ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi : ಟ್ರಂಪ್‌ಗೂ 10 ವರ್ಷದ ಮೊದಲೇ DOGE ಪರಿಚಯಿಸಿದ ಮೋದಿ ಸರ್ಕಾರ; 5 ಲಕ್ಷ ಕೋಟಿ ರೂ ಉಳಿಸಿದ್ದು ಹೇಗೆ?

ಅಮೆರಿಕದ ವಿಜ್ಞಾನಿ ಹಾಗೂ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮೋದಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಟ್ರಂಪ್‌ ಜಾರಿಗೆ ತಂದಿರುವ ಹಲವು ವಿಷಯಗಳ ಬಗ್ಗೆ ಮಾತನಾಡಿದ ಮೋದಿ ಭಾರತದಲ್ಲಿ 10 ವರ್ಷಗಳ ಮೊದಲೇ DOGE ಅಸ್ಥಿತ್ವದಲ್ಲಿದೆ ಎಂದು ಹೇಳಿದ್ದಾರೆ.

ಟ್ರಂಪ್‌ಗೂ 10 ವರ್ಷದ ಮೊದಲೇ  DOGE ಪರಿಚಯಿಸಿದ ಮೋದಿ ಸರ್ಕಾರ!

ನರೇಂದ್ರ ಮೋದಿ

Profile Vishakha Bhat Mar 18, 2025 2:51 PM

ನವದೆಹಲಿ: ಅಮೆರಿಕದ ವಿಜ್ಞಾನಿ ಹಾಗೂ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ (Lex Fridman Podcast) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮೋದಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಟ್ರಂಪ್‌ ಜಾರಿಗೆ ತಂದಿರುವ ಹಲವು ವಿಷಯಗಳ ಬಗ್ಗೆ ಮಾತನಾಡಿದ ಮೋದಿ ಭಾರತದಲ್ಲಿ 10 ವರ್ಷಗಳ ಮೊದಲೇ DOGE ಅಸ್ಥಿತ್ವದಲ್ಲಿದೆ ಎಂದು ಹೇಳಿದ್ದಾರೆ. ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬುದನ್ನು ಜಾರಿಗೊಳಿಸಿದ್ದನ್ನು ನೆನಪಿಸಿಕೊಂಡರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಡಿಯಲ್ಲಿ, ಹೊಸದಾಗಿ ಪರಿಚಯಿಸಲಾದ ಸರ್ಕಾರಿ ದಕ್ಷತೆ ಇಲಾಖೆ (DOGE) ಅನ್ನು ಎಲೋನ್ ಮಸ್ಕ್ ನೇತೃತ್ವ ವಹಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಸ್ಕ್‌ ಅಮೆರಿಕದ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಸರಿಯಾಗಿ ಕೆಲಸ ಮಾಡಿ ಇಲ್ಲವೇ ಕೆಲಸವನ್ನು ಬಿಡಿ ಎಂದು ಎಚ್ಚರಿಕೆ ನೀಡಿದ್ದರು. ಆಡಳಿತದ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅನಗತ್ಯ ಅಥವಾ ಬಳಕೆಯಲ್ಲಿಲ್ಲದ ಸರ್ಕಾರದ ಶಾಖೆಗಳನ್ನು ನಿರ್ಮೂಲನೆ ಮಾಡುವುದು ಇದರ ಉದ್ದೇಶವಾಗಿದೆ.

ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾತನಾಡಿದ ಮೋದಿ , ನಾನು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ DOGE ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದೆವು. ಕೆಲವು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು, ವಿಶೇಷವಾಗಿ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಯಾರೂ ಬಳಸಿಕೊಳ್ಳುತ್ತಿಲ್ಲ ಎಂದು ನನ್ನ ಗಮನಕ್ಕೆ ಬಂತು. ಹಾಗಾಗಿ ನಾವು ಅದನ್ನು ಕಡಿತಗೊಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾರ್ಚ್ 2022 ರ ವೇಳೆಗೆ, ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಸರ್ಕಾರ ಸುಮಾರು 2.84 ಲಕ್ಷ ಕೋಟಿ ರೂ.ಗಳನ್ನು ಉಳಿಸಿದೆ. ಮಾರ್ಚ್ 2023 ರ ವೇಳೆಗೆ, ಈ ಅಂಕಿ ಅಂಶವು 3.48 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ. ಇದೀಗ ಪ್ರತಿ ವರ್ಷ ಸುಮಾರು 64,000 ಕೋಟಿ ರೂ.ಗಳನ್ನು ಉಳಿಸಲಾಗುತ್ತಿದೆ. ಅಂದಾಜಿನ ಪ್ರಕಾರ, ಸರ್ಕಾರ ಇಲ್ಲಿಯವರೆಗೆ 5 ಲಕ್ಷ ಕೋಟಿ ರೂ ಉಳಿತಾಯ ಮಾಡಿರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Narendra Modi: ಗೋಧ್ರಾ ಹತ್ಯಾಕಾಂಡದ ಬಗ್ಗೆ ಮೌನ ಮುರಿದ ಪ್ರಧಾನಿ; ಪಾಡ್‌ಕಾಸ್ಟ್‌ನಲ್ಲಿ ಮೋದಿ ಹೇಳಿದ್ದೇನು?

ಉಳಿತಾಯದ ವಿವರಗಳು ಇಲ್ಲಿವೆ:

  • 4.15 ಕೋಟಿ ನಕಲಿ ಹಾಗೂ ಅಸ್ಥಿತ್ವದಲ್ಲಿದ ನಿಷ್ಕ್ರಿಯ LPG ಸಂಪರ್ಕಗಳನ್ನು ತೆಗೆದುಹಾಕುವ ಮೂಲಕ 73,443 ಕೋಟಿ ರೂ. ಉಳಿತಾಯ. ಇದರ ಜೊತೆಗೆ, ಸಬ್ಸಿಡಿ ರಹಿತ LPG ಗ್ರಾಹಕರ ಸಂಖ್ಯೆ 2.45 ಕೋಟಿ.
  • 5 ಕೋಟಿ ನಕಲಿ ಮತ್ತು ಅಸ್ಥಿತ್ವದಲ್ಲಿದ ಪಡಿತರ ಚೀಟಿಗಳನ್ನು ಅಳಿಸಿಹಾಕುವ ಮೂಲಕ 1.85 ಲಕ್ಷ ಕೋಟಿ ರೂ.ಗಳನ್ನು ಉಳಿಸಲಾಗಿದೆ.
  • ರಾಷ್ಟ್ರೀಯ ವಿದ್ಯಾರ್ಥಿವೇತನ ಸಹಾಯ ಕಾರ್ಯಕ್ರಮದ (NSAP) 11.05 ಲಕ್ಷ ಅಸ್ತಿತ್ವದಲ್ಲಿಲ್ಲದ, ಅನರ್ಹ ಫಲಾನುಭವಿಗಳ ನೋಂದಣಿಯನ್ನು ತೆಗೆದು ಹಾಕುವ ಮೂಲಕ 537 ಕೋಟಿ ರೂ.ಗಳನ್ನು ಉಳಿಸಲಾಗಿದೆ.
  • ಪಿಎಂ-ಕಿಸಾನ್ ಯೋಜನೆಯಿಂದ ಎರಡು ಕೋಟಿ ಅನರ್ಹ ಫಲಾನುಭವಿಗಳನ್ನು ಕೈಬಿಡಲಾಗಿರುವುದರಿಂದ 22,106 ಕೋಟಿ ರೂ. ಉಳಿತಾಯವಾಗಿದೆ.
  • ವಿವಿಧ ಯೋಜನೆಗಳಲ್ಲಿ 1,175 ಕೋಟಿ ರೂ.ಗಳ ಉಳಿತಾಯ.