WPL 2027: ಆರ್ಸಿಬಿಗೆ ಕನ್ನಡತಿ ಸೇರ್ಪಡೆ, ಮಿನಿ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ನಾಲ್ವರು ಆಟಗಾರ್ತಿಯರು!
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ವರು ಹೊಸ ಆಟಗಾರ್ತಿಯರನ್ನು ಖರೀದಿಸಿದೆ. ಜೆಸ್ ಜೊನಾಸನ್, ಕ್ಲೋಯ್ ಟ್ರೈಯಾನ್, ತೇಜಲ್ ಹಸಬ್ನಿಸ್ ಹಾಗೂ ವೃಂದಾ ದಿನೇಶ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹೊಸ ಸೇರ್ಪಡೆಗಳೊಂದಿಗೆ ಹಾಲಿ ಚಾಂಪಿಯನ್ ಆರ್ಸಿಬಿ ಮುಂಬರುವ ಆವೃತ್ತಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿದೆ.
ಆರ್ಸಿಬಿಗೆ ನಾಲ್ವರು ಆಟಗಾರ್ತಿಯರ ಸೇರ್ಪಡೆ, ಕನ್ನಡತಿಗೆ ಚಾನ್ಸ್! -
ನವದೆಹಲಿ: ಮುಂಬರುವ 2027ರ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಟೂರ್ನಿಯ ಮಿನಿ ಹರಾಜಿನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಮ ನಾಲ್ವರು ಆಟಗಾರ್ತಿಯರನ್ನು ಖರೀದಿಸಿದೆ. ಆಸ್ಟ್ರೇಲಿಯಾದ ಅನುಭವಿ ಆಲ್ರೌಂಡರ್ ಜೆಸ್ ಜೊನಾಸನ್, ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ಲೋಯ್ ಟ್ರೈಯಾನ್, ಭಾರತದ ಬ್ಯಾಟರ್ ತೇಜಲ್ ಹಸಬ್ನಿಸ್ ಹಾಗೂ ಕರ್ನಾಟಕದ ವೃಂದಾ ದಿನೇಶ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಈ ಮೂಲಕ ಮುಂಬರುವ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಆರ್ಸಿಬಿ ತಂಡ ಬಲಿಷ್ಠ ಸಿದ್ಧತೆ ನಡೆಸಿದೆ.
ಅಕ್ಟೋಬರ್ 28 ರಂದು ನಡೆದಿದ್ದ ಈ ಮಿನಿ ಹರಾಜಿನಲ್ಲಿ ಒಟ್ಟು 146 ಆಟಗಾರ್ತಿಯರನ್ನು 27 ಸ್ಥಾನಗಳಿಗಾಗಿ ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಈ ಪೈಕಿ ಏಳು ಸ್ಥಾನಗಳನ್ನು ವಿದೇಶಿ ಆಟಗಾರ್ತಿಯರಿಗಾಗಿ ಮೀಸಲಿಡಲಾಗಿತ್ತು. ಭಾರತದ ಜಿ ಕಮಿಲಿನಿ ಗುಜರಾತ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾದರೆ, ಸ್ನೇಹ್ ರಾಣಾ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಈ ಆಟಗಾರ್ತಿಯರು ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿ. ಯುಪಿ ವಾರಿಯರ್ಸ್ ಅವರನ್ನು 1.1 ಕೋಟಿ ರು. ಗಳಿಗೆ ಖರೀದಿಸಿದೆ.
WPL 2027: ಸೋಫಿ ಮೊಲಿನೆಕ್ಸ್ ದುಬಾರಿ ಆಟಗಾರ್ತಿ, ಮಿನಿ ಹರಾಜಿನ ಬಳಿಕ ಎಲ್ಲಾ ಐದು ತಂಡಗಳ ವಿವರ!
ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ ಆಟಗಾರ್ತಿಯರು
ಜೆಸ್ ಜೊನಾಸನ್ (ಆಸ್ಟ್ರೇಲಿಯಾ) 40 ಲಕ್ಷ ರು
ಕ್ಲೋಯ್ ಟ್ರೈಯಾನ್ (ದಕ್ಷಿಣ ಆಫ್ರಿಕಾ) 30 ಲಕ್ಷ ರು
ತೇಜಲ್ ಹಸಬ್ನಿಸ್ (ಭಾರತ) 30 ಲಕ್ಷ ರು
ವೃಂದಾ ದಿನೇಶ್ (ಭಾರತ) 10 ಲಕ್ಷ ರು
Kochi trip that made it out of the group chat (and assembled our Class of ‘27 too) 😂❤️ 1️⃣2️⃣th Man Army, time to start counting down to the days to January '27. 🤩 #TATAWPLAuction #PlayBold #ನಮ್ಮRCB https://t.co/MsVkknGWEf
— Royal Challengers Bengaluru (@RCBTweets) October 28, 2026
ಆರ್ಸಿಬಿಯ ಬಲ ಹೆಚ್ಚಿಸಿದ ಹೊಸ ಸೇರ್ಪಡೆಗಳು
ಆರ್ಸಿಬಿ ತಂಡವು ಹರಾಜಿಗೂ ಮುನ್ನ ಸ್ಮೃತಿ ಮಂಧಾನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಸೇರಿದಂತೆ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ಹೊಸದಾಗಿ ಸೇರ್ಪಡೆಯಾದ ಜೆಸ್ ಜೊನಾಸನ್ ಮತ್ತು ಕ್ಲೋಯ್ ಟ್ರೈಯಾನ್ ಆಲ್ರೌಂಡರ್ ಆಯ್ಕೆಗಳನ್ನು ಬಲಪಡಿಸಲಿದ್ದಾರೆ. ತೇಜಲ್ ಹಸಬ್ನಿಸ್ ಹಾಗೂ ವೃಂದಾ ದಿನೇಶ್ ತಂಡದ ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ನೀಡಲಿದ್ದಾರೆ.
From ನಮ್ಮ ‘uru, ready to represent her city in the #TATAWPL. ❤️ 🗣️ Vrinda's first words as an RCB player. 🤩 #TATAWPLAuction #PlayBold #ನಮ್ಮRCB https://t.co/7gNUubckMp
— Royal Challengers Bengaluru (@RCBTweets) October 28, 2026
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ): ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರಥ್ಯುಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಜೆಸ್ ಜೊನಾಸನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರೈಯಾನ್*