ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಪ್ರತಿಭಟನೆ ಬೆಂಬಲಿಸಲು ಪೊಲೀಸರು ರಜೆ ಹಾಕಿ ಮುಖವಾಡ ಧರಿಸಿ ಬಂದಿದ್ದರು: ಹೊಸ ಬಾಂಬ್‌ ಸಿಡಿಸಿದ ಅಭಿಜಿತ್‌ ದೀಪ್ಕೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಬೆಂಬಲಿಸಲು ಪೊಲೀಸರು ಒಂದು ದಿನ ರಜೆ ತಗೊಂಡು ಮುಖವಾಡ ಹಾಕಿಕೊಂಡು ಬಂದಿದ್ದರು ಎಂದು ಸಂದರ್ಶನವೊಂದರಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಮತ್ತು ರಾಷ್ಟ್ರೀಯ ಸಂಚಾಲಕ ಅಭಿಜೀತ್ ದಿಪ್ಕೆ ತಿಳಿಸಿದ್ದಾರೆ.

ಸಿಜೆಪಿ ಪ್ರತಿಭಟನೆಗೆ ಪೊಲೀಸರ ಬೆಂಬಲ: ಅಭಿಜೀತ್ ದಿಪ್ಕೆ ಹೇಳಿದ್ದೇನು?

ಸಂಗ್ರಹ ಚಿತ್ರ -

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ (Jantar Mantar) ನಲ್ಲಿ ನಡೆದ ಪ್ರತಿಭಟನೆಯನ್ನು ಪೊಲೀಸರು ಕೂಡ ಬೆಂಬಲಿಸಿದ್ದರು. ಅವರು ತಮ್ಮ ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮುಖವಾಡ ಧರಿಸಿಕೊಂಡು ಅವರು ನಮ್ಮೊಂದಿಗೆ ಮಾತನಾಡಲು ಬಂದಿದ್ದರು. ಆರಂಭದಲ್ಲಿ ನಮಗೆ ಅವರ ಗುರುತು ಸಿಗಲಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಸಂಸ್ಥಾಪಕ ಮತ್ತು ರಾಷ್ಟ್ರೀಯ ಸಂಚಾಲಕ ಅಭಿಜೀತ್ ದಿಪ್ಕೆ (Abhijeet Dipke) ಹೇಳಿದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ನಿಯೋಜಿಸಲಾದ ಮೂವರು ಪೊಲೀಸ್ ಅಧಿಕಾರಿಗಳು ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಲು ಕರ್ತವ್ಯಕ್ಕೆ ಒಂದು ದಿನ ರಜೆ ಪಡೆದು ಬಂದಿದ್ದರು ಎಂದರು.

ನೇಪಾಳ ಪ್ರವಾಹದ ಬಳಿಕ ಚೀನಾದ ಮೆಗಾ ಡ್ಯಾಂ ಆತಂಕ: ಭಾರತದ ಮಗ್ಗುಲಲ್ಲೇ ಇದೆ ಡ್ರ್ಯಾಗನ್‌ ದೇಶದ ʼವಾಟರ್‌ ಬಾಂಬ್‌ʼ

ಒಂದು ದಿನ ಮೂವರು ಪೊಲೀಸ್ ಅಧಿಕಾರಿಗಳು ಕ್ಯಾಪ್, ಮುಖವಾಡ ಮತ್ತು ಕನ್ನಡಕ ಧರಿಸಿ ಬಂದರು. ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಇದರಿಂದ ಸ್ವಲ್ಪ ಭಯವಾಯಿತು. ಬಳಿಕ ಅವರು ನನ್ನೊಂದಿಗೆ ಖಾಸಗಿಯಾಗಿ ಮಾತನಾಡಲು ಕೇಳಿಕೊಂಡರು. ಬಳಿಕ ಅವರು ಪ್ರತಿಭಟನೆಯನ್ನು ಬೆಂಬಲಿಸಲು ಬಂದಿದ್ದೇವೆ ಎಂದು ತಿಳಿಸಿದರು.

ಜಂತರ್ ಮಂತರ್‌ನಲ್ಲಿ ನಿಯೋಜಿಸಲಾದ ತಳಮಟ್ಟದ ಪೊಲೀಸ್ ಅಧಿಕಾರಿಗಳು ಎದುರಿಸುತ್ತಿರುವ ಆರ್ಥಿಕಸಮಸ್ಯೆಗಳ ಬಗ್ಗೆಯೂ ಮಾತನಾಡಿದ ಅವರು, ಅವರಿಗೆ ಗರಿಷ್ಠ 30,000, 40,000 ಮತ್ತು 50,000 ರುಪಾಯಿ ಸಂಬಳ ನೀಡಲಾಗುತ್ತದೆ. ಅವರಿಗೆ ಮಕ್ಕಳನ್ನು ಕೋಚಿಂಗ್‌ಗೆ ಕಳುಹಿಸಬೇಕು. ಇವತ್ತು ಮಕ್ಕಳ ಶಿಕ್ಷಣವೂ ತುಂಬಾ ದುಬಾರಿಯಾಗಿದೆ ಎಂದು ತಿಳಿಸಿದರು.

ಜುಲೈ 20ರಂದು ನಡೆದ ಸಂಸತ್ತಿನ ಮೆರವಣಿಗೆಯಲ್ಲಿ ಗುಂಡೇಟಿನಿಂದ ಗಾಯಗೊಂಡ ಇಬ್ಬರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ ದೀಪ್ಕೆ, ಹೇಳಿದ್ದರು, ಪ್ರತಿಭಟನೆಯ ಸಮಯದಲ್ಲಿ ಇಬ್ಬರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದರು ಎಂದರು.

ನೇಪಾಳ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ ಆರಂಭ; ನೆರವಿಗಾಗಿ ಕರೆ ಮಾಡಲು ಪ್ರಿಯಾಂಕ್‌ ಖರ್ಗೆ ಮನವಿ

ಗಾಯಗೊಂಡವರಲ್ಲಿ ಒಬ್ಬರಾದ ಸಾಹಿಲ್, 2025ರಲ್ಲಿ ದೆಹಲಿ ಪೊಲೀಸ್ ಪರೀಕ್ಷೆಗೆ ಹಾಜರಾಗಿದ್ದರು. ಅದು ಕೂಡ ಸೋರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಜಕೀಯ ವಿಜ್ಞಾನ ವಿದ್ಯಾರ್ಥಿಯಾಗಿರುವ ಅವರ ತಂದೆಗೆ ಅಂಗವೈಕಲ್ಯ ಇರುವುದರಿಂದ ಐದು ಜನರ ಕುಟುಂಬವನ್ನು ಪೋಷಿಸಲು ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಪೊಲೀಸರ ಗುಂಡೇಟಿನಿಂದ ಅವರು ಒಂದು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.