗುವ ಮುನ್ನ ದೇಶದಲ್ಲಿ ಸಕ್ಕರೆಯ ಆರಂಭಿಕ ದಾಸ್ತಾನು ಅಂದಾಜು ಅಗತ್ಯತೆಗಿಂತ ಕಡಿಮೆ ಇರುವುದ ರಿಂದ ಸರಕಾರ ಈ ತುರ್ತು ಕ್ರಮ ಕೈಗೊಂಡಿದೆ.
ಯಾವುದು ಎಷ್ಟು ಇಳಿಕೆ?
ಬಲರಾಂಪುರ್ ಚೀನಿ ಮಿಲ್ಸ್, ಧಾಂಪುರ್ ಕೊಳ್ಳಲು ಅನುಮತಿ ಶುಗರ್ ಮಿಲ್ಸ್, ಬಜಾಜ್ ಹಿಂದುಸ್ತಾನ್ ಶುಗರ್ ಷೇರುಗಳ ಮೌಲ್ಯ ಶೇ.5ರಷ್ಟು ಇಳಿಕೆಯಾಗಿದ್ದರೆ ದಾಲ್ಮಿಯಾ ಭಾರತ್ ಶುಗರ್ ಮತ್ತು ಈದ್ ಪ್ಯಾರಿ ಶೇ.3ರಿಂದ 6ರವರೆಗೆ ಕುಸಿತ ಕಂಡಿದೆ.
*
ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿಗಳ ತಯಾರಿಕೆಗೆ ಸಕ್ಕರೆಗೆ ಹೆಚ್ಚಿನ ಬೇಡಿಕೆ
ದೇಶೀಯವಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕೇವಲ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಶೇ.40ರಷ್ಟು ಏರಿಕೆ
ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆ ಬಳಸುವವರು 15 ದಿನಗಳ ಬಳಕೆಗೆ ಅಗತ್ಯವಿದ್ದಷ್ಟೇ ದಾಸ್ತಾನುವಿಟ್ಟು ಬಲರಾಂಪುರ್ ಚೀನಿ ಮಿಲ್ಸ್, ಧಾಂಪುರ್ ಕೊಳ್ಳಲು ಅನುಮತಿ