2.5 ಕೋಟಿ ರುಪಾಯಿಗೆ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ: ಬಿ.ಟೆಕ್ ಪದವೀಧರನ ಬಂಧನ
ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ ಮಾಡಿದ ಎಂಜಿನಿಯರ್ ಒಬ್ಬರನ್ನು ಪ್ರಯಾಗ್‌ರಾಜ್‌ನ ಧುಮನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಆರೋಪಿಯು ತಲಾ 350 ರೂ. ಗೆ ವಿಡಿಯೋ ಮಾರಾಟ ಮಾಡಿದ್ದು, ಇದರಿಂದ 2.5 ಕೋಟಿ ರೂ. ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಹರ್ದೋಯ್ ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ -
ಪ್ರಯಾಗ್‌ರಾಜ್: ಮಕ್ಕಳ ಅಶ್ಲೀಲ ವಿಡಿಯೋ (obscene child video) ಮಾರಾಟ ಮಾಡುತ್ತಿದ್ದ 28 ವರ್ಷದ ಎಂಜಿನಿಯರ್ (B.Tech graduate) ಒಬ್ಬರನ್ನು ಹರ್ದೋಯ್ ಪೊಲೀಸರು (Hardoi Police) ಬಂಧಿಸಿದ್ದಾರೆ. ಆರೋಪಿಯು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ತಲಾ 350 ರೂ. ಮಾರಾಟ ಮಾಡುತ್ತಿದ್ದು, ಇದರಿಂದ 2.5 ಕೋಟಿ ರೂ. ಆದಾಯ ಗಳಿಸಿದ್ದಾನೆ ಎನ್ನಲಾಗಿದೆ. ಟೆಲಿಗ್ರಾಮ್ ಚಾನೆಲ್ ಮೂಲಕ ಆರೋಪಿಯು ಮಕ್ಕಳ ಅಶ್ಲೀಲ ವಿಡಿಯೋ ಪ್ರಸಾರ ಮಾಡುತ್ತಿದ್ದನು. ಇದನ್ನು ಹೆಚ್ಚಾಗಿ 12 ರಿಂದ 17 ವರ್ಷಗಳ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಹರ್ದೋಯ್‌ನಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ತನ್ನದೇ ವಿಡಿಯೋವನ್ನು ಟೆಲಿಗ್ರಾಮ್ ಚಾನೆಲ್‌ನಲ್ಲಿ ನೋಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಎಐಯಿಂದ ರಚಿಸಿರುವ ತನ್ನ ಅಶ್ಲೀಲ ವಿಡಿಯೋವನ್ನು ನೋಡಿದ ಆತ ಬಳಿಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿ ಟೆಲಿಗ್ರಾಮ್ ಚಾನೆಲ್ ಮಾಲೀಕ ವಿಕಾಸ್ ಸಿಂಗ್ ಮನೆಗೆ ಮೇ 17ರಂದು ರಾತ್ರಿ ದಾಳಿ ಮಾಡಿದರು.
ಮರೆಯಾದ ಮಾನವೀಯತೆ: ಒಡಿಶಾದಲ್ಲಿ ಸಾರ್ವಜನಿಕರೆದುರೇ ಯುವ ದಂಪತಿ ಮೇಲೆ ಭೀಕರ ಹಲ್ಲೆ
ಪ್ರಯಾಗ್‌ರಾಜ್‌ನ ಧುಮನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಮಾರ್ಕೆಟ್ ಬಂಬರೌಲಿದ್ದ ವಿಕಾಸ್ ಸಿಂಗ್ ಮನೆಯಲ್ಲಿ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಕಾಸ್ ಸಿಂಗ್ ಗೆ ಸೇರಿದ 3 ಬ್ಯಾಂಕ್ ಖಾತೆಗಳಲ್ಲಿ ಸುಮಾರು 2.5 ಕೋಟಿ ರೂ. ಪತ್ತೆಯಾಗಿದೆ. ವಾಯುಪಡೆಯ ನಿವೃತ್ತ ಅಧಿಕಾರಿ ನಂದಕಿಶೋರ್ ಅವರ ಮಗನಾಗಿರುವ ವಿಕಾಸ್ ಪ್ರಯಾಗ್‌ರಾಜ್‌ನ ಯುನೈಟೆಡ್ ಕಾಲೇಜಿನಿಂದ ಬಿ.ಟೆಕ್ ಪದವೀಧರನಾಗಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುವ ಅಶ್ಲೀಲ ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡ ಆರೋಪವು ಕೂಡ ಆತನ ಮೇಲಿದೆ.
ಹರ್ದೋಯ್‌ನ ಯುವಕ ಏಪ್ರಿಲ್‌ನಲ್ಲಿ ಅಪರಾಧ ಪೋರ್ಟಲ್‌ನಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಎಐ ನಿಂದ ನಿರ್ಮಿಸಿರುವ ತನ್ನ ಅಶ್ಲೀಲ ವಿಡಿಯೋವನ್ನು ಟೆಲಿಗ್ರಾಮ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಿದ್ದನು. ಇದರ ತನಿಖೆ ವೇಳೆ ಇದು ವಿಕಾಸ್ ಗೆ ಸೇರಿದ ಚಾನೆಲ್ ನಿಂದ ಪ್ರಸಾರವಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಾಗಿ ಅಪ್ರಾಪ್ತ ವಿದ್ಯಾರ್ಥಿಗಳೇ ಈ ಅಶ್ಲೀಲ ವಿಡಿಯೋಗಳನ್ನು ಖರೀದಿ ಮಾಡುತ್ತಿದ್ದರು. ವಿಕಾಸ್ 2ಕ್ಕೂ ಹೆಚ್ಚು ಚಾನೆಲ್‌ಗಳನ್ನು ನಡೆಸುತ್ತಿದ್ದು, ಇದರ ಚಂದಾದಾರಿಕೆ ಪಡೆದವರಲ್ಲಿ ಹೆಚ್ಚಿನವರು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ವಿಕಾಸ್ ಸಿಂಗ್‌ಗೆ ಬಹಳ ಬೇಗನೆ ಶ್ರೀಮಂತನಾಗುವ ಆಸೆ ಇತ್ತು. ಇದಕ್ಕಾಗಿಯೇ ಆತ ಚಿಕ್ಕ ವಯಸ್ಸಿನಲ್ಲಿಯೇ ದುಬಾರಿ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದನು. ತನ್ನ ಲ್ಯಾಪ್‌ಟಾಪ್, ಮೊಬೈಲ್ ಮೂಲಕ ತಡರಾತ್ರಿಯಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಹಣ ಗಳಿಸುತ್ತಿದ್ದನು. ಇದರ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.