ಹಿಂದೂ ಧರ್ಮವನ್ನು ಕಾಪಾಡುವಲ್ಲಿ RSS ಪಾತ್ರ ಮಹತ್ವದ್ದು; ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು
ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಬಿಜೆಪಿಯ ಯಶಸ್ಸಿಗೆ ಸಂಘದ ಶಿಸ್ತು ಮತ್ತು ಸಂಘಟನಾ ಶಕ್ತಿಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ -
ನಾಗ್ಪುರ: ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದ್ದಾರೆ. ರೇಷ್ಮಿಬಾಗ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಉತ್ಸವ ಹಾಗೂ ಶಸ್ತ್ರ ಪೂಜೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
"ಬಿಜೆಪಿಯ ಯಶಸ್ಸಿಗೆ ಸಂಘದ ಶಿಸ್ತು ಮತ್ತು ಸಂಘಟನಾ ಶಕ್ತಿಯೇ ಕಾರಣ. ಹಿಂದೂ ಧರ್ಮವನ್ನು ಜೀವಂತವಾಗಿರಸಲು ಸಂಘವು ನಿರ್ಣಾಯಕ ಪಾತ್ರ ವಹಿಸಿದೆ. ಆ ನಿರಂತರ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಪ್ರಯತ್ನವಿಲ್ಲದಿದ್ದರೆ, ಧರ್ಮವು ಇನ್ನೂ ಹೆಚ್ಚಿನ ಸವೆತವನ್ನು ಎದುರಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ 101ನೇ ವರ್ಷದ ಸಂಸ್ಥಾಪನಾ ದಿನ ಹಾಗೂ ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ಪ್ರಸ್ತಾಪಿಸಿದ ಸಂತ ರವಿದಾಸ್ ಅವರ ಸಂದೇಶಗಳ ಕುರಿತು ಅವರು ಮಾತನಾಡಿ, ವಿದೇಶಿ ಆಕ್ರಮಣಕಾರರು ದೇಶದ ಮೇಲೆ ದಾಳಿ ಮಾಡಿ, ಭಾರತೀಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಕಠಿಣ ಕಾಲದಲ್ಲಿ ಸಂತ ರವಿದಾಸ್ ಅವರು ಯಾವುದೇ ಭಯವಿಲ್ಲದೆ ಭಕ್ತಿ ಮತ್ತು 'ಸ್ವಧರ್ಮ ನಿಷ್ಠೆ'ಯನ್ನು ಜಾಗೃತಗೊಳಿಸಿದರು.
ವಿಡಿಯೋ ನೋಡಿ
#WATCH | Nagpur, Maharashtra: At RSS' Vijayadashami celebrations, RSS chief Mohan Bhagwat says, "A storm has swept in from the West to destroy all that is decent, auspicious, and rooted in cultural and human values. Even the developed nations are afflicted by this storm. See what is happening in France, Albania, Bangladesh, and Nepal. All this has been done by them. They say that a regime change will change the situation, but that has never happened; not now, not ever...India too is their target. Such attempts are being made in India as well. But due to the strong policies with which India has functioned in the last few decades under a strong leadership, and due to the new generation's sense of pride in their country and their spirit to do something for the country, their game was shut down. These demonic forces know it. So, India is on their target. They attempt to break India, Hindus and Sangh, they call it 'dismantling'. They even get help from like-minded elements; they get ambitious politicians for this. Our society is vast, and our country is still developing, so challenges persist...Protests must indeed happen, but they must be for a solution. Whether it is protesting groups, authorities enforcing law and order, or political leaders, no actions should create conflict, hatred, bitterness, or division within our united society. No matter how strong emotions run, our actions must stay within the boundaries of the Constitution, the law, and civil decorum..." (Video: RSS)
— ANI (@ANI) October 20, 2026
ಭಯದ ವಾತಾವರಣದ ನಡುವೆಯೂ ತಮ್ಮ ಸ್ವಂತ ಜೀವನದ ಉದಾಹರಣೆಗಳ ಮೂಲಕ ಇಡೀ ಹಿಂದೂ ಸಮಾಜಕ್ಕೆ ಧೈರ್ಯ ತುಂಬಿದರು ಮತ್ತು ಜನರ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಮನೋಬಲವನ್ನು ಎತ್ತಿಹಿಡಿದರು.ಸಮಾಜದಲ್ಲಿನ ಮೇಲು-ಕೀಳು ಎಂಬ ಭೇದಭಾವವನ್ನು ತೊಡೆದುಹಾಕಲು ಸಂತ ರವಿದಾಸ್ ಅವರು ನೀಡಿದ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರ ಮೂಲಕ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
‘ಹಿಂದುತ್ವದ ಹೆಸರಿನಲ್ಲಿ ಧಾರ್ಮಿಕ ವಿಭಜನೆ’;RSS, VHP ವಿರುದ್ಧ ದಿಗ್ವಿಜಯ್ ಸಿಂಗ್ ಆರೋಪ
ಒಡಿಶಾದ ವನವಾಸಿ ಸಮುದಾಯಗಳಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಭಾಗವತ್ ಉಲ್ಲೇಖಿಸಿದ್ದಾರೆ. "ಪ್ರಸ್ತುತ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಅವರು ಒಡಿಶಾದ ವನವಾಸಿ ಸಮುದಾಯಗಳ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಸ್ವಂತ ನಂಬಿಕೆಯನ್ನು ರಕ್ಷಿಸುವ ಅಗತ್ಯತೆಯ ಅರಿವನ್ನು ಅವರಲ್ಲಿ ಜಾಗೃತಗೊಳಿಸುವಾಗ ತಮ್ಮ ಜೀವನವನ್ನು ತ್ಯಾಗ ಮಾಡಿದರು ಎಂದು ಹೇಳಿದ್ದಾರೆ.