ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samay Raina: ಅಶ್ಲೀಲ ಹೇಳಿಕೆ ಪ್ರಕರಣ; ಕಾಮಿಡಿಯನ್‌ ಸಮಯ್‌ ರೈನಾಗೆ ಇನ್ನೂ ಮುಗಿಯದ ಕಾನೂನು ಸಂಕಷ್ಟ

ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರಿಗೆ ಎದುರಾದ ಕಾನೂನು ತೊಂದರೆಗಳು ಸದ್ಯಕ್ಕೆ ಕೊನೆಗೊಳ್ಳುವ ರೀತಿಯಲ್ಲಿ ಕಾಣುತ್ತಿಲ್ಲ. ಸದಾ ವಿವಾದಗಳನ್ನು ಮೈ ಮೇಲೆ ಎಳೆದು ಕೊಳ್ಳುವ ರೈನಾ ಇದೀಗ ಕುರುಡ ವ್ಯಕ್ತಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಅದು ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಕಾಮಿಡಿಯನ್‌ ಸಮಯ್‌ ರೈನಾಗೆ ಮುಗಿಯದ ಸಂಕಷ್ಟ

Profile Vishakha Bhat Apr 21, 2025 5:15 PM

ನವದೆಹಲಿ: ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ (Samay Raina) ಅವರಿಗೆ ಎದುರಾದ ಕಾನೂನು ತೊಂದರೆಗಳು ಸದ್ಯಕ್ಕೆ ಕೊನೆಗೊಳ್ಳುವ ರೀತಿಯಲ್ಲಿ ಕಾಣುತ್ತಿಲ್ಲ. ಸದಾ ವಿವಾದಗಳನ್ನು ಮೈ ಮೇಲೆ ಎಳೆದು ಕೊಳ್ಳುವ ರೈನಾ ಇದೀಗ ಕುರುಡ ವ್ಯಕ್ತಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಅದು ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಇಂಡಿಯಾಸ್‌ ಗಾಟ್ ಲೇಟೆಂಟ್‌ನಲ್ಲಿ ಭಾಗವಹಿಸಿದ್ದ ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. 'ಆರೋಪಗಳಿಂದ ನಮಗೆ ನಿಜವಾಗಿಯೂ ತೊಂದರೆಯಾಗಿದೆ. ನಾವು ಅಂತಹ ಪ್ರಕರಣಗಳನ್ನು ದಾಖಲೆಯಲ್ಲಿ ಇಡುತ್ತೇವೆ. ಸಂಬಂಧಪಟ್ಟ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುತ್ತೇವೆ. ಕ್ರಮಗಳನ್ನು ಸೂಚಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇಂಡಿಯಾಸ್ ಗಾಟ್ ಲ್ಯಾಟೆಂಟ್‌ನ ಸಂಚಿಕೆಯಲ್ಲಿ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಹಾಬಾದಿಯಾ ಮತ್ತು ಇತರರು ಮಾಡಿದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರಿಗೆ ಬಂಧನದಿಂದ ನೀಡಲಾದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಸೋಮವಾರ, ಮಹಾರಾಷ್ಟ್ರ ಪೊಲೀಸರು ಈ ವಿಷಯದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಲ್ಲಾಹಬಾಡಿಯಾ ಕುರಿತ ತನಿಖೆ ಪೂರ್ಣಗೊಂಡಿದೆಯೇ ಮತ್ತು ಮುಂದಿನ ತನಿಖೆಯ ಉದ್ದೇಶಕ್ಕಾಗಿ ಅವರು ಇನ್ನು ಮುಂದೆ ಅಗತ್ಯವಿಲ್ಲವೇ ಎಂದು ತಿಳಿಸಲು ಸುಪ್ರೀಂ ಕೋರ್ಟ್ ಅಸ್ಸಾಂ ಪೊಲೀಸರನ್ನು ಕೇಳಿದೆ. ಸುಪ್ರೀಂ ಕೋರ್ಟ್ ಪ್ರಕರಣವನ್ನು ಏಪ್ರಿಲ್ 28 ರಂದು ವಿಚಾರಣೆಗೆ ನಿಗದಿಪಡಿಸಿದೆ.

ಈ ಸುದ್ದಿಯನ್ನೂ ಓದಿ: Ranveer Allahbadia: ರಣವೀರ್‌ ಅಲಹಾಬಾದಿಯಾಗೆ ಮತ್ತೊಂದು ಹಿನ್ನಡೆ; ಪಾಸ್‌ಪೋರ್ಟ್‌ ಹಿಂದಿರುಗಿಸಲು ಸುಪ್ರೀಂಕೋರ್ಟ್‌ ನಕಾರ

ಏನಿದು ವಿವಾದ?

ರಣವೀರ್ ಅಲ್ಲಾಬಾಡಿಯಾ ಅವರು ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಮಾತನಾಡುವ ಭರದಲ್ಲಿ ಅವರು ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಮಾತಾಡಿದ್ದರು. ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ರಣವೀರ್ ಅಲ್ಲಾಬಾಡಿಯಾ, ಸಮಯ್‌ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ಮೇಲೆ ದೂರು ದಾಖಲಾಗಿತ್ತು.ಇಂಡಿಯಾಸ್ ಗಾಟ್ ಲೇಟೆಂಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಮೇಲೆ ಮಹಾರಾಷ್ಟ್ರ ಸೈಬರ್ ಇಲಾಖೆ, ಗುವಾಹಟಿ, ಜೈಪುರ ಸೇರಿದಂತೆ ಹಲವು ಕಡೆ ಎಫ್‌ಐಆರ್‌ ದಾಖಲಾಗಿದೆ.