Delhi Earthquake: ದೆಹಲಿ ಸೇರಿ ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ; ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಏಪ್ರಿಲ್ 3) ಭೂಕಂಪವಾಗಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿದೆ. ರಿಕ್ಟರ್ ಮಾಪಕದಲ್ಲಿ 5.9 ದಾಖಲಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 3: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಏಪ್ರಿಲ್ 3) ಭೂಕಂಪವಾಗಿದೆ (Delhi Earthquake). ಅಫ್ಘಾನಿಸ್ತಾನದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿದ್ದು, ರಿಕ್ಟರ್ ಮಾಪಕದಲ್ಲಿ 5.9 ದಾಖಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಭೂಮಿ ಕಂಪಿಸಿದ ಅನುಭವಾಗಿದ್ದು, ಸ್ಥಳೀಯ ನಿವಾಸಿಗಳು ಭಯದಿಂದ ಮನೆ, ಕಚೇರಿಯಿಂದ ಹೊರಗೋಡಿ ಬಂದಿದ್ದಾರೆ (Earthquake in North India). ದೆಹಲಿ ಜತೆಗೆ ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಜೀವ ಹಾನಿಯಾಗಿಲ್ಲ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ದೆಹಲಿಯಲ್ಲಿ ಭೂಕಂಪ:
BREAKING 🚨
— FalconUpdatesHQ (@FalconUpdatesHQ) April 3, 2026
🇮🇳🇵🇰🇦🇫 Earthquake tremors just felt across Delhi-NCR, Punjab, Haryana, and parts of Pakistan and Afghanistan. pic.twitter.com/HBFC61gG80
ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ (GFZ) ಪ್ರಕಾರ, ಶುಕ್ರವಾರ ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿ ಪ್ರದೇಶ ಮತ್ತು ಹಿಂದೂ ಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ʼʼಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ಇತರ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ. ರಾತ್ರಿ 9:46ರ ಸುಮಾರಿಗೆ ಸಂಭವಿಸಿದ ಕಂಪನವು ಕೆಲವೇ ಸೆಕೆಂಡುಗಳ ಕಾಲ ನಡೆಯಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಲ್ಲಿ ಭೂಕಂಪ:
#WATCH | Jammu & Kashmir: An earthquake was felt in Srinagar. Chandeliers and fans were seen moving. pic.twitter.com/iFx5OTZ7uB
— ANI (@ANI) April 3, 2026
ಬಹುಮಹಡಿ ಕಟ್ಟಡಗಳಲ್ಲಿ ಹಠಾತ್ ಕಂಪನದ ಅನುಭವವಾಗಿದೆ ಎದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಚಂಡೀಗಢದ ನಿವಾಸಿಯೊಬ್ಬರು ಅಲ್ಪಾವಧಿಗೆ ಕಂಪನದ ಅನುಭವವಾಯಿತು ಎಂದಿದ್ದಾರೆ.
ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ
ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಭೂಮಿಯ ಒಳಭಾಗದಲ್ಲಿ 35 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಮೊಲುಕ್ಕಾ ಸಮುದ್ರದಲ್ಲಿ ಸಂಭವಿಸಿದ ಭೂಕಂಪದಿಂದ ಸಣ್ಣ ಸುನಾಮಿ ಅಲೆಗಳು ಎದಿದ್ದು, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ನೀಡಿದ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಟೆರ್ನೇಟ್ ನಗರದಿಂದ ಸುಮಾರು 127 ಕಿಲೋ ಮೀಟರ್ ದೂರದಲ್ಲಿ ದಾಖಲಾಗಿದೆ. ಕಂಪನವು ಉತ್ತರ ಮೊಲುಕ್ಕಾ ಹಾಗೂ ಉತ್ತರ ಸುಲಾವೇಸಿ ಪ್ರಾಂತ್ಯಗಳ ಹಲವಾರು ಭಾಗಗಳಲ್ಲಿ ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ.
ಭೂಕಂಪದ ನಂತರ ಉತ್ತರ ಸುಲಾವೇಸಿ ಪ್ರಾಂತ್ಯದ ಮನಾಡೋ ನಗರದಲ್ಲಿ ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿಬಂದರು. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಮುನ್ನೆಚ್ಚರಿಕಾ ಕ್ರಮವಾಗಿ ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.