ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ನೆಹರೂ ಸರ್ಕಾರ ದೇವಾನಂದ್‌, ಕಿಶೋರ್‌ ಅವರನ್ನು ಬ್ಯಾನ್‌ ಮಾಡಿತ್ತು: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಮೋದಿ!

ರಾಜ್ಯಸಭಾ ಅಧಿವೇಶನದಲ್ಲಿ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ನೆಹರೂ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾತನಾಡಿರುವ ಮೋದಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದಾರೆ . ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕಾರಣಕ್ಕೆ ಬಾಲಿವುಡ್‌ನ ಹಿರಿಯ ನಟ ದೇವ್ ಆನಂದ್ ಅವರ ಚಲನಚಿತ್ರಗಳನ್ನು ನಿಷೇಧಿಸಲಾಗಿತ್ತು. ಆ ಕಾಲದ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಕಾಂಗ್ರೆಸ್ ವೇದಿಕೆಗಳಲ್ಲಿ ಹಾಡಲು ನಿರಾಕರಿಸಿದರು. ಅವರ ಮೇಲೆ ದ್ವೇಷ ಸಾಧಿಸಿದ ಕಾಂಗ್ರೆಸ್ ಕಿಶೋರ್ ಕುಮಾರ್ ಅವರ ಎಲ್ಲ ಹಾಡುಗಳನ್ನು ಆಕಾಶವಾಣಿಯಲ್ಲಿ ನಿಷೇಧಿಸಿತ್ತು. ತುರ್ತು ಪರಿಸ್ಥಿತಿಯ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಸದನದಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ವಾಕ್‌ ಪ್ರಹಾರ!

Narendra Modi.

Profile Deekshith Nair Feb 6, 2025 6:25 PM

ನವದೆಹಲಿ: ರಾಜ್ಯಸಭಾ (Rajyasabha) ಅಧಿವೇಶನದಲ್ಲಿ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ನೆಹರೂ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾತನಾಡಿರುವ ಮೋದಿ, ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು(Emergency) ವಿರೋಧಿಸಿದ ಕಾರಣಕ್ಕೆ ಬಾಲಿವುಡ್‌ನ ಹಿರಿಯ ನಟ ದೇವ್ ಆನಂದ್ (Dev Ananad) ಅವರ ಚಲನಚಿತ್ರಗಳನ್ನು ನಿಷೇಧಿಸಲಾಗಿತ್ತು. ಆ ಕಾಲದ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ (Kishore Kumar) ಕಾಂಗ್ರೆಸ್ ವೇದಿಕೆಗಳಲ್ಲಿ ಹಾಡಲು ನಿರಾಕರಿಸಿದರು. ಹೀಗಾಗಿ ಅವರ ಮೇಲೆ ದ್ವೇಷ ಸಾಧಿಸಿದ ಕಾಂಗ್ರೆಸ್ ಕಿಶೋರ್ ಕುಮಾರ್ ಅವರ ಎಲ್ಲ ಹಾಡುಗಳನ್ನು ಆಕಾಶವಾಣಿಯಲ್ಲಿ ನಿಷೇಧಿಸಿತ್ತು. ತುರ್ತು ಪರಿಸ್ಥಿತಿಯ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನೆಹರೂ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುಂಬೈನಲ್ಲಿ ಕಾರ್ಮಿಕರ ಮುಷ್ಕರ ನಡೆಯಿತು. ಆ ಮುಷ್ಕರದ ಸಮಯದಲ್ಲಿ ಹೆಸರಾಂತ ಕವಿ ಮಜ್ರೂಹ್ ಸುಲ್ತಾನಪುರಿ ಒಂದು ಕವಿತೆಯನ್ನು ವಾಚಿಸಿದರು. ಇದಕ್ಕಾಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಆ ಸಮಯದಲ್ಲಿ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ನಟ ಬಲರಾಜ್ ಸಾಹ್ನಿಯನ್ನೂ ಜೈಲಿಗೆ ಹಾಕಲಾಯಿತು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ವೀರ ಸಾವರ್ಕರ್ ಕುರಿತು ಒಂದು ಕವಿತೆ ಬರೆದಿದ್ದರು. ಅದನ್ನು ಆಕಾಶವಾಣಿಯಲ್ಲಿ ಹಾಡಲು ಬಯಸಿದ್ದರು. ಆದರೆ ಅವರನ್ನು ಆಕಾಶವಾಣಿಯಿಂದ ಜೀವಿತಾವಧಿಯವರೆಗೆ ನಿಷೇಧಿಸಲಾಯಿತು. ಕಾಂಗ್ರೆಸ್‌ ನೂರಾರು ತಪ್ಪುಗಳನ್ನು ಮಾಡಿದೆ. ಈಗ ಬಿಜೆಪಿಯನನು ಟೀಕಿಸುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.



ಮುಂದುವರಿದು ಮಾತನಾಡಿರುವ ಮೋದಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ತತ್ವವು ಎಲ್ಲರ ಜವಾಬ್ದಾರಿಯಾಗಿದ್ದರೂ, ಕಾಂಗ್ರೆಸ್‌ನಿಂದ ಅದನ್ನು ನಿರೀಕ್ಷಿಸುವುದು ತಪ್ಪು ಎಂದು ಗೇಲಿ ಮಾಡಿದ್ದಾರೆ. ಕಾಂಗ್ರೆಸ್ ತನ್ನ ನೀತಿಗಳಲ್ಲಿ ಕುಟುಂಬವೇ ಮೊದಲು ಎಂಬುದಕ್ಕೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಮೋದಿ:Pariksha Pe Charcha 2025: ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜೊತೆಗೆ ಸದ್ಗುರು, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಗಣ್ಯರು ಭಾಗಿ!

ಬಿಜೆಪಿಯ ಗಮನ ರಾಷ್ಟ್ರ ಮೊದಲು ಎಂದು ಹೇಳಿದ ಪ್ರಧಾನಿ ಮೋದಿ, ಭಾರತದ ಜನರು ಬಿಜೆಪಿಯ ಅಭಿವೃದ್ಧಿ ಮಾದರಿಗೆ ಬಲವಾದ ಬೆಂಬಲವನ್ನು ನೀಡಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು, ವಂಚನೆ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಮಿಶ್ರಣವಿರುವ ರಾಜಕೀಯದ ಮಾದರಿಯನ್ನು ಸೃಷ್ಟಿಸಿದೆ. ಕಾಂಗ್ರೆಸ್​ಗೆ ಕುಟುಂಬ ರಾಜಕಾರಣವೇ ಮುಖ್ಯ. ಅಂಥವರಿಂದ ಸಬ್ಕಾ ವಿಕಾಸ್ ಸಾಧ್ಯವೇ ಇಲ್ಲ ಎಂದರು.