ಮಾತು ಬಾರದ, ಕಿವಿ ಕೇಳದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಕೀಚಕರು: 17 ಮಂದಿಯ ಡಿಎನ್ಎ ಪರೀಕ್ಷೆ; ತಂದೆ, ಅಪ್ರಾಪ್ತ ಬಾಲಕ ಆರೋಪಿಗಳು
Crime News: ಮಾತು ಬಾರದ ಹಾಗೂ ಕಿವಿ ಕೇಳದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವು ಭಾರಿ ಆಘಾತ ಮೂಡಿಸಿದೆ. ಲೈಂಗಿಕ ದೌರ್ಜನ್ಯದಿಂದ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣದ ತನಿಖೆ ವೇಳೆ 17 ಮಂದಿಯ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಅತ್ಯಂತ ಬೆಚ್ಚಿಬೀಳಿಸುವ ಸಂಗತಿಯೆಂದರೆ, ಈ ಪ್ರಕರಣದಲ್ಲಿ ಯುವತಿಯ ತಂದೆಯೇ ಪ್ರಮುಖ ಆರೋಪಿಯಾಗಿದ್ದಾನೆ.
ಸಾಂದರ್ಭಿಕ (ಎಐ) ಚಿತ್ರ -
ಮುಂಬೈ, ಫೆ. 5: ಕಿವಿ ಕೇಳಿಸದ ಮತ್ತು ಮಾತನಾಡಲು ಸಾಧ್ಯವಾಗದ 20 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಡಿಎನ್ಎ ಪರೀಕ್ಷೆಯಲ್ಲಿ (DNA Test) ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ ಆತನನ್ನು ಬಂಧಿಸಲಾಗಿದೆ (Crime News).
ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಯುವತಿ ಮೇಲೆ ಈ ಕೃತ್ಯ ಎಸಗಲಾಗಿದೆ. ಈ ಭೀಕರ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಎರಡನೇ ವ್ಯಕ್ತಿಯನ್ನು ಬಂಧಿಸಿದ್ದು, ಯುವತಿಯು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಗುರುತಿಸಿದ 17 ವರ್ಷದ ಬಾಲಕನನ್ನೂ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇತರರ ಪಾತ್ರಗಳ ಕುರಿತು ತನಿಖೆ ಮುಂದುವರಿದಿದ್ದು, ಅಪರಾಧದ ಭಯಾನಕ ಸ್ವರೂಪವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. 17 ಮಂದಿ ಶಂಕಿತರ ಡಿಎನ್‌ಎ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ತಂದೆಯನ್ನು ಬಂಧಿಸಲಾಯಿತು.
ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಚಿತ್ರದುರ್ಗದಲ್ಲಿ ಖಾಸಗಿ ಶಾಲೆ ಶಿಕ್ಷಕನ ಬಂಧನ
ಏನಾಯಿತು?
2025ರ ಸೆಪ್ಟೆಂಬರ್‌ನಲ್ಲಿ ಯುವತಿಯು ತನ್ನ ಅಜ್ಜಿ ಬಳಿ ಹೊಟ್ಟೆಯಲ್ಲಿ ಏನೋ ಸಮಸ್ಯೆ ಇರುವುದಾಗಿ ತಿಳಿಸಿದ್ದಳು. ಕೈ ಸನ್ನೆಗಳ ಮೂಲಕ ತಿಳಿಸಿದ ಆಕೆ, ಹೊಟ್ಟೆಯಲ್ಲಿ ಕೀಟಗಳು ತೆವಳುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದಳು. ನಂತರ ಆಕೆಯನ್ನು ನಗರದ ಕ್ಯಾಮಾ & ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಐದು ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆಸ್ಪತ್ರೆಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು.
ಯುವತಿ ಹೇಳಿಕೆ ನೀಡಲು ಅಸಮರ್ಥಳಾಗಿದ್ದರಿಂದ ಮತ್ತು ಇಷ್ಟವಿಲ್ಲದ ಕಾರಣ ಆರಂಭದಲ್ಲಿ ಸಂವಹನ ಸಮಸ್ಯೆಯನ್ನು ಎದುರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರು ಸಂತ್ರಸ್ತೆಯ ತಂದೆಯೊಂದಿಗೆ ಮಾತನಾಡಿದರು. ಈ ವೇಳೆ ಆಕೆಯ ತಂದೆ ಲೈಂಗಿಕ ದೌರ್ಜನ್ಯದ ಬಗ್ಗೆಗಿನ ಪ್ರಶ್ನೆಗಳನ್ನು ತಳ್ಳಿಹಾಕಿದರು. ತಮ್ಮ ಮಗಳು ಹೇಗೆ ಗರ್ಭಿಣಿಯಾದಳು ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಹಸುವಿನ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ವ್ಯಕ್ತಿ! ಹಿಂದೂಗಳಿಂದ ಭಾರಿ ಆಕ್ರೋಶ
ಅಷ್ಟೇ ಅಲ್ಲದೆ, ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಲು ಕೂಡ ನಿರಾಕರಿಸಿದರು. ಕೊನೆಗೆ ಯುವತಿಗೆ ಕೌನ್ಸಿಲಿಂಗ್ ಮಾಡಲಾಯಿತು. ಕೌನ್ಸಿಲಿಂಗ್ ನಂತರ ಸಂತ್ರಸ್ತ ಯುವತಿಯು ದೂರು ದಾಖಲಿಸಲು ಮುಂದಾದಳು. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಇಬ್ಬರನ್ನು ಬಂಧಿಸಿದರು. ಅಂದರೆ ಎರಡನೇ ವ್ಯಕ್ತಿ ಮತ್ತು 17 ವರ್ಷದ ಬಾಲಕ. ತಂದೆ ಸೇರಿದಂತೆ 17 ಶಂಕಿತರಿಂದ ಡಿಎನ್ಎ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದರು. ಅತ್ಯಾಚಾರಿಯ ಗುರುತನ್ನು ಪತ್ತೆ ಮಾಡಲು ಭ್ರೂಣದ ಅನುವಂಶಿಕ ದತ್ತಾಂಶಗಳೊಂದಿಗೆ ರಕ್ತದ ಮಾದರಿಯನ್ನು ಹೋಲಿಸಿದರು.
ಜನವರಿ 27ರಂದು ಬಂದ ವರದಿಯು ಆಘಾತ ತರಿಸಿತ್ತು. ಯುವತಿಯ ತಂದೆಯೇ ಭ್ರೂಣದ ತಂದೆ ಎಂಬುದನ್ನು ಡಿಎನ್ಎ ರಿಪೋರ್ಟ್ ಬಹಿರಂಗಪಡಿಸಿತು. ಪೊಲೀಸರ ಪ್ರಕಾರ, ಕಳೆದ ವರ್ಷದ ಮಾರ್ಚ್ ಮತ್ತು ಸೆಪ್ಟೆಂಬರ್ 21ರ ನಡುವೆ ಅತ್ಯಾಚಾರ ನಡೆದಿತ್ತು.