ಪ್ರಧಾನಿ ಮೋದಿಯಿಂದ ನೂತನ 'ಸೇವಾ ತೀರ್ಥ' ಕಛೇರಿ ಲೋಕಾರ್ಪಣೆ! ; ಕಟ್ಟಡ ಹೇಗಿದೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿಯವರು ಇಂದು ಅತ್ಯಾಧುನಿಕ ಸೌಲಭ್ಯಗಳುಳ್ಳ 'ಸೇವಾ ತೀರ್ಥ'ವನ್ನು ಉದ್ಘಾಟನೆ ಮಾಡಿ ರೈತರು, ಮಹಿಳೆಯರು, ಯುವಕರ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ಗಳನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಈ ಐತಿಹಾಸಿಕ ಸಂದರ್ ವನ್ನು ಸ್ಮರಿಸಲು ಕೇಂದ್ರ ಸರ್ಕಾರವು 100 ರೂಪಾಯಿ ಮುಖಬೆಲೆಯ ವಿಶೇಷ ಸ್ಮರಣಾರ್ಥ ನಾಣ್ಯವನ್ನೂ ಕೂಡ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ಮೋದಿಯಿಂದ "ಸೇವಾ ತೀರ್ಥ" ಲೋಕಾರ್ಪಣೆ -
ನವದೆಹಲಿ,ಫೆ.13: ದೆಹಲಿಯಲ್ಲಿ ಹೊಸದಾದ ಪ್ರಧಾನ ಮಂತ್ರಿ ಕಛೇರಿಯನ್ನು ನರೆಂದ್ರ ಮೋದಿ (Prime Minister Modi) ಇಂದು ಲೋಕಾರ್ಪಣೆ ಮಾಡಿದ್ದಾರೆ. ಇದು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯ ಘಟಕವನ್ನು ಹೊಂದಿರುವ ಹೊಸ ಕಚೇರಿಯಾಗಿದೆ. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಯಾಗಿ ಪ್ರಧಾನಿ ಕಾರ್ಯಾಲಯವು ಹಳೆಯ ಸೌತ್ ಬ್ಲಾಕ್‌ನಿಂದ ಹೊಸ ಸಮಗ್ರ ಸಂಕೀರ್ಣಕ್ಕೆ ವರ್ಗಾವಣೆ ಗೊಂಡಿದೆ.
ಲುಟಿಯೆನ್‌ನ ದೆಹಲಿಯ ದಕ್ಷಿಣ ಬ್ಲಾಕ್‌ನಲ್ಲಿರುವ ಬ್ರಿಟಿಷ್ ಯುಗದ ಕಚೇರಿಯಿಂದ “ಸೇವಾ ತೀರ್ಥ” (Seva Tirtha) ಎಂಬ ಹೊಸ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಅತ್ಯಾಧುನಿಕ ಸೌಲಭ್ಯಗಳುಳ್ಳ 'ಸೇವಾ ತೀರ್ಥ' ವನ್ನು ಉದ್ಘಾಟನೆ ಮಾಡಿ ರೈತರು, ಮಹಿಳೆಯರು, ಯುವಕರ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಈ ಐತಿಹಾಸಿಕ ಸಂದರ್ ವನ್ನು ಸ್ಮರಿಸಲು ಕೇಂದ್ರ ಸರ್ಕಾರವು 100 ರೂಪಾಯಿ ಮುಖಬೆಲೆಯ ವಿಶೇಷ ಸ್ಮರಣಾರ್ಥ ನಾಣ್ಯವನ್ನೂ ಕೂಡ ಬಿಡುಗಡೆ ಮಾಡಿದ್ದಾರೆ.
ಈ ಯೋಜನೆಗಳಿಗೆ ಒತ್ತು ನೀಡಿದ ಪ್ರಧಾನಿ:
ಪಿಎಂ ರಾಹತ್ ಯೋಜನೆ:
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಪಿಎಂ ರಾಹತ್ ಯೋಜನೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದರು. ಈ ಯೋಜನೆಯಡಿಯಲ್ಲಿ ಅಪಘಾತಕ್ಕೀಡಾದ ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ತುರ್ತು ಚಿಕಿತ್ಸೆ ದೊರಕಲಿದೆ.
ಲಖ್ಪತಿ ದೀದಿ ಗುರಿ ಹೆಚ್ಚಳ:
ಮಹಿಳೆಯರ ಅಭಿವೃದ್ದಿಗಾಗಿ ಈ ಯೋಜನೆಯ ಗುರಿಯನ್ನು 3 ಕೋಟಿಯಿಂದ 6 ಕೋಟಿ ಮಹಿಳೆಯರಿಗೆ ಏರಿಸಲಾಗಿದೆ.
ಕೃಷಿ ಮೂಲಸೌಕರ್ಯ ನಿಧಿ:
ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃಷಿ ಮೌಲ್ಯ ಸರಪಳಿ ಯನ್ನು ಬಲಪಡಿಸಲು ವೆಚ್ಚವನ್ನು 1 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚುಗೊಳಿಸಲಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಅನುದಾನ ಹೆಚ್ಚಳ:
ಯುವಕರು ಉದ್ಯಮವನ್ನು ಆರಂಭಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಯೋಜನೆ ಜಾರಿ ಮಾಡಲಾಗಿದೆ. ಇದರ ಅಡಿಯಲ್ಲಿ ಪ್ರಧಾನ ಮಂತ್ರಿ 10,000 ಕೋಟಿ ರೂ.ಗಳ ನಿಧಿಯೊಂದಿಗೆ ಸ್ಟಾರ್ಟ್ಅಪ್ ಇಂಡಿಯಾ ನಿಧಿ 2.0 ಅನ್ನು ಅನುಮೋದಿಸಿದ್ದಾರೆ.
ಈ ಹೊಸದಾದ ನೂತನ ಸಂಕೀರ್ಣವು ಕೇವಲ ಕಟ್ಟಡವಾಗಿರದೆ ದೇಶದ ಆಡಳಿತ ಯಂತ್ರವನ್ನು ಒಂದೇ ಸೂರಿನಡಿ ತರುವ ಬೃಹತ್ ಯೋಜನೆ ಇಲ್ಲಿದೆ. ಇಲ್ಲಿ ಪ್ರಧಾನಿ ಕಾರ್ಯಾಲಯ (PMO), ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಕ್ಯಾಬಿನೆಟ್ ಸಚಿವಾಲಯಗಳು ಜೊತೆಯಾಗಿ ಕಾರ್ಯ ನಿರ್ವಹಿಸಲಿವೆ. ಪ್ರಧಾನ ಮಂತ್ರಿಗಳ ನೂತನ ಕಚೇರಿಯಲ್ಲಿ ಪ್ರಧಾನಿ ಸಚಿವಾಲಯ, ಸಭಾಂಗಣ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಸಂಪುಟ ಸಚಿವಾಲಯ ಇರಲಿವೆ. ಇಲ್ಲಿಯವರೆಗೆ ಪ್ರಧಾನಿ ಕಾರ್ಯಾಲಯವಿದ್ದ ಸೌತ್ ಮತ್ತು ನಾರ್ತ್ ಬ್ಲಾಕ್ ಕಟ್ಟಡಗಳನ್ನು ಇನ್ನು ಮುಂದೆ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಬದಲಾವಣೆಯಾಗಲಿದೆ.