ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮತ್ತೊಂದು ವಿಡಿಯೊ ಹಂಚಿಕೊಂಡು ಯುವ ಜನತೆಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ; ಪ್ರತಿ ಮನೆಯಲ್ಲೂ ಹರ್ ಘರ್ ತಿರಂಗಾ ಆಚರಿಸುವಂತೆ ಕರೆ

Har Ghar Tiranga: 80ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೊ ಮೂಲಕ ನಾಗರಿಕರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ, ಪ್ರತಿಯೊಂದು ಮನೆಯಲ್ಲೂ ಇದನ್ನು ಹಬ್ಬದಂತೆ ಆಚರಿಸುವಂತೆ ಕರೆ ನೀಡಿದರು. ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಮತ್ತು ರಾಷ್ಟ್ರವ್ಯಾಪಿ ಆಚರಣೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.

ಪ್ರತಿ ಮನೆಯಲ್ಲೂ ಹರ್ ಘರ್ ತಿರಂಗಾ ಆಚರಿಸುವಂತೆ ಪ್ರಧಾನಿ ಮೋದಿ ಕರೆ

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Aug 11, 2026 5:20 PM

ನವದೆಹಲಿ, ಆ. 11: 80ನೇ ಸ್ವಾತಂತ್ರ್ಯ ದಿನಾಚರಣೆಗೂ (Independence Day) ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿಡಿಯೊ ಮೂಲಕ ಮಹತ್ವದ ಸಂದೇಶ ಹಂಚಿಕೊಂಡಿದ್ದು, ನಾಗರಿಕರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ, ಪ್ರತಿಯೊಂದು ಮನೆಯಲ್ಲೂ ಇದನ್ನು ಹಬ್ಬದಂತೆ ಆಚರಿಸುವಂತೆ ಕರೆ ನೀಡಿದ್ದಾರೆ. ʼʼಬನ್ನಿ, ಪ್ರತಿ ಮನೆಯಲ್ಲೂ ಹರ್ ಘರ್ ತಿರಂಗಾ ಆಚರಿಸೋಣʼʼ ಎಂದು ಮೋದಿ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಬನ್ನಿ ಆಗಸ್ಟ್ 15 ಅನ್ನು ಹೆಮ್ಮೆ ಮತ್ತು ಗೌರವದಿಂದ ಆಚರಿಸೋಣ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು (ವಿಕಸಿತ್‌ ಭಾರತ) ನಿರ್ಮಿಸುವ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗ, ಘರ್ ಘರ್ ತಿರಂಗ, ಹರ್ ಮನ್ ತಿರಂಗ. ಬನ್ನಿ, ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸೋಣ” ಎಂದು ಪ್ರಧಾನಿ ಹೇಳಿದ್ದಾರೆ.

ಮೋದಿ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

2026ರ ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್‌ನಲ್ಲಿ ಆಚರಿಸಲಾಗುತ್ತಿದೆ. ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಮತ್ತು ರಾಷ್ಟ್ರವ್ಯಾಪಿ ಆಚರಣೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.

ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸರ್ಪಗಾವಲು

ಕೆಂಪು ಕೋಟೆಯಲ್ಲಿ 'ವಂದೇ ಮಾತರಂ'

ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆಗೆ ಮುನ್ನ ಕೆಂಪು ಕೋಟೆಯಲ್ಲಿ ವಂದೇ ಮಾತರಂ ಅನ್ನು ಸಾಮೂಹಿಕವಾಗಿ ಹಾಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ. ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಗುಪ್ತಾ, ಈ ಸಂದರ್ಭವನ್ನು ಅದ್ಭುತ ಮತ್ತು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ರಾಷ್ಟ್ರಗೀತೆಗೆ ಮೊದಲು ಕೆಂಪು ಕೋಟೆಯಲ್ಲಿ ವಂದೇ ಮಾತರಂನ ಸಾಮೂಹಿಕ ಗಾಯನ ನಡೆಯುವುದು ಇದೇ ಮೊದಲು ಎಂದು ಹೇಳಿದರು.

ವಂದೇ ಮಾತರಂ ಗೀತೆಯು ಭಾರತದ ಸ್ವಾತಂತ್ರ್ಯ ಚಳವಳಿಯ ಅಮರ ರಾಷ್ಟ್ರೀಯ ಮಂತ್ರವಾಗಿದ್ದು, ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಧ್ವನಿ ನೀಡುತ್ತದೆ ಎಂದು ಗುಪ್ತಾ ತಿಳಿಸಿದರು. ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ, ಸಂಸತ್ತಿನಲ್ಲಿ ಅಂಗೀಕರಿಸಲಾದ ನಿರ್ಣಯ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಬೆಳವಣಿಗೆಗಳು ಭಾರತದ ರಾಷ್ಟ್ರೀಯ ಸ್ಮರಣೆ, ಸಾಂಸ್ಕೃತಿಕ ಹೆಮ್ಮೆ ಮತ್ತು ದೇಶಭಕ್ತಿಯ ಭವ್ಯ ಘೋಷಣೆಯಾಗಲಿದೆ ಎಂದು ಅವರು ಹೇಳಿದರು.

ಗೋವಾದಲ್ಲಿ ತಿರಂಗಾ ರ‍್ಯಾಲಿ

ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಗೋವಾ ರಾಜಧಾನಿ ಪಣಜಿಯಲ್ಲಿ ತಿರಂಗ ರ‍್ಯಾಲಿ ನಡೆಯಿತು. ಮಿರಾಮರ್ ವೃತ್ತದಿಂದ ಕಲಾ ಅಕಾಡೆಮಿ ಮೂಲಕ ಆಜಾದ್ ಮೈದಾನಕ್ಕೆ ಮೆರವಣಿಗೆಯಲ್ಲಿ ಆಯೋಜಿಸಲಾಯಿತು. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಕಲಾ ಅಕಾಡೆಮಿಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು.