ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ಮುಂಬೈ ದಾಳಿ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದನಂತೆ ರಾಣಾ

Tahawwur Rana: ಮುಂಬೈ ಮೇಲೆ ದಾಳಿ ಮಾಡಿದ್ದ ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ)ದ ಭಯೋತ್ಪಾದಕರಿಗೆ ಪಾಕಿಸ್ತಾನದ ಅತ್ಯುನ್ನತ ಗೌರವವಾದ 'ನಿಶಾನ್-ಎ-ಹೈದರ್' ನೀಡಬೇಕೆಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್‌ ರಾಣಾ ಬಯಸಿದ್ದರು ಎಂದು ಅಮೆರಿಕ ನ್ಯಾಯ ಇಲಾಖೆ ಹೇಳಿದೆ.

ಮುಂಬೈ ದಾಳಿ ಉಗ್ರರಿಗೆ 'ನಿಶಾನ್-ಎ-ಹೈದರ್' ನೀಡಿ ಎಂದಿದ್ದ ರಾಣಾ

ನವದೆಹಲಿ: ಮುಂಬೈ ಉಗ್ರ ದಾಳಿ (Mumbai attack) ಮಾಡಿದ್ದ ಲಷ್ಕರ್-ಎ-ತಯ್ಯಿಬಾ (LET)ದ ಭಯೋತ್ಪಾದಕರಿಗೆ (Terror attack) ಪಾಕಿಸ್ತಾನದ (pakistan) ಅತ್ಯುನ್ನತ ಗೌರವವಾದ 'ನಿಶಾನ್-ಎ-ಹೈದರ್' (Nishan-e-Haider) ನೀಡಬೇಕೆಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್‌ ರಾಣಾ ಬಯಸಿದ್ದರು ಎಂದು ಅಮೆರಿಕ ನ್ಯಾಯ ಇಲಾಖೆ ಹೇಳಿದೆ. ಪ್ರಸ್ತುತ ಭಾರತದ ವಶದಲ್ಲಿರುವ ರಾಣಾ 2008ರ ನವೆಂಬರ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಒಂಬತ್ತು ಲಷ್ಕರ್ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ನೀಡಬೇಕು ಎಂದು ಅಮೆರಿಕದಲ್ಲಿ ವಿಚಾರಣೆ ವೇಳೆ ಹೇಳಿರುವುದು ದಾಖಲಾಗಿದೆ.

ಮುಂಬೈ ದಾಳಿಯ ಪ್ರಮುಖ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಮತ್ತು ರಾಣಾ ನಡುವಿನ ಸಂಭಾಷಣೆಯ ಆಡಿಯೋವನ್ನು ಪಡೆದಿರುವ ಅಮೆರಿಕ ಇದನ್ನು ದಾಖಲಿಸಿಕೊಂಡಿದೆ. ಈ ಸಂಭಾಷಣೆಯಲ್ಲಿ, ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಒಂಬತ್ತು ಭಯೋತ್ಪಾದಕರನ್ನು ಶ್ಲಾಘಿಸಿದ್ದಾನೆ ಮತ್ತು ಅವರಿಗೆ 'ನಿಶಾನ್-ಎ-ಹೈದರ್' ಪ್ರಶಸ್ತಿ ನೀಡಬೇಕು ಎಂದು ಹೇಳಿದ್ದಾನೆ. 'ನಿಶಾನ್-ಎ-ಹೈದರ್' ಯುದ್ಧದಲ್ಲಿ ಶೌರ್ಯ ತೋರಿರುವವರಿಗೆ ನೀಡುವ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಅದು ಮಡಿದ ಸೈನಿಕರಿಗೆ ಮೀಸಲಾಗಿದೆ. ಇದಲ್ಲದೆ ಮುಂಬೈ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ 166 ಮಂದಿ ಸಾವನ್ನಪ್ಪಿದರು. ಇದರ ಬಗ್ಗೆಯೂ ಮಾತನಾಡಿರುವ ರಾಣಾ, ಭಾರತೀಯರು ಇದಕ್ಕೆ ಅರ್ಹರು ಎಂದು ಹೇಳಿರುವುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

2008ರ ಭಯೋತ್ಪಾದಕ ದಾಳಿಗಳು

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ) ಗೆ ಸಂಬಂಧಿಸಿದ ಹತ್ತು ಭಯೋತ್ಪಾದಕರು ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ 2008ರ ನವೆಂಬರ್ 26ರಿಂದ 29ರವರೆಗೆ ನಗರದಲ್ಲಿ 12 ದಾಳಿಗಳನ್ನು ನಡೆಸಿದ್ದರು. ಇದರಲ್ಲಿ ರೈಲು ನಿಲ್ದಾಣದ ಮೇಲೆ ಬಂದೂಕುಗಳಿಂದ ಗುಂಡು ಹಾರಿಸುವುದು, ಗ್ರೆನೇಡ್ ಎಸೆಯುವುದು, ಎರಡು ರೆಸ್ಟೋರೆಂಟ್‌ಗಳಲ್ಲಿ ಜನರ ಮೇಲೆ ಗುಂಡು ಹಾರಿಸುವುದು, ಮುಂಬೈ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ಜನರ ಮೇಲೆ ದಾಳಿ ಮತ್ತು ಯಹೂದಿ ಸಮುದಾಯ ಕೇಂದ್ರದಲ್ಲಿ ಜನರ ಮೇಲೆ ದಾಳಿ ಸೇರಿವೆ.

ಇದನ್ನೂ ಓದಿ: Tahawwur Rana: ಭಾರತಕ್ಕೆ ರಾಣಾನನ್ನು ಹಸ್ತಾಂತರ ಮಾಡ್ತಿರೋ ಫೊಟೋ ರಿಲೀಸ್‌

ಈ ದಾಳಿಗಳಲ್ಲಿ 166 ಮಂದಿ ಸಾವನ್ನಪ್ಪಿದ್ದು, ಮುಂಬೈ ನಗರದಲ್ಲಿ 1.5 ಕೋಟಿ ರೂ. ಗಿಂತಲೂ ಹೆಚ್ಚು ಮೌಲ್ಯದ ಆಸ್ತಿ ನಷ್ಟ ಉಂಟು ಮಾಡಿತ್ತು. 10 ಭಯೋತ್ಪಾದಕರಲ್ಲಿ, ಅಜ್ಮಲ್ ಕಸಬ್ ಹೊರತುಪಡಿಸಿ ಒಂಬತ್ತು ಭಯೋತ್ಪಾದಕರನ್ನು ದಾಳಿಯ ವೇಳೆ ಕೊಲ್ಲಲಾಗಿತ್ತು.ಕಸಬ್ ನನ್ನು 2012 ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು.

ತಹವ್ವೂರ್ ರಾಣಾ ಎನ್‌ಐಎ ವಶದಲ್ಲಿ

ಕೆನಡಾದ ಪ್ರಜೆ ಮತ್ತು ಪಾಕಿಸ್ತಾನದ ಮೂಲದ ತಹಾವ್ವುರ್‌ ರಾಣಾ ಈಗ 18 ದಿನಗಳ ಕಾಲ ಭಯೋತ್ಪಾದನಾ ನಿಗ್ರಹ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಯ ವಶದಲ್ಲಿದ್ದಾನೆ. ಗುರುವಾರ ಆತನನ್ನು ಭಾರತಕ್ಕೆ ಕರೆತರಲಾಗಿದೆ. ಅದೇ ದಿನ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 20 ದಿನಗಳ ಕಸ್ಟಡಿಗೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯವು ಸಂಸ್ಥೆಗೆ ರಾಣಾನನ್ನು 18 ದಿನಗಳ ಕಸ್ಟಡಿಗೆ ಒಪ್ಪಿಸಿದೆ.