6 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ: ಅಕ್ಟೋಬರ್ 6ರಂದು ಮತದಾನ, 9ರಂದು ಫಲಿತಾಂಶ
Election Commission: ಚುನಾವಣಾ ಆಯೋಗವು ದೇಶದ ಆರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಿದೆ. ತಮಿಳುನಾಡಿನ ಮದುರಾಂತಕಂ ಮತ್ತು ಧಾರಾಪುರಂ, ಪುದುಚೇರಿಯ ತಟ್ಟಾಂಚಾವಡಿ, ಪಶ್ಚಿಮ ಬಂಗಾಳದ ರೇಜಿನಗರ ಮತ್ತು ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಮತದಾನ ನಡೆಯಲಿದೆ. ಅಕ್ಟೋಬರ್ 9ರಂದು ಫಲಿತಾಂಶ ಹೊರ ಬೀಳಲಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 7: ಭಾರತೀಯ ಚುನಾವಣಾ ಆಯೋಗವು (Election Commission) ಸೋಮವಾರ ಆರು ಕ್ಷೇತ್ರಗಳ ಉಪಚುನಾವಣೆಯ (Bypolls Election) ದಿನಾಂಕವನ್ನು ಪ್ರಕಟಿಸಿದೆ. ತಮಿಳುನಾಡಿನ ಎರಡು, ಪುದುಚೇರಿಯ ಒಂದು ಹಾಗೂ ಪಶ್ಚಿಮ ಬಂಗಾಳದ ಎರಡು ವಿಧಾನಸಭಾ ಕ್ಷೇತ್ರಗಳು ಮತ್ತು ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಫಲಿತಾಂಶ ಹೊರ ಬೀಳಲಿದೆ. ಸಿಟ್ಟಿಂಗ್ ಶಾಸಕರು ಹಾಗೂ ಸಂಸದರ ರಾಜೀನಾಮೆಯಿಂದ ಈ ಆರು ಕ್ಷೇತ್ರಗಳು ತೆರವಾಗಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.
ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರವು ಮಾರ್ಚ್‌ನಲ್ಲಿ ಕಾಂಗ್ರೆಸ್ ಸಂಸದ ಪ್ರದ್ಯೂತ್ ಬೋರ್ಡೋಲೋಯ್ ರಾಜೀನಾಮೆ ನೀಡಿದ ಬಳಿಕ ತೆರವಾಗಿತ್ತು. ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಡಿಸ್‌ಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಉಪಚುನಾವಣೆಯ ವೇಳಾಪಟ್ಟಿ ಪ್ರಕಟ:
Breaking: #Byelection to #Nandigram & #Rejinagar Assembly seats to be held next month.
— Sreyashi Dey (@SreyashiDey) September 7, 2026
Voting on October 6,
Counting on October 9. pic.twitter.com/OD36IWeuRO
ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ತಮಿಳುನಾಡಿನ ಮದುರಾಂತಕಂ ಮತ್ತು ಧಾರಾಪುರಂ, ಪುದುಚೇರಿಯ ತಟ್ಟಾಂಚಾವಡಿ, ಪಶ್ಚಿಮ ಬಂಗಾಳದ ರೇಜಿನಗರ ಮತ್ತು ನಂದಿಗ್ರಾಮ ಸೇರಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ 2026ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಬಳಿಕ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ಭವಾನಿಪುರದಲ್ಲಿ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು. ನಂದಿಗ್ರಾಮದಲ್ಲಿಯೂ 2021ರಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.
ತಲೆ ಮರೆಸಿಕೊಂಡಿದ್ದ ಪಿಜಿ ಮಾಲಕ ಹರಿರಾಮ್ ಗುಪ್ತಾ ರಾಜಸ್ಥಾನದಲ್ಲಿ ಅರೆಸ್ಟ್; 7ಕ್ಕೇರಿದ ಸಾವಿನ ಸಂಖ್ಯೆ
ಪಶ್ಚಿಮ ಬಂಗಾಳದ ರೇಜಿನಗರ ಕ್ಷೇತ್ರವು ಮಾಜಿ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದೆ. 2026ರ ಚುನಾವಣೆಯಲ್ಲಿ ಗೆದ್ದಿದ್ದ ಕಬೀರ್, ಮಮತಾ ಬ್ಯಾನರ್ಜಿ ಭವಾನಿಪುರದಲ್ಲಿ ಸೋತ ಬಳಿಕ ವಿಧಾನಸಭೆಗೆ ಮರಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕ್ಷೇತ್ರ ತೆರವುಗೊಳಿಸಲು ಸಿದ್ಧ ಎಂದು ಸಾರ್ವಜನಿಕವಾಗಿ ಹೇಳಿದ್ದರು.
ಪುದುಚೇರಿಯಲ್ಲಿ ಮುಖ್ಯಮಂತ್ರಿ ಎನ್. ರಂಗಸಾಮಿ ಮಂಗಳಂ ಹಾಗೂ ತಟ್ಟಾಂಚಾವಡಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತಟ್ಟಾಂಚಾವಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮಂಗಳಂ ಕ್ಷೇತ್ರವನ್ನು ಉಳಿಸಿಕೊಂಡರು.
ತಮಿಳುನಾಡಿನ ಮದುರಾಂತಕಂ ಮತ್ತು ಧಾರಾಪುರಂ ಕ್ಷೇತ್ರಗಳು ಎಐಎಡಿಎಂಕೆ ಶಾಸಕರಾದ ಮಾರಗತಂ ಕುಮಾರವೇಲ್ ಮತ್ತು ಪಿ. ಸತ್ಯಬಾಮಾ ಅವರ ರಾಜೀನಾಮೆಯಿಂದ ತೆರವಾಗಿವೆ. ಇಬ್ಬರೂ ನಟ-ರಾಜಕಾರಣಿ ವಿಜಯ್ ನೇತೃತ್ವದ ಆಡಳಿತಾರೂಢ ಟಿವಿಕೆಗೆ ಸೇರ್ಪಡೆಗೊಂಡಿದ್ದಾರೆ.
ಸಂಬಂಧಿತ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಫೆಬ್ರವರಿ 10ರಿಂದ 28ರವರೆಗೆ ಪೂರ್ಣಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೆ ಮತದಾರರ ಪಟ್ಟಿಯನ್ನು ನವೀಕರಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.