Reserve Bank Of India: ಆರ್‌ಬಿಐ ಹೊಸ ನಿಯಮ ಜಾರಿ, ATM ಬಳಕೆ ಶುಲ್ಕ ಹೆಚ್ಚಳ ಮೇ 1 ರಿಂದ ಜಾರಿ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ATM ಟ್ರಾನ್ಸಾಕ್ಷನ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ATM ಟ್ರಾನ್ಸಾಕ್ಷನ್ ಚಾರ್ಜ್ ಹೆಚ್ಚಳಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ. ಪರಿಷ್ಕೃತ ಹೊಸ ನಿಯಮ ಮೇ 1 ರಿಂದ ಜಾರಿಗೆ ಬರಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ATM ಟ್ರಾನ್ಸಾಕ್ಷನ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ATM ಟ್ರಾನ್ಸಾಕ್ಷನ್ ಚಾರ್ಜ್ ಹೆಚ್ಚಳಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ. ಪರಿಷ್ಕೃತ ಹೊಸ ನಿಯಮ ಮೇ 1 ರಿಂದ ಜಾರಿಗೆ ಬರಲಿದೆ. ಎಟಿಎಂ ಶುಲ್ಕ ಹಣಕಾಸು ವಹಿವಾಟುಗಳಿಗೆ 2 ರೂ, ಹಣಕಾಸೇತರ ವಹಿವಾಟುಗಳಿಗೆ 1 ರೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಗ್ರಾಹಕರಿಗೆ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳ ಮೇಲೆ ಪರಿಣಾಮ ಬೀರುತ್ತದೆ.
ಆರ್‌ಬಿಐ ಕೂಡ ಹಣಕಾಸಿನ ವಹಿವಾಟುಗಳ ಶುಲ್ಕವನ್ನು 2 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದ್ದರಿಂದ ಇನ್ನು ಮುಂದೆ 17 ರೂ. ನಿಂದ 19 ರೂ. ಗೆ ಹೆಚ್ಚಾಗಲಿದೆ. ಲೆನ್ಸ್ ವಿಚಾರಣೆಯಂತಹ ಇತರ ಹಣಕಾಸುಯೇತರ ವಹಿವಾಟುಗಳು ಸಹ 1 ರೂಪಾಯಿ ಹೆಚ್ಚಾಗಲಿದ್ದು, ಅವುಗಳನ್ನು 6 ರೂಪಾಯಿಗಳ ಬದಲಿಗೆ 7 ರೂಪಾಯಿಗಳನ್ನಾಗಿ ಮಾಡಲಾಗುತ್ತದೆ. ಈ ಎಟಿಎಂ ಶುಲ್ಕ ಬದಲಾವಣೆಗಳನ್ನು ಕೊನೆಯದಾಗಿ ಜೂನ್ 2021 ರಲ್ಲಿ ನವೀಕರಿಸಲಾಗಿತ್ತು. ಇಂಟರ್‌ಚೇಂಜ್ ಶುಲ್ಕ ಎಂದರೆ ಗ್ರಾಹಕರು ತಮ್ಮ ಹೋಮ್ ಬ್ಯಾಂಕ್‌ಗೆ ಸಂಪರ್ಕ ಹೊಂದಿಲ್ಲದ ಎಟಿಎಂ ಅನ್ನು ಬಳಸಿದ ನಂತರ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕ. ವಿವಿಧ ಬ್ಯಾಂಕ್‌ಗಳಿಗೆ ನಿರ್ದಿಷ್ಟ ಕಾರ್ಡ್ ಹೊಂದಿರುವವರಿಗೆ ಸೇವೆಯನ್ನು ಒದಗಿಸುವಲ್ಲಿ ಎಟಿಎಂ ಹೊಂದಿರುವ ಬ್ಯಾಂಕ್‌ಗೆ ಸಂಬಂಧಿಸಿದ ವೆಚ್ಚವನ್ನು ಇದು ಒಳಗೊಳ್ಳುತ್ತದೆ.
ವಿವಿಧ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಗ್ರಾಹಕರಿಗೆ ತಿಂಗಳಿಗೆ ಸೀಮಿತ ಸಂಖ್ಯೆಯ ಉಚಿತ ವಹಿವಾಟುಗಳನ್ನು ಅನುಮತಿಸಲಾಗಿದೆ. ನಗರ ಪ್ರದೇಶಗಳಲ್ಲಿ, ಗ್ರಾಹಕರಿಗೆ 5 ವಹಿವಾಟುಗಳನ್ನು ನೀಡಲಾಗುತ್ತದೆ ಮತ್ತು ನಗರೇತರ ಪ್ರದೇಶಗಳಿಗೆ 3 ವಹಿವಾಟುಗಳನ್ನು ನೀಡಲಾಗುತ್ತದೆ. ಉಚಿತ ವಹಿವಾಟುಗಳ ಸಂಖ್ಯೆ ಮೀರಿದರೆ, ಈಗಾಗಲೇ ಹೆಚ್ಚಿನ ಇಂಟರ್‌ಚೇಂಜ್ ಶುಲ್ಕಗಳಿರುವುದರಿಂದ ಗ್ರಾಹಕರು ಪಾವತಿಸಬೇಕಾದ ಹೆಚ್ಚುವರಿ ಶುಲ್ಕಗಳು ಹೆಚ್ಚಾಗಬಹುದು. ಅಧಿಕ ಶುಲ್ಕದಿಂದ ತಪ್ಪಿಸಿಕೊಳ್ಳಲು ಹೋಮ್ ಬ್ಯಾಂಕ್ ಎಟಿಎಂಗಳನ್ನು ಬಳಸಿಕೊಳ್ಳಬಹುದು. ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಬಹುದು.
ಮತ್ತೊಂದು ಪ್ರಮುಖ ನೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC), ವಾಣಿಜ್ಯ ಬ್ಯಾಂಕುಗಳಿಗೆ ಆರ್ ಬಿಐ ನೀಡುವ ಸಾಲದ ದರವಾದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದೆ. ಇದರಿಂದ ರೆಪೊ ದರ ಈಗ ಶೇಕಡಾ 6.25ಕ್ಕೆ ಇಳಿದಿದೆ.
ಈ ಸುದ್ದಿಯನ್ನೂ ಓದಿ: RBI: ನಿಮ್ಮ ಸಾಲದ ಬಡ್ಡಿ ಇಳಿಕೆ ? RBI ರೇಟ್ ಕಟ್ ಆದ್ರೆ ನೀವೇನು ಮಾಡಬೇಕು ಗೊತ್ತಾ?
ಕಳೆದ 5 ವರ್ಷಗಳಲ್ಲಿ ಇದು ಮೊದಲ ಬಾರಿಗೆ ಆರ್ ಬಿಐ ರೆಪೊ ದರ ಕಡಿತ ಮಾಡಿದೆ. ಕಳೆದ ಎರಡು ವರ್ಷಗಳ ಕಾಲ ರೆಪೊ ದರವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿತ್ತು. ಆರ್ ಬಿಐ ರೆಪೊ ದರವನ್ನು ಕಡಿತಗೊಳಿಸಿದ್ದು 2020ರ ಮೇ ತಿಂಗಳಲ್ಲಿ.