ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) 100ನೇ ವಾರ್ಷಿಕೋತ್ಸವವನ್ನು ಗುರುತಿಸಲು ಭಾರತ ಸರ್ಕಾರ ನಾಣ್ಯ ಮತ್ತು ಅಂಚೆಚೀಟಿಗಳನ್ನು (Special coin, postage stamp) ಬಿಡುಗಡೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಶುಕ್ರವಾರ ತಿಳಿಸಿದ್ದಾರೆ. ಆರ್‌ಎಸ್‌ಎಸ್‌ನ ಸೇವೆ, ಏಕತೆ ಮತ್ತು ಸಮರ್ಪಣೆಯ ಶತಮಾನೋತ್ಸವದ ಗೌರವಾರ್ಥವಾಗಿ ಈ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿರುವುದಾಗಿ ಹಣಕಾಸು ಸಚಿವರ ಕಚೇರಿ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ (X) ಮಾಹಿತಿ ಹಂಚಿಕೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯ 100 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಸೇವೆ, ಏಕತೆ ಮತ್ತು ಸಮರ್ಪಣೆಯ ಶತಮಾನದ ಸ್ಮರಣಾರ್ಥ ವಿಶೇಷ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವರ ಕಚೇರಿ ಎಕ್ಸ್ ನಲ್ಲಿ ತಿಳಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯ 100 ವರ್ಷಗಳ ವಿಶೇಷ ನಾಣ್ಯಗಳನ್ನು ಕೋಲ್ಕತ್ತಾ ಮಿಂಟ್ ವೆಬ್ ಸೈಟ್ https://www.indiagovtmint.in/product-category/kolkata-mint/ ಮೂಲಕ ಆರ್ಡರ್ ಮಾಡಿಕೊಳ್ಳಬಹುದು. ವಿಶೇಷ ಅಂಚೆಚೀಟಿಗಳು ಭಾರತದಾದ್ಯಂತ ಫಿಲಾಟೆಲಿ ಬ್ಯೂರೋಗಳಲ್ಲಿ ಲಭ್ಯವಿದೆ ಎಂದು ಹಣಕಾಸು ಸಚಿವರ ಕಚೇರಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯ 100 ವರ್ಷಗಳ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದರು. ಬಳಿಕ ಮಾತನಾಡಿದ ಅವರು, ಇದು ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಆರ್‌ಎಸ್‌ಎಸ್‌ನ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ ಎಂದರು. ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ದೀರ್ಘಕಾಲದ ಬದ್ಧತೆಗಾಗಿ ಶ್ಲಾಘಿಸಿದ ಮೋದಿ, ಆರ್‌ಎಸ್‌ಎಸ್ ವರ್ಷಗಳಲ್ಲಿ ಅಸಂಖ್ಯಾತ ಜೀವಗಳನ್ನು ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.
ನೂರಾರು ಜೀವಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹರಿವಿನಲ್ಲಿ ಅರಳಿವೆ ಮತ್ತು ಅಭಿವೃದ್ಧಿ ಹೊಂದಿವೆ. ಅದರ ರಚನೆಯ ಅನಂತರ ಅದು ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಅನುಸರಿಸುತ್ತಿದೆ ಎಂದರು.
ಇದನ್ನೂ ಓದಿ: Spy for Pakistan: ಪಾಕ್ ಮಹಿಳೆಯಿಂದ ಹನಿ ಟ್ರ್ಯಾಪ್; ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಂಧನ
100 ವರ್ಷಗಳ ಹಿಂದೆ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿರುವುದು ಕಾಕತಾಳೀಯವಲ್ಲ. ಇದು ದುಷ್ಟತನದ ಮೇಲೆ ಒಳ್ಳೆಯದರ ವಿಜಯ, ಸುಳ್ಳಿನ ಮೇಲೆ ಸತ್ಯದ ವಿಜಯ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತ ಎಂದರು. ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ಇದು ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.