ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Blood Moon 2025: ಖಗ್ರಾಸ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ? ಇಲ್ಲಿದೆ ಡಿಟೇಲ್ಸ್‌

ಕೆಂಪು ರಕ್ತ ಚಂದ್ರ ಗ್ರಹಣ ಎಂದು ಕರೆಯಲಾಗುವ ಸಂಪೂರ್ಣ ಚಂದ್ರ ಗ್ರಹಣವು ಸೆ.7ರ ರಾತ್ರಿ ಸಂಭವಿಸಲಿದೆ. ಇದು ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣವಾಗಿದ್ದು, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ಸರಳ ರೇಖೆಯಲ್ಲಿ ನಿಂತಾಗ, ನಂತರ ಚಂದ್ರ ಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವೂ ವೈಜ್ಞಾನಿಕವಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸೂರ್ಯಗ್ರಹಣ ಅಥವಾ ಚಂದ್ರಗ್ರಹಣವಾಗಿರಲಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಖಗ್ರಾಸ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ?

-

Profile Sushmitha Jain Sep 5, 2025 6:00 AM

ನವದೆಹಲಿ: ಈ ವರ್ಷ ಸೆಪ್ಟೆಂಬರ್ 7-8ರಂದು ನಡೆಯಲಿರುವ ಅಪರೂಪದ ಸಂಪೂರ್ಣ ಚಂದ್ರಗ್ರಹಣ (Lunar Eclipse), ಇದನ್ನು “ರಕ್ತ ಚಂದ್ರ" (Blood Moon) ಎಂದು ಕೂಡ ಕರೆಯಲಾಗುತ್ತದೆ. ಈ ಅಪರೀಪದ ಖಗೋಳ ವಿದ್ಯಮಾನದಲ್ಲಿ ಭೂಮಿಯು ಸೂರ್ಯನ (Sun) ಮತ್ತು ಚಂದ್ರನ (Moon) ಮಧ್ಯೆ ಬಂದು ಚಂದ್ರನ ಮೇಲೆ ತನ್ನ ನೆರಳನ್ನು ಬೀರಿದಾಗ, ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಮಿನುಗುವ ಅದ್ಭುತ ದೃಶ್ಯ ಕಾಣಲಿದೆ. ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಸಂಪೂರ್ಣವಾಗಿ ಗೋಚರವಾಗುವ ಈ ಗ್ರಹಣ, ಯುರೋಪ್, ಆಫ್ರಿಕಾ, ಪೂರ್ವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಕೆಲವು ಭಾಗಗಳಲ್ಲೂ ಗೋಚರಿಸಲಿದೆ.

ಏಕೆ ಕೆಂಪು ಚಂದ್ರ?

ಚಂದ್ರಗ್ರಹಣವು ಭೂಮಿಯು ಸೂರ್ಯ ಮತ್ತು ಚಂದ್ರನ ಮಧ್ಯೆ ಬಂದಾಗ ಸಂಭವಿಸುತ್ತದೆ. ಭೂಮಿಯ ಗಾಢ ನೆರಳಿನ ಭಾಗವಾದ ಅಂಬ್ರಲ್ ಶೇಡ್‌ನಲ್ಲಿ ಚಂದ್ರನು ಚಲಿಸುವಾಗ, ಚಂದ್ರನ ಬೆಳಕು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ರೇಲೀ ಸ್ಕ್ಯಾಟರಿಂಗ್, ಭೂಮಿಯ ವಾತಾವರಣದ ಮೂಲಕ ಸೂರ್ಯನ ಬೆಳಕು ಚಂದ್ರನತ್ತ ತಲುಪಿದಾಗ, ಕಿರು ತರಂಗಾಂತರದ ನೀಲಿ ಬೆಳಕು ಚದುರಿಹೋಗಿ, ದೀರ್ಘ ಕೆಂಪು ತರಂಗಾಂತರಗಳು ಚಂದ್ರನನ್ನು ಕೆಂಪು ಬಣ್ಣದಲ್ಲಿ ಬೆಳಗಿಸುತ್ತವೆ.

ಭಾರತದಲ್ಲಿ ಗೋಚರತೆ

ಈ ಗ್ರಹಣವು ಭಾರತದಾದ್ಯಂತ ದೆಹಲಿ, ಚಂಡೀಗಢ, ಜೈಪುರ, ಲಕ್ನೌ, ಮುಂಬೈ, ಅಹಮದಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ, ಭೋಪಾಲ್‌ನಂತಹ ನಗರಗಳಿಂದ ಸ್ಪಷ್ಟವಾಗಿ ಗೋಚರಿಸಲಿದೆ. ರಾತ್ರಿಯ ಆಕಾಶದಲ್ಲಿ ಚಂದ್ರ ಎತ್ತರದಲ್ಲಿರುವುದರಿಂದ, ಮೇಲ್ಛಾವಣಿ, ತಾರಸಿಗಳು, ಉದ್ಯಾನವನಗಳು ಅಥವಾ ನಗರದ ಬೆಳಕಿನಿಂದ ದೂರವಿರುವ ಕ್ಷೇತ್ರಗಳು ವೀಕ್ಷಣೆಗೆ ಉತ್ತಮ ಸ್ಥಳಗಳಾಗಿವೆ.

ಈ ಸುದ್ದಿಯನ್ನೂ ಓದಿ: Viral Video: ನೆರೆಹೊರೆಯ ಮನೆಗಳನ್ನು ಇಣುಕೋದೇ ಈಕೆಯ ಕೆಲಸ; ಸಿಸಿಟಿವಿಯಲ್ಲಿ ಬಯಲಾಯ್ತು ಈ ಸಂಗತಿ

ಗ್ರಹಣದ ಸಮಯ

ಗ್ರಹಣ ಆರಂಭ: ಸೆಪ್ಟೆಂಬರ್ 7, ರಾತ್ರಿ 8:58 (IST)

ಸಂಪೂರ್ಣ ಗ್ರಹಣ (ಕೆಂಪು ಚಂದ್ರ): ರಾತ್ರಿ 11:00 ರಿಂದ 12:22 (82 ನಿಮಿಷಗಳ ಕಾಲ)

ಗ್ರಹಣದ ಅಂತ್ಯ: ಸೆಪ್ಟೆಂಬರ್ 8, ಬೆಳಗ್ಗೆ 2:25 (IST)

ನೋಡುವ ವಿಧಾನ

ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು. ದೂರದರ್ಶಕ ಅಥವಾ ಬೈನಾಕ್ಯುಲರ್‌ಗಳಿಂದ ಚಂದ್ರನ ಕುಳಿಗಳು ಮತ್ತು ಕೆಂಪು ಛಾಯೆಯನ್ನು ಸ್ಪಷ್ಟವಾಗಿ ನೋಡಬಹುದು. ಸ್ಟೆಲ್ಲಾರಿಯಂ ಅಥವಾ ಸ್ಕೈಸಫಾರಿ ಆ್ಯಪ್‌ಗಳು ಚಂದ್ರನ ಸ್ಥಳವನ್ನು ಪತ್ತೆಹಚ್ಚಲು ಸಹಾಯಕವಾಗಿವೆ. DSLR ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಟ್ರೈಪಾಡ್ ಬಳಸಿ, 1-2 ಸೆಕೆಂಡ್ ಎಕ್ಸ್‌ಪೋಜರ್, ISO 400-800, ಮತ್ತು ಮ್ಯಾನುವಲ್ ಫೋಕಸ್ ಬಳಸಿ ಟೈಮ್-ಲ್ಯಾಪ್ಸ್ ಚಿತ್ರೀಕರಣ ಮಾಡಬಹುದು.