Ranveer Allahbadia : ಸಭ್ಯತೆ ಕಾಪಾಡಿಕೊಳ್ಳಿ' ಷರತ್ತು ವಿಧಿಸಿ ರಣವೀರ್ ಅಲಹಬಾದಿಯಾ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್
ಡಿಜಿಟಲ್ ಕಾರ್ಯಕ್ರಮವೊಂದರಲ್ಲಿ ಅಶ್ಲೀಲ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ರಣವೀರ್ ಅಲಹಬಾದಿಯಾ ಅವರ ಪಾಡ್‌ಕ್ಯಾಸ್ಟ್ ' ದಿ ರಣವೀರ್ ಶೋ ಪ್ರಸಾರವನ್ನು ಪುನರಾರಂಭಿಸಲು ಸೋಮವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಡಿಜಿಟಲ್ ಕಂಟೆಂಟ್‌ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ಕೆಲ ಅಂಶವನ್ನು ಪರಿಗಣಿಸಲು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ರಣವೀರ್ ಅಲಹಬಾದಿಯಾ

ನವದೆಹಲಿ: ಡಿಜಿಟಲ್ ಕಾರ್ಯಕ್ರಮವೊಂದರಲ್ಲಿ ಅಶ್ಲೀಲ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ರಣವೀರ್ ಅಲಹಬಾದಿಯಾ (Ranveer Allahbadia) ಅವರ ಪಾಡ್‌ಕ್ಯಾಸ್ಟ್ ' ದಿ ರಣವೀರ್ ಶೋ ' (The Ranveer Show) ಪ್ರಸಾರವನ್ನು ಪುನರಾರಂಭಿಸಲು ಸೋಮವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ಅಸಭ್ಯ ಕಾಮೆಂಟ್‌ನ ವಿವಾದದ ನಂತರ ಡಿಜಿಟಲ್ ಕಂಟೆಂಟ್‌ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ಕೆಲ ಅಂಶವನ್ನು ಪರಿಗಣಿಸಲು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನೈತಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮತೋಲನದಲ್ಲಿರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ಯಾವುದೇ ಶೋ ಚಿತ್ರೀಕರಿಸಲು ನಿರ್ಬಂಧಿಸಿದ್ದ 31 ವರ್ಷದ ಅಲಹಬಾದಿಯಾ ಅವರು ಈಗ ತಮ್ಮ ದಿ ರಣವೀರ್ ಶೋ ಪುನರಾರಂಭಿಸಲು ಅನುಮತಿ ಪಡೆದಿದ್ದಾರೆ. ಆದರೆ, ಅವರ ಕಾರ್ಯಕ್ರಮಗಳು ಎಲ್ಲ ವಯೋಮಾನದ ಪ್ರೇಕ್ಷಕರು ನೋಡಬಹುದಾದ ಮಟ್ಟದ ನೈತಿಕ ಮಾನದಂಡಗಳನ್ನು ಪಾಲಿಸುವಂತೆ ಭರವಸೆ ನೀಡಬೇಕೆಂದು ಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ತಿಂಗಳು India’s Got Latent ರೋಸ್ಟ್ ಶೋನಲ್ಲಿ ಅಸಭ್ಯ ಮಾತು ಅಡಿದ ಕಾರಣಕ್ಕೆ ಭಾರೀ ವಿವಾದ ಸೃಷ್ಟಿಸಿದ್ದರು. ಕಾಮಿಡಿಯನ್ ಸಮಯ್ ರೈನಾ ನಡೆಸುತ್ತಿದ್ದ ಈ ಕಾರ್ಯಕ್ರಮದಲ್ಲಿ, ಅಲಹಬಾದಿಯಾ ಸ್ಪರ್ಧಿಯೊಬ್ಬರನ್ನು ಉದ್ದೇಶಿಸಿ, ನೀನು ಪ್ರತಿದಿನ ಪೋಷಕರ ಸೆಕ್ಸ್‌ಅನ್ನು ನೋಡಲು ಇಷ್ಟಪಡುತ್ತೀಯಾ ಅಥವಾ ಒಮ್ಮೆ ಅವರ ಜೊತೆ ಸೆಕ್ಸ್‌ನಲ್ಲಿ ಪಾಲ್ಗೊಂಡು ಶಾಶ್ವತವಾಗಿ ನಿಲ್ಲಿಸಲು ಇಷ್ಟಪಡ್ತೀಯಾ' ಎಂದು ಅಶ್ಲೀಲತೆಯ ಪ್ರಶ್ನೆಯನ್ನು ಕೇಳಿದ್ದರು. ಅದು ಬಾರಿ ವಿವಾದವನ್ನು ಹುಟ್ಟುಹಾಕಿತ್ತು.
ಘಟನೆಯ ಬಳಿಕ ರಣವೀರ್ ಅಲಹಬಾದಿಯಾ, ಸಮಯ್ ರೈನಾ ಮತ್ತು ಶೋಗೆ ಸಂಬಂಧಿಸಿದ ಇತರರ ವಿರುದ್ಧ ಹಲವು ಪೊಲೀಸ್ ದೂರುಗಳು ದಾಖಲಾಗಿದ್ದವು. ವಿವಾದದ ಬೆನ್ನಲ್ಲೇ, ಅಲಹಬಾದಿಯಾ ತಮ್ಮ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನನ್ನ ಹೇಳಿಕೆ ಅಸಭ್ಯವಾಗಿತ್ತು, ಮತ್ತು ಅದು ತಮಾಷೆಯೂ ಅಲ್ಲ. ಕಾಮಿಡಿ ನನ್ನ ಶಕ್ತಿ ಕ್ಷೇತ್ರವಲ್ಲ. ನಾನು ನಿಮ್ಮೆಲ್ಲರ ಬಳಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Ranveer Allahbadia: ನನ್ನ ಅಮ್ಮನ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ: ಯೂಟ್ಯೂಬರ್ ರಣವೀರ್ ಶಾಕಿಂಗ್ ಹೇಳಿಕೆ!
ಪ್ರಕರಣದ ಬಗ್ಗೆ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಮಾಜದ ಮೌಲ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಮನಸ್ಸಿನ ಕೊಳಕನ್ನು ಶೋದಲ್ಲಿ ಪ್ರಸ್ತುತ ಪಡಿಸಲಾಗಿದೆ. ಸಮಾಜಕ್ಕೆ ಕೆಲವು ಸ್ವಯಂ-ವಿಕಸಿತ ಮೌಲ್ಯಗಳಿವೆ. ನೀವು ಅವುಗಳನ್ನು ಗೌರವಿಸಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ, ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಯಾರಿಗೂ ಏನು ಬೇಕಾದರೂ ಮಾತನಾಡಲು ಪರವಾನಗಿ ಇಲ್ಲ. ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದು ಅಶ್ಲೀಲವಲ್ಲದಿದ್ದರೆ ಮತ್ತೇನು? ನಾವು ನಿಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ಏಕೆ ರದ್ದುಗೊಳಿಸಬೇಕು? ಎಂದು ಸುಪ್ರೀಂ ಕೋರ್ಟ್ ಅಲಹಬಾದಿಯಾಗೆ ಜಾಡಿಸಿತ್ತು.