Viral Video: ನೆರೆಹೊರೆಯ ಮನೆಗಳನ್ನು ಇಣುಕೋದೇ ಈಕೆಯ ಕೆಲಸ; ಸಿಸಿಟಿವಿಯಲ್ಲಿ ಬಯಲಾಯ್ತು ಈ ಸಂಗತಿ
Woman Tries to Hear Neighbour’s Conversation: ಮಹಿಳೆಯೊಬ್ಬಳು ನೆರೆಹೊರೆಯವರ ಮನೆಯಲ್ಲಿ ಇಣುಕಿದ್ದು, ಏನಾಗುತ್ತಿದೆ ಎಂಬುದನ್ನು ಅವರ ಮನೆಯ ಬಾಗಿಲಿನ ಬಳಿ ನಿಂತು ಆಲಿಸಿದ್ದಾಳೆ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

-

ನವದೆಹಲಿ: ಮನುಷ್ಯರು ಹೆಚ್ಚಾಗಿ ಕುತೂಹಲಿಗಳಾಗಿರುತ್ತಾರೆ. ಅದರಲ್ಲೂ ಕೆಲವು ಮಹಿಳೆಯರಿಗಂತೂ ಪಕ್ಕದ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಹೆಚ್ಚಿನ ಕುತೂಹಲವಿರುತ್ತದೆ. ನೆರೆಮನೆಯಲ್ಲಿ ಆಂಟಿಯರಿದ್ದರೆ ಸಿಸಿ ಕ್ಯಾಮರಾ (CCTV) ಬೇಕೆಂದಿಲ್ಲ ಎಂಬಂತಹ ತಮಾಷೆಯ ರೀಲ್‍ಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು. ಇದೀಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ (Viral Video) ಮಹಿಳೆಯೊಬ್ಬಳು ನೆರೆಹೊರೆಯವರ ಮನೆಯಲ್ಲಿ ಇಣುಕಿದ್ದು, ಏನಾಗುತ್ತಿದೆ ಎಂಬುದನ್ನು ಅವರ ಮನೆಯ ಬಾಗಿಲಿನ ಬಳಿ ನಿಂತು ಆಲಿಸಿದ್ದಾಳೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಮಹಿಳೆಯು ತನ್ನ ಮನೆಯಿಂದ ಹೊರಬಂದು ಕಾರಿಡಾರ್‌ನಲ್ಲಿ ಅಡ್ಡಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ತನ್ನ ನೆರೆಹೊರೆಯವರ ಅಪಾರ್ಟ್‌ಮೆಂಟ್‌ನಿಂದ ಜೋರಾದ ಧ್ವನಿಗಳು ಹೊರಬರುತ್ತಿರುವುದು ಕೇಳಿಸಿದೆ. ಕುತೂಹಲದಿಂದ ನೆರೆಮನೆಯವರ ಗೇಟ್‌ನಲ್ಲಿ ನಿಂತು ಸಂಭಾಷಣೆಯನ್ನು ರಹಸ್ಯವಾಗಿ ಆಲಿಸಿದಳು. ಬಹುಶಃ ಸರಿಯಾಗಿ ಕೇಳಿಸಲಿಲ್ಲವೇನೋ ಆಕೆ ಶೀಘ್ರದಲ್ಲೇ ತನ್ನ ಫ್ಲ್ಯಾಟ್‍ನೊಳಗೆ ಹಿಂತಿರುಗಲು ಮುಂದಾಗಿದ್ದಾಳೆ.
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಅದು ತಕ್ಷಣವೇ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ನಮ್ಮ ನೆರೆಮನೆಯಲ್ಲಿ ಒಬ್ಬರು ಆಂಟಿ ಇದ್ದರು. ಆಕೆ ಯಾವಾಗಲೂ ತಮ್ಮ ಟೆರೇಸ್‍ನಲ್ಲಿ ನಿಂತು ಇತರರ ಮನೆಗಳ ಕಡೆಗೆ ನೋಡುತ್ತಿದ್ದರು. ನಾವೆಲ್ಲೇ ಹೋಗಿ ಬಂದರೂ ನೋಡುತ್ತಿದ್ದರು. ಆಕೆಗೆ ಚಿಪ್ಕಿಲಿ ಎಂದು ಹೆಸರಿಟ್ಟಿದ್ದೆವು” ಎಂದು ಬಳಕೆದಾರರೊಬ್ಬರು ತಮಗಾದ ಅನುಭವದ ಬಗ್ಗೆ ಪ್ರತಿಕ್ರಿಯಿಸಿದರು.
ವಿಡಿಯೊ ವೀಕ್ಷಿಸಿ:
ಆಂಟಿ ಈಗ ಪ್ರಸಿದ್ಧರಾಗಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆಕೆಯನ್ನು ಐಬಿ ಮತ್ತು ಎಡಬ್ಲ್ಯೂಗೆ ನೇಮಿಸಿಕೊಳ್ಳಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇಂತಹ ಆಂಟಿಗಳು ಸಿಕ್ಕಿಬಿದ್ದರೆ ಸಿಸಿಟಿವಿಯನ್ನು ತೆಗೆದುಹಾಕುವಂತೆ ಅವರು ಮನವಿ ಮಾಡಬಹುದು. ಯಾಕೆಂದರೆ ಅವರು ಗೌಪ್ಯತೆಯನ್ನು ಇಷ್ಟಪಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಭವಿಷ್ಯದಲ್ಲಿ ಈ ರೀತಿಯ ಆಂಟಿಯಾಗಬೇಡಿ, ಬ್ಯುಸಿಯಾಗಿರಿ ಎಂದು ಕೆಲವು ಬಳಕೆದಾರರು ಯುವತಿಯರಿಗೆ ಸಲಹೆ ನೀಡಿದ್ದಾರೆ.
ಈ ರೀತಿ ಕಿವಿ ಕೊಡುವವರ ಜೀವನದಲ್ಲಿ ಆಸಕ್ತಿದಾಯಕವಾದ ಏನೂ ಇಲ್ಲದೇ ಇದ್ದಾಗ ಮನರಂಜನೆಗಾಗಿ ಇಂಥವನ್ನು ಅವಲಂಬಿಸಿರುತ್ತಾರೆ ಎಂದು ವ್ಯಕ್ತಿಯೊಬ್ಬರು ಹೇಳಿದರು. ರಹಸ್ಯ ಗೂಢಾಚಾರದ ಸಂಸ್ಥೆಯ ಸದಸ್ಯೆಯಿರಬೇಕು ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ. ಸಿಸಿಟಿವಿ ಆಲ್ಟ್ರಾ ಪ್ರೋ ಮ್ಯಾಕ್ಸ್ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ.
ಕೆಲವರು ಮಹಿಳೆಯ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಏನೋ ಜೋರಾಗಿ ಶಬ್ಧ ಕೇಳಿಬಂದಿದ್ದಕ್ಕೆ ಬಹುಷಃ ಅವಳು ಚಿಂತಿತಳಾಗಿರಬಹುದು, ತುರ್ತು ಸಹಾಯ ಬೇಕಾಗಬಹುದೇ ಎಂಬುದನ್ನು ನಿರೀಕ್ಷಿಸಿದ್ದಿರಬಹುದು. ಇದು ತಮಾಷೆ ಮಾಡುವ ವಿಷಯವಲ್ಲ ಎಂದು ಬಳಕೆದಾರರೊಬ್ಬರು ಆಕೆಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಂದಹಾಗೆ, ಬೇರೊಬ್ಬರ ಮನೆಗೆ ಇಣುಕುವುದು ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು. ಇದರಲ್ಲಿ ಲೈಂಗಿಕ ದೌರ್ಜನ್ಯದ ಕ್ರಿಮಿನಲ್ ಆರೋಪಗಳು, ದಂಡ ಮತ್ತು ಜೈಲು ಶಿಕ್ಷೆ ಸೇರಿವೆ.