ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ಟ್ರಂಪ್‌ ತೆರಿಗೆ ನಿಯಮಕ್ಕೆ ಪ್ರಧಾನಿ ತಲೆಬಾಗುತ್ತಾರೆ; ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಪರಸ್ಪರ ಸುಂಕಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಗಡುವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) "ಸೌಮ್ಯವಾಗಿ ತಲೆಬಾಗುತ್ತಾರೆ" ಎಂದು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿರುವ ಮಧ್ಯೆ ಈ ಟೀಕೆ ವ್ಯಕ್ತವಾಗಿದೆ.

ಟ್ರಂಪ್‌ ತೆರಿಗೆ ನಿಯಮಕ್ಕೆ ಪ್ರಧಾನಿ ತಲೆಬಾಗುತ್ತಾರೆ; ರಾಹುಲ್‌ ಗಾಂಧಿ

Profile Vishakha Bhat Jul 5, 2025 11:22 AM

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಪರಸ್ಪರ ಸುಂಕಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಗಡುವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) "ಸೌಮ್ಯವಾಗಿ ತಲೆಬಾಗುತ್ತಾರೆ" ಎಂದು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿರುವ ಮಧ್ಯೆ ಈ ಟೀಕೆ ವ್ಯಕ್ತವಾಗಿದೆ. ತೆರಿಗೆಗೆ ಸಂಬಂಧಿಸಿದಂತೆ ಟ್ರಂಪ್‌ ಈ ಮೊದಲು ಜುಲೈ 9 ರ ವರೆಗೆ ಭಾರತಕ್ಕೆ ಗಡುವು ನೀಡಿದ್ದರು. ಪಿಯೂಷ್ ಗೋಯಲ್ ಅವರು ಏನೂ ಬೇಕಾದರೂ ಹೇಳಬಹುದು. ನನ್ನ ಮಾತುಗಳನ್ನು ಗಮನಿಸಿ, ಮೋದಿ ಟ್ರಂಪ್ ಸುಂಕದ ಗಡುವಿಗೆ ಸೌಮ್ಯವಾಗಿ ತಲೆಬಾಗುತ್ತಾರೆ" ಎಂದು ಗಾಂಧಿ ಬರೆದಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋಯಲ್‌ ಭಾರತವು ಪರಸ್ಪರ ಪ್ರಯೋಜನಕಾರಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ವ್ಯಾಪಾರ ಒಪ್ಪಂದಕ್ಕೆ ಮಾತ್ರ ಸಹಿ ಹಾಕುತ್ತದೆ ಎಂದು ಪುನರುಚ್ಚರಿಸಿದ್ದರು. ಭಾರತದೊಂದಿಗೆ ನಾವು ಒಂದು ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದು ಬೇರೆಯದೇ ರೀತಿಯ ಒಪ್ಪಂದ ಆಗಿರಲಿದೆ. ನಾವು ಹೋಗಿ ಸ್ಪರ್ಧಿಸಲು ಸಾಧ್ಯವಾಗುವಂತಹ ಒಪ್ಪಂದ ಇದಾಗಲಿದೆ. ಸದ್ಯಕ್ಕೆ ಭಾರತ ಯಾರನ್ನೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಆದರೆ ಇನ್ನು ಮುಂದೆ ಭಾರತ ಅದನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತ ಒಪ್ಪಿದರೆ, ನಾವು ಕಡಿಮೆ ತೆರಿಗೆಗಳೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತೇವೆ, ಎಂದು ಟ್ರಂಪ್‌ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Donald Trump: ಬೆದರಿಕೆ ಹಾಕಿದ್ರೆ ಭಯ ಇಲ್ಲ; ಡೊನಾಲ್ಡ್ ಟ್ರಂಪ್‌ಗೆ ಬಹಿರಂಗ ಸವಾಲ್‌ ಹಾಕಿದ ಭಾರತೀಯ ಮೂಲದ ಮಮ್ದಾನಿ

ಈ ಹಿಂದೆ ಟ್ರಂಪ್‌, ಭಾರತದ ಉತ್ಪನ್ನಗಳ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋದರು. ಅವರು ನನ್ನ ಉತ್ತಮ ಸ್ನೇಹಿತ, ಆದರೆ ನಾನು ಅವರಿಗೆ ನೀವು ನನ್ನ ಸ್ನೇಹಿತ, ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಭಾರತವು ನಮಗೆ ಶೇ. 52 ರಷ್ಟು ವಿಧಿಸುತ್ತದೆ, ಆದ್ದರಿಂದ ನಾವು ಅವರಿಗೆ ಅದರಲ್ಲಿ ಅರ್ಧದಷ್ಟು - 26 ರಷ್ಟು ವಿಧಿಸುತ್ತೇವೆ ಎಂದು ಹೇಳಿದ್ದರು.