ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೆಗಾ ಆಮ್‌ ಆದ್ಮಿ ರ‍್ಯಾಲಿಗೂ ಮುನ್ನ ಆಸ್ಪತ್ರೆಗೆ ದಾಖಲಾದ ಪಂಜಾಬ್ ಸಿಎಂ ಭಗವಂತ್ ಮಾನ್

Bhagwant Mann Hospitalized: ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಶ್ಯಕ್ತಿಯಿಂದ ಬಳಲುತ್ತಿದ್ದ ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಆರೋಗ್ಯ ಇದೀಗ ಸ್ಥಿರವಾಗಿದ್ದು, ವೈದ್ಯಕೀಯ ತಂಡಗಳ ನಿಗಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

ಪಂಜಾಬ್ ಸಿಎಂ ಭಗವಂತ್ ಮಾನ್ (ಸಂಗ್ರಹ ಚಿತ್ರ) -

Priyanka P
Priyanka P Feb 16, 2026 12:33 PM

ಚಂಡೀಗಢ, ಫೆ.16: ಆಮ್ ಆದ್ಮಿ ಪಕ್ಷದ ರ‍್ಯಾಲಿಯ (AAP Rally) ಹಿಂದಿನ ದಿನ ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Mann) ಅವರು ನಿಶ್ಯಕ್ತಿಯಿಂದ ಬಳಲಿದ್ದು, ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫೆಬ್ರವರಿ 15ರ ಭಾನುವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರು ಅವರ ಆರೋಗ್ಯವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕಂಡುಬಂದಿದೆ. ಆದರೂ ಕೂಡ ಅವರು ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಮುಖ್ಯಮಂತ್ರಿಯು ಶನಿವಾರದಿಂದ (ಫೆ.14) ತಮ್ಮ ಸೊಸೆಯ ಮದುವೆಯಲ್ಲಿ ಪಾಲ್ಗೊಳ್ಳಲು ಸಂಗ್ರೂರ್‌ನಲ್ಲಿದ್ದರು. ಅನಾರೋಗ್ಯದ ನಂತರ ಫಜಿಲ್ಕಾಗೆ ತಮ್ಮ ಭೇಟಿಯನ್ನು ರದ್ದುಗೊಳಿಸಿದರು. ಅನಾರೋಗ್ಯದ ಕಾರಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅವರನ್ನು ಮೊಹಾಲಿಗೆ ಸ್ಥಳಾಂತರಿಸಲಾಯಿತು.

ಫೆಬ್ರವರಿ 16ರಂದು ಮೋಗಾ (Moga)ನಲ್ಲಿ ನಡೆಯಲಿರುವ ಆಮ್ ಆದ್ಮಿ ಪಕ್ಷದ (AAP) ಮಾದಕದ್ರವ್ಯ ವಿರೋಧಿ ರ‍್ಯಾಲಿಗೂ ಕೇವಲ ಒಂದು ದಿನ ಬಾಕಿ ಇರುವಾಗ ಸಿಎಂ ಅನಾರೋಗ್ಯಕ್ಕೀಡಾಗಿದ್ದಾರೆ ಸಂಭವಿಸಿದೆ. ಯುದ್ಧ ನಶೆಯನ್ ವಿರುದ್ಧ ಅಭಿಯಾನದಡಿ ಈ ಮಹಾ ರ್ಯಾಲಿಯನ್ನು ಆಯೋಜಿಸಲಾಗಿದೆ. ಕಿಲ್ಲಿ ಚಾಹ್ಲಾನ್‌ನಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.

Bhagwant Mann: ಪಾಕ್ ನಟಿ ಜೊತೆ ನಟಿಸಿದ್ದ ದಿಲ್ಜಿತ್ ನಡೆಯನ್ನು ಸಮರ್ಥಿಸಿಕೊಂಡ ಪಂಜಾಬ್ ಸಿಎಂ!

ಮಾರ್ಚ್ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವಿತ ಮೋಗಾ ಭೇಟಿಗೂ ಮುನ್ನ ಈ ಕಾರ್ಯಕ್ರಮ ನಡೆಯುತ್ತಿದ್ದೆ. ಬಿಜೆಪಿಯು ತನ್ನ ಮಾಜಿ ಮೈತ್ರಿ ಪಕ್ಷವಾದ ಶಿರೋಮಣಿ ಅಕಾಲಿ ದಳದೊಂದಿಗೆ ಮೈತ್ರಿ ಭಂಗವಾದ ನಂತರ, ಪಂಜಾಬ್‌ನಲ್ಲಿ ತನ್ನ ಚುನಾವಣಾ ಅಭಿಯಾನವನ್ನು ಇದೇ ಭೇಟಿಯಿಂದ ಆರಂಭಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಮೊಗಾ ಹಾಗೂ ಪಂಜಾಬ್‌ ರಾಜಕೀಯವಾಗಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ.

ಅಂದಹಾಗೆ, ಮೋಗಾವು ಐತಿಹಾಸಿಕವಾಗಿ ಪಂಜಾಬ್‌ನಲ್ಲಿ ರಾಜಕೀಯ ಪಕ್ಷಗಳಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ. ಏಕೆಂದರೆ ಅದರ ಕೇಂದ್ರ ಸ್ಥಾನವು ಮಜ್ಹಾ, ಮಾಲ್ವಾ ಮತ್ತು ದೋಬಾ ಪ್ರದೇಶಗಳಿಂದ ಜನರನ್ನು ಸುಲಭವಾಗಿ ಸಂಘಟಿಸಲು ಅನುಕೂಲವಾಗಿದೆ. ಜಿಲ್ಲೆಯು ರೈತ ಚಳುವಳಿಗಳು ಮತ್ತು ರಾಜಕೀಯ ಪ್ರಭಾವದೊಂದಿಗೆ ಗಾಢ ಸಂಬಂಧಗಳನ್ನು ಹೊಂದಿದೆ.

ಶಿರೋಮಣಿ ಅಕಾಲಿ ದಳಕ್ಕೆ, 1996ರಲ್ಲಿ 75ನೇ ವಾರ್ಷಿಕೋತ್ಸವದ ಮೋಗಾ ಸಮಾವೇಶದಿಂದ ಬಹಳ ಮಹತ್ವದ್ದಾಗಿದೆ. ಪಕ್ಷವು ಪಂಜಾಬ್, ಪಂಜಾಬಿ ಮತ್ತು ಪಂಜಾಬಿಯತ್ ಎಂಬ ಘೋಷಣೆಯೊಂದಿಗೆ ತನ್ನ ಆಕರ್ಷಣೆಯನ್ನು ವಿಸ್ತರಿಸಿತು. ಈ ಬದಲಾವಣೆಯು 1997ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಎಸ್‌ಎಡಿ-ಬಿಜೆಪಿ ಮೈತ್ರಿಕೂಟ ಸರ್ಕಾರ ರಚಿಸಲು ಕಾರಣವಾಯಿತು. ನಂತರ ಪಕ್ಷವು 2007 ಮತ್ತು 2012ರ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಜಿಲ್ಲೆಯಿಂದ ಪ್ರಮುಖ ಪ್ರಚಾರಗಳನ್ನು ಪ್ರಾರಂಭಿಸಿತು.

ಇದಲ್ಲದೆ, ಈ ಪ್ರದೇಶವು ಹಲವಾರು ಪ್ರಮುಖ ರಾಜಕೀಯ ಸಮಾವೇಶಗಳಿಗೆ ವೇದಿಕೆಯಾಗಿದ್ದು, 2020ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಖೇತಿ ಬಚಾವೋ ಯಾತ್ರೆ’ ಕೂಡ ಇಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2021ರಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಆಪ್ ಪಕ್ಷವು ರೈತ ರ್ಯಾಲಿಯನ್ನೂ ಇದೇ ಪ್ರದೇಶದಲ್ಲಿ ಆಯೋಜಿಸಿತ್ತು.