Physical Assault: ಆಪ್ತ ಸಮಾಲೋಚಕಿ ಮೇಲೆ ರೇಪ್ ಕೇಸ್: ಆರೋಪಿ ಬಂಧನ
ಮಹಿಳೆ ಐಐಎಂ ಕಾಲೇಜಿನ ವಸತಿಗೃಹಕ್ಕೆ ಆಪ್ತ ಸಮಾಲೋಚನೆ ನಡೆಸಲು ತೆರಳಿದ್ದಳು. ಆಗ ನೀಡಲಾದ ಡ್ರಗ್ಸ್ ಮಿಶ್ರಿತ ಪಾನೀಯವನ್ನು ಸೇವಿಸಿದ ಬಳಿಕ ಮಹಿಳೆ ಪ್ರಜ್ಞೆ ತಪ್ಪಿದರು. ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದ ಮಹಿಳೆಯ, ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.


ಕೋಲ್ಕತ್ತಾ: ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ(Physical Assault) ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾದ ಐಐಎಂ ಕಾಲೇಜಿನ(IIM Calcutta) 26 ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಪ್ರೇಮಾನಂದ ಮಹಾವೀರ್ ಟೊಪ್ಪನವರ್ ಎಂದು ಗುರುತಿಸಲಾಗಿದೆ.
ಮಹಿಳೆ ಐಐಎಂ ಕಾಲೇಜಿನ ವಸತಿಗೃಹಕ್ಕೆ ಆಪ್ತ ಸಮಾಲೋಚನೆ ನಡೆಸಲು ತೆರಳಿದ್ದಳು. ಆಗ ನೀಡಲಾದ ಡ್ರಗ್ಸ್ ಮಿಶ್ರಿತ ಪಾನೀಯವನ್ನು ಸೇವಿಸಿದ ಬಳಿಕ ಮಹಿಳೆ ಪ್ರಜ್ಞೆ ತಪ್ಪಿದರು. ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದ ಮಹಿಳೆಯ, ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುವುದು ಎಂದು ಆರೋಪಿ ಬೆದರಿಸಿದ್ದಾಗಿಯೂ ಆಕೆ ದೂರಿದ್ದಾರೆ. ಈ ಹಿನ್ನೆಲೆ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ತಂದೆಯ ಅಚ್ಚರಿಕೆ ಹೇಳಿಕೆ
ಅತ್ತ ಸಂತ್ರಸ್ತೆಯ ತಂದೆ, ‘ನನ್ನ ಮಗಳು ಆಟೋದಿಂದ ಬಿದ್ದು ಪ್ರಜ್ಞೆ ತಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂದು ಹೇಳಿದಾರೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಪೊಲೀಸರು ಕೇಳಿದಾಗ ಆಕೆ ಏನೂ ಹೇಳಲಿಲ್ಲ. ನಾನು ನನ್ನ ಮಗಳ ಜೊತೆ ಮಾತನಾಡಿದ್ದೇನೆ. ಯಾರೂ ಅವಳನ್ನು ಹಿಂಸಿಸಿಲ್ಲ ಅಥವಾ ಅವಳೊಂದಿಗೆ ಅನುಚಿತವಾಗಿ ವರ್ತಿಸಿಲ್ಲ ಎಂದು ಅವಳು ಹೇಳಿದಳು. ನನಗೆ ನನ್ನ ಮಗಳು ಮರಳಿ ಬಂದಿದ್ದಾಳೆ, ಅವಳು ಸಾಮಾನ್ಯಳಾಗಿದ್ದಾಳೆ. ಬಂಧಿಸಲ್ಪಟ್ಟ ವ್ಯಕ್ತಿಯೊಂದಿಗೆ ಅವಳಿಗೆ ಯಾವುದೇ ಸಂಬಂಧವಿಲ್ಲ. ನನಗೆ ಅವಳೊಂದಿಗೆ ಹೆಚ್ಚು ಹೊತ್ತು ಮಾತನಾಡಲು ಸಾಧ್ಯವಾಗಿಲ್ಲ. ಅವಳು ನಿದ್ರಿಸುತ್ತಿದ್ದಾಳೆ. ಅವಳು ಎಚ್ಚರವಾದ ನಂತರ ನಾನು ಅವಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ Physical Assault: ಕೊಲ್ಕತ್ತಾದ IIM ಬಾಯ್ಸ್ ಹಾಸ್ಟೆಲ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ; ತನಿಖೆ ಚುರುಕು