ಶಾಟ್ ಪೂನಾವಾಲಾ ಪ್ರೈವೇಟ್ ಲಿಮಿಟೆಡ್" ಸಂಸ್ಥೆಯು ಶಾಟ್ ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ
ಶಾಟ್ ಪೂನಾವಾಲಾ ಪ್ರೈವೇಟ್ ಲಿಮಿಟೆಡ್" ಸಂಸ್ಥೆಯು ಶಾಟ್ ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಳ್ಳಲಿದೆ. ಇದು ಕಂಪನಿಯ ಪ್ರಯಾಣದಲ್ಲಿ ಒಂದು ಪ್ರಮುಖ ಹೊಸ ಅಧ್ಯಾಯವನ್ನು ಸೂಚಿಸುತ್ತದೆ ಹಾಗೂ ಜಾಗತಿಕ ಶಾಟ್ ಫಾರ್ಮಾ ಸಂಸ್ಥೆಯೊಂದಿಗಿನ ಅದರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
-
ಮುಂಬೈ: ಶಾಟ್ ಪೂನಾವಾಲಾ ಪ್ರೈವೇಟ್ ಲಿಮಿಟೆಡ್" ಸಂಸ್ಥೆಯು ಶಾಟ್ ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಳ್ಳಲಿದೆ. ಇದು ಕಂಪನಿಯ ಪ್ರಯಾಣದಲ್ಲಿ ಒಂದು ಪ್ರಮುಖ ಹೊಸ ಅಧ್ಯಾಯವನ್ನು ಸೂಚಿಸುತ್ತದೆ ಹಾಗೂ ಜಾಗತಿಕ ಶಾಟ್ ಫಾರ್ಮಾ ಸಂಸ್ಥೆಯೊಂದಿಗಿನ ಅದರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ಈ ಹೊಸ ಗುರುತು ಶಾಟ್ ಫಾರ್ಮಾದ ಜಾಗತಿಕ ಜಾಲದಲ್ಲಿ ಭಾರತದ ವ್ಯವಹಾರದ ಸ್ಥಾನವನ್ನು ಮತ್ತು ಔಷಧ ಹಾಗೂ ಬಯೋಟೆಕ್ ಉದ್ಯಮಗಳಿಗೆ ಉತ್ತಮ ಗುಣಮಟ್ಟದ ಔಷಧ ಸಂಗ್ರಹಣೆ ಮತ್ತು ವಿತರಣಾ ಪರಿಹಾರಗಳನ್ನು ಸುಧಾರಿಸುವಲ್ಲಿ ಅದರ ಪಾತ್ರ ವನ್ನು ಬಿಂಬಿಸುತ್ತದೆ. ಇದು ಭಾರತದಲ್ಲಿ ಕಂಪನಿಯ ಸದೃಢ ಉತ್ಪಾದನೆಯ ತಳಹದಿ, ದೀರ್ಘಕಾಲದ ಗ್ರಾಹಕ ಸಂಬಂಧಗಳು ಮತ್ತು ಆಳವಾದ ಮಾರುಕಟ್ಟೆ ಪರಿಣತಿಯನ್ನು ಶಾಟ್ ಫಾರ್ಮಾದ ಜಾಗತಿಕ ಸಾಮರ್ಥ್ಯಗಳು, ಆವಿಷ್ಕಾರ ಮತ್ತು ವೈಜ್ಞಾನಿಕ ಶ್ರೇಷ್ಠತೆ ಯೊಂದಿಗೆ ಒಟ್ಟುಗೂಡಿಸುತ್ತದೆ.
ಗ್ರಾಹಕರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ಇದು ಹೆಸರಿನ ಬದಲಾವಣೆಯೇ ಹೊರತು, ಬದ್ಧತೆಯ ಬದಲಾವಣೆಯಲ್ಲ. ಮಾಲೀಕತ್ವ, ನಿರ್ವಹಣೆ, ಉದ್ಯೋಗಿಗಳು, ವ್ಯವಹಾರ ತಂತ್ರ, ಕಾರ್ಯಾಚರಣೆಗಳು, ಉತ್ಪನ್ನಗಳು, ಸೇವೆಗಳು ಅಥವಾ ಪ್ರಸ್ತುತ ಇರುವ ಗ್ರಾಹಕರ ಬದ್ಧತೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇದನ್ನೂ ಓದಿ: Medical Camp: ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ; ಅಗತ್ಯವಿರುವವರಿಗೆ ಉಚಿತ ಕನ್ನಡಕ, ವಾಕಿಂಗ್ ಸ್ಟಿಕ್ ವಿತರಣೆ
ಈ ಬದಲಾವಣೆಯು ಜಾಗತಿಕ ಶಾಟ್ ಫಾರ್ಮಾ ಬ್ರ್ಯಾಂಡ್ ಗೆ ಮತ್ತಷ್ಟು ಬಲವಾದ ಮತ್ತು ಸುಸ್ಥಿರವಾದ ಸಂಪರ್ಕವನ್ನು ರೂಪಿಸುವುದರ ಜೊತೆಗೆ, ಭಾರತ ಮತ್ತು ಅಂತರ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಗ್ರಾಹಕರಿಗೆ ಶಾಟ್ ಫಾರ್ಮಾ ಇಂಡಿಯಾ ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ.
140 ಕ್ಕೂ ಹೆಚ್ಚು ವರ್ಷಗಳ ಪರಂಪರೆಯ ಆಧಾರದ ಮೇಲೆ ನಿರ್ಮಿಸಲಾದ ಈ ಹೊಸ ಗುರುತು ಕಂಪನಿಯ ಪರಂಪರೆ ಮತ್ತು ಭವಿಷ್ಯದ ಆಕಾಂಕ್ಷೆಯನ್ನು ಒಂದೇ ಜಾಗತಿಕ ಹೆಸರಿನ ಅಡಿಯಲ್ಲಿ ತರುತ್ತದೆ. ಇದು ಶಾಟ್ ಫಾರ್ಮಾವನ್ನು ನಿರಂತರವಾಗಿ ನಿರೂಪಿಸುವ ಮೌಲ್ಯಗಳಾದ ನಾವೀನ್ಯತೆ, ಗುಣಮಟ್ಟ, ವೈಜ್ಞಾನಿಕ ಶ್ರೇಷ್ಠತೆ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಶಾಟ್ ಫಾರ್ಮಾ ಇಂಡಿಯಾ ನಿರಂತರತೆ ಮತ್ತು ಪ್ರಗತಿ ಎರಡನ್ನೂ ಪ್ರತಿನಿಧಿಸುತ್ತದೆ: ಅದೇ ವಿಶ್ವಾಸಾರ್ಹ ವ್ಯವಹಾರ, ಸಾಮರ್ಥ್ಯಗಳು ಮತ್ತು ಸಂಬಂಧಗಳು, ಈಗ ನಾವು ಇಂದು ಯಾರಾಗಿದ್ದೇವೆ ಮತ್ತು ಎತ್ತ ಸಾಗುತ್ತಿದ್ದೇವೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ಪ್ರತಿಬಿಂಬಿಸುವ ಹೊಸ ಗುರುತಿನೊಂದಿಗೆ ಮೂಡಿಬಂದಿದೆ.
ಶಾಟ್ ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಯ್ ಜೋಸೆಫ್ ಅವರು, “ಶಾಟ್ ಫಾರ್ಮಾ ಇಂಡಿಯಾ ನಮ್ಮ ಪ್ರಯಾಣದ ಮುಂದಿನ ಅಧ್ಯಾಯವನ್ನು ಪ್ರತಿನಿಧಿಸುತ್ತದೆ, ಇದು ಭಾರತದಲ್ಲಿನ ನಮ್ಮ ಶಕ್ತಿಯನ್ನು ಶಾಟ್ ಫಾರ್ಮಾದ ಜಾಗತಿಕ ಆವಿಷ್ಕಾರ ಮತ್ತು ಪರಿಣತಿಯೊಂದಿಗೆ ಸಂಯೋಜಿಸುತ್ತದೆ.
ನಮ್ಮ ಸಾಮರ್ಥ್ಯಗಳನ್ನು ಇನ್ನಷ್ಟು ಬಲಪಡಿಸಲು, ಔಷಧ ಮತ್ತು ಬಯೋಟೆಕ್ನಾಲಜಿ ಪಾಲುದಾರ ರೊಂದಿಗೆ ಸಹಯೋಗವನ್ನು ಆಳವಾಗಿಸಲು ಮತ್ತು ಔಷಧ ಸಂಗ್ರಹಣೆ ಹಾಗೂ ವಿತರಣಾ ಪರಿಹಾರಗಳನ್ನು ಮುನ್ನಡೆಸಲು ನಮಗೆ ಉತ್ತಮ ಅವಕಾಶಗಳಿವೆ. ನಾವು ಮುನ್ನಡೆಯು ತ್ತಿರುವಂತೆ, ನಮ್ಮ ಗ್ರಾಹಕರೊಂದಿಗೆ ಬೆಳೆಯುವುದು ಮತ್ತು ವಿಶ್ವಾದ್ಯಂತ ರೋಗಿಗಳಿಗೆ ಪ್ರಮುಖ ಚಿಕಿತ್ಸೆಗಳನ್ನು ಸುರಕ್ಷಿತವಾಗಿ ಹಾಗೂ ಪರಿಣಾಮ ಕಾರಿಯಾಗಿ ತಲುಪಿಸಲು ಕೊಡುಗೆ ನೀಡುವುದರ ಮೇಲೆ ನಮ್ಮ ಗಮನ ಮುಂದುವರಿಯು ತ್ತದೆ” ಎಂದರು.
ಶಾಟ್ ಫಾರ್ಮಾ ಇಂಡಿಯಾದ ಪ್ರಮುಖ ಶೇರುದಾರ ಸಂಸ್ಥೆ ಶಾಟ್ ಫಾರ್ಮಾ ಎಜಿ ಅಂಡ್ ಕೊ. ಕೆಜಿಎಎ ಸಿಇಒ ಡಾ. ಕ್ರಿಸ್ಟಿಯನ್ ಮಿಯಾಸ್, “ರೋಗಿಗಳ ಆರೈಕೆಯಲ್ಲಿ ಶಾಟ್ ಫಾರ್ಮಾ ಇಂಡಿಯಾ ನಿರ್ಣಾಯಕ ಪಾತ್ರ ವಹಿಸುತ್ತದೆ. ವರ್ಷಕ್ಕೆ 3 ಬಿಲಿಯನ್ ಗೂ ಹೆಚ್ಚು ಕಂಟೈನರ್ ಗಳನ್ನು ಉತ್ಪಾದಿಸುವ ಮೂಲಕ, ಈ ಕಂಪನಿಯು ಪ್ರತಿ ನಿಮಿಷಕ್ಕೆ ಸುಮಾರು 7,000 ಇಂಜೆಕ್ಷನ್ ಗಳು ರೋಗಿಗಳನ್ನು ತಲುಪಲು ನೆರವಾಗುತ್ತದೆ” ಎಂದು ಹೇಳಿದರು. “ಶಾಟ್ ಪೂನಾವಾಲಾದಿಂದ ಶಾಟ್ ಫಾರ್ಮಾ ಇಂಡಿಯಾಗೆ ಹೆಸರನ್ನು ಬದಲಾಯಿಸಿರು ವುದು ನಮ್ಮ ಕಾರ್ಯತಂತ್ರೀಯ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಪ್ರಮುಖ ಔಷಧ ಕೇಂದ್ರವಾಗಿ ಭಾರತಕ್ಕೆ ನಮ್ಮ ದೀರ್ಘಕಾಲದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ” ಎಂದರು.
ಈ ಹೊಸ ಗುರುತು ಭಾರತದಲ್ಲಿ ಕಂಪನಿಯ ಬಲವಾದ ತಳಹದಿಯನ್ನು ಆಧರಿಸಿ ರೂಪು ಗೊಂಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಇದರ ಫಾರ್ಮಾಸ್ಯುಟಿಕಲ್ ವೈಯಲ್ಗಳು ವಿಶ್ವಾದ್ಯಂತ 4.3 ಬಿಲಿಯನ್ ಮೀರಿ ಲಸಿಕೆ ಡೋಸ್ ಗಳಿಗೆ ಸಹಾಯ ಮಾಡಿವೆ; ಇದರಲ್ಲಿ ಭಾರತದಲ್ಲೇ 3 ಶತಕೋಟಿ ಡೋಸ್ ಗಳು ಸೇರಿವೆ. ಗ್ಲಾಸ್ ಪ್ರಿ-ಫಿಲ್ ಮಾಡಬಹುದಾದ ಸಿರಿಂಜ್ಗಳು ಮತ್ತು ಸ್ಟೆರೈಲ್ ಫಾರ್ಮ್ಯಾಟ್ ಗಳ ಭಾರತದ ಏಕೈಕ ತಯಾರಕರಾಗಿ, ಈ ಕಂಪನಿಯು ಸ್ಥಳೀಯ ಪೂರೈಕೆ ಸಾಮರ್ಥ್ಯಗಳನ್ನು ಸಹ ಬಲಪಡಿಸುತ್ತದೆ.
ಅಷ್ಟೇ ಅಲ್ಲದೆ, ಪ್ರಿ-ಫಿಲ್ ಮಾಡಬಹುದಾದ ಸಿರಿಂಜ್ಗಳು ಮತ್ತು ಕಾರ್ಟ್ರಿಜ್ ಗಳ ತಯಾರಿಕಾ ಸಾಮರ್ಥ್ಯದ ವಿಸ್ತರಣೆಗೆ ಕಂಪನಿಯು ಗಮನಾರ್ಹ ಹೂಡಿಕೆಯನ್ನು ಮುಂದುವರಿಸಿದೆ. ಇದು ಬಯೋಲಾಜಿಕ್ಸ್, ಬಯೋಸಿಮಿಲರ್ಸ್ ಜಿ.ಎಲ್.ಪಿ-1 ಆಧಾರಿತ ಚಿಕಿತ್ಸೆಗಳು ಮತ್ತು ಇತರ ಸುಧಾರಿತ ಇಂಜೆಕ್ಟಬಲ್ ಥೆರಪಿಗಳ ವೇಗವಾಗಿ ಬದಲಾಗುತ್ತಿರುವ ಅಗತ್ಯಗಳನ್ನು ಬೆಂಬಲಿಸುವ ಕಂಪನಿಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಮುಂದಿನ ದಿನಗಳಲ್ಲಿ, ಶಾಟ್ ಫಾರ್ಮಾ ಇಂಡಿಯಾ ಫಾರ್ಮಾಸ್ಯುಟಿಕಲ್ ಔಷಧ ಸಂಗ್ರಹಣೆ ಮತ್ತು ಔಷಧ ವಿತರಣಾ ಪರಿಹಾರಗಳಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುವುದು, ಗ್ರಾಹಕ ರೊಂದಿಗೆ ನಿಕಟ ಸಹಯೋಗದ ಮೂಲಕ ಆವಿಷ್ಕಾರಕ್ಕೆ ಚಾಲನೆ ನೀಡುವುದು, ಮತ್ತು ಕಾರ್ಯಾ ಚರಣೆಯ ಶ್ರೇಷ್ಠತೆ ಹಾಗೂ ಸುಸ್ಥಿರತೆಯನ್ನು ಬಲಪಡಿಸುವುದರ ಮೇಲೆ ಗಮನ ಹರಿಸಲಿದೆ. ಜಾಗತಿಕ ಫಾರ್ಮಾಸ್ಯುಟಿಕಲ್ ಮೌಲ್ಯ ಸರಪಳಿಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರಕ್ಕೆ ಕೊಡುಗೆ ನೀಡುವ ಜೊತೆಗೆ, ಫಾರ್ಮಾಸ್ಯುಟಿಕಲ್ ಮತ್ತು ಬಯೋಟೆಕ್ನಾಲಜಿ ಕಂಪನಿಗಳ ಬದಲಾಗುತ್ತಿರುವ ಅಗತ್ಯಗಳಿಗೆ ಸ್ಪಂದಿಸಲು ಈ ಆದ್ಯತೆಗಳು ಕಂಪನಿಗೆ ನೆರವಾಗಲಿವೆ.