ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರೂರು ಸಂತ್ರಸ್ತರಿಗೆ ಸರ್ಕಾರಿ ನೌಕರಿ ಕೇಸ್‌; ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ, CM ವಿಜಯ್ ಸರ್ಕಾರಕ್ಕೆ ಸುಪ್ರೀಂನಲ್ಲಿ ಗೆಲುವು

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು ಕರೂರ್ ಸಂತ್ರಸ್ತರಿಗೆ ಉದ್ಯೋಗ ಮಂಜೂರು ಮಾಡಿದ್ದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಲ್ಲದೇ ಎಲ್ಲರಿಗೂ ಉದ್ಯೋಗ ನೀಡುವಂತೆ ಆದೇಶಿಸಿದ್ದು, ಅನುಕಂಪದ ನೇಮಕಾತಿಯನ್ನು ತಡೆಯುವುದು ಸರಿಯಲ್ಲ ಎಂದು ತಿಳಿಸಿದೆ.

ಕರೂರ್ ಸಂತ್ರಸ್ತರಿಗೆ ಉದ್ಯೋಗ ಮಂಜೂರು: ಸುಪ್ರೀಂ ಕೋರ್ಟ್‌ ಆದೇಶ

ಸಂಗ್ರಹ ಚಿತ್ರ -

ಚೆನ್ನೈ: ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ನಡೆದ ದುರಂತದಲ್ಲಿ (Karur stampede case) ಮೃತಪಟ್ಟವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಮುಖ್ಯಮಂತ್ರಿ ಜೋಸೆಫ್ ವಿಜಯ್ (Chief Minister Joseph Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (Tamil Vetri Kalagam) ಸರ್ಕಾರವು ನೀಡಿದ್ದ ಉದ್ಯೋಗ ಆದೇಶವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ. ಡಿಎಂಕೆ (DMK) ಅಧಿಕಾರದ ಅವಧಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ವಿಜಯ್ ಅವರು ಉದ್ಯೋಗ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದ ಮೇಲೆ ಅದನ್ನು ನೀಡಿ ಆದೇಶಿಸಿದ್ದರು.

ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಉದ್ಯೋಗ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕರೂರ್ ನಲ್ಲಿ ವಿಜಯ್ ಅವರು ಪಾಲ್ಗೊಂಡಿದ್ದ ಟಿವಿಕೆ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ ಮಕ್ಕಳು ಸೇರಿದಂತೆ ನಲವತ್ತೊಂದು ಮಂದಿ ಸಾವನ್ನಪ್ಪಿದ್ದರು.

ಕೇಂದ್ರ ಸಚಿವ ಜೆ.ಪಿ. ನಡ್ಡಾ ಆಸ್ಪತ್ರೆಗೆ ದಾಖಲು

ಹೆಚ್ಚಿನ ಜನಸಂದಣಿ, ವಿಜಯ್ ವಿಳಂಬವಾಗಿ ಬಂದಿದ್ದು ಇದಕ್ಕೆ ಕಾರಣ. ಅಸಮರ್ಪಕ ಕುಡಿಯುವ ನೀರು, ಆಹಾರ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ ಇದನ್ನು ಟಿವಿಕೆ ತಿರಸ್ಕರಿಸಿದ್ದು, ಪೊಲೀಸರ ವೈಫಲ್ಯವನ್ನು ದೂಷಿಸಿತು. ಇದರಲ್ಲಿ ಡಿಎಂಕೆ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿ ಇದೆ ಎಂದು ಆರೋಪಿಸಿತ್ತು.

ತಕ್ಷಣಕ್ಕೆ ವಿಜಯ್ ಅವರು ಪರಿಹಾರವಾಗಿ ಹಣ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದ್ದರು.



ಅಂತೆಯೇ ವಿಜಯ್ ಅಧಿಕಾರಕ್ಕೆ ಬಂದ ತಕ್ಷಣ ಅವರಿಗೆ ಉದ್ಯೋಗದ ಪತ್ರವನ್ನು ಹಸ್ತಾಂತರಿಸಿದರು. ಆದರೆ ಇದನ್ನು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಟಿವಿಕೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಸಂತ್ರಸ್ತರಿಗೆ ಸರ್ಕಾರ ಪರಿಹಾರವಾಗಿ ಹಣ ನೀಡಲು ನಿರ್ಧರಿಸಿದರೆ ಅಥವಾ ಉದ್ಯೋಗ ನೀಡಬಾರದು ಎಂದು ಪ್ರಶ್ನಿಸುವುದು ಹೇಗೆ? ದುರಂತದಲ್ಲಿ ಒಬ್ಬ ಮೃತಪಟ್ಟರು ಕೂಡ ಸರ್ಕಾರವು ಅವರ ಮಗ ಅಥವಾ ಮಗಳಿಗೆ ಉದ್ಯೋಗ ನೀಡಬೇಕಲ್ಲವೇ? ಎಂದು ಹೇಳಿದೆ.

ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ ಹೊರತಾಗಿಯೂ ಕೋಲ್ಕತಾದಲ್ಲಿ ನೇತಾಜಿ ಪ್ರತಿಮೆ ಧ್ವಂಸ

ಮದ್ರಾಸ್ ಹೈಕೋರ್ಟ್ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ವಿಜಯ್ ಅವರ ಆದೇಶವನ್ನು ಜುಲೈ 27 ರಂದು ರದ್ದುಗೊಳಿಸಿತು. ಇದು ಸಂವಿಧಾನದ ವಿಧಿ 14 ಸಮಾನತೆಯ ಹಕ್ಕು ಮತ್ತು ವಿಧಿ 16 ಸರ್ಕಾರಿ ಉದ್ಯೋಗದಲ್ಲಿ ಅವಕಾಶದ ಸಮಾನತೆವನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿ.ವಿ. ಕಾರ್ತಿಕೇಯನ್ ಮತ್ತು ಆರ್. ಶಕ್ತಿವೇಲ್ ಅವರ ವಿಭಾಗೀಯ ಪೀಠವು ಹೇಳಿತ್ತು.