ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

SIR ವೇಳೆ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ಗೆ ಸಮನ್ಸ್; ಕಾರಣ ನೀಡಿದ ಚುನಾವಣಾ ಆಯೋಗ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಸ್ಪಷ್ಟಿಕರಣಕ್ಕೆ ಸಂಬಂಧಿಸಿ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಚುನಾವಣಾ ಆಯೋಗವು ಸಮನ್ಸ್ ಜಾರಿ ಮಾಡಿದೆ. ಮತದಾರರ ಎಣಿಕೆ ನಮೂನೆಗಳಲ್ಲಿರುವ ಕಡ್ಡಾಯ ಕಾಲಂ ಖಾಲಿ ಬಿಡಲಾಗಿದ್ದು ಈ ಕುರಿತು ಸ್ಪಷ್ಟಿಕರಣ ಪಡೆಯಲು ಅವರಿಗೆ ಸಮನ್ಸ್ ನೀಡಿರುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ಗೆ ಸಮನ್ಸ್

ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ (ಸಂಗ್ರಹ ಚಿತ್ರ) -

ಕೋಲ್ಕತ್ತಾ: ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ (Nobel laureate) ಅಮರ್ತ್ಯ ಸೇನ್ (Amartya Sen), ಕ್ರಿಕೆಟಿಗ ಮೊಹಮ್ಮದ್ ಶಮಿ (cricketer Mohammed Shami) ಮತ್ತು ಬಂಗಾಳಿ ನಟ, ಟಿಎಂಸಿ ಸಂಸದ ದೇವ್ (TMC MP Dev) ಸೇರಿದಂತೆ ಇನ್ನು ಹಲವು ಗಣ್ಯರಿಗೆ ವಿಚಾರಣೆಗಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ಸಮನ್ಸ್ (summons) ಜಾರಿ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಚುನಾವಣಾ ಪರಿಶೀಲನಾ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂಬುದಾಗಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿ ಬುಧವಾರ ಸ್ಪಷ್ಟಪಡಿಸಿದೆ.

ಮತದಾರರ ಎಣಿಕೆ ನಮೂನೆಗಳ ಪರಿಶೀಲನೆ ವೇಳೆ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್, ಕ್ರಿಕೆಟಿಗ ಮೊಹಮ್ಮದ್ ಶಮಿ, ಸಂಸದ ದೇವ್ ಸೇರಿದಂತೆ ಇನ್ನು ಹಲವು ಗಣ್ಯರು ಕಡ್ಡಾಯ ಸಂಪರ್ಕ ಕಾಲಮ್‌ಗಳನ್ನು ಖಾಲಿ ಬಿಟ್ಟಿರುವುದು ಕಂಡು ಬಂದಿದೆ. ಹೀಗಾಗಿ ಇವರಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ಸಿಇಒ ತಿಳಿಸಿದ್ದಾರೆ. ಆದರೆ ಇದು ವಿವಾದವನ್ನು ಹುಟ್ಟುಹಾಕಿದೆ.

ಭಾರತದ ಅತಿದೊಡ್ಡ ಪ್ಲಾಸ್ಟಿಕ್ ಮರುಬಳಕೆ ಘಟಕದೊಂದಿಗೆ ತ್ಯಾಜ್ಯದಿಂದ ಸಂಪತ್ತು ಪರಿಕಲ್ಪನೆಗೆ ಮುಂದಾದ ಅವ್ರೊ ಇಂಡಿಯಾ ( Avro India)

ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಮತದಾರರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಚುನಾವಣಾ ಆಯೋಗ ಅಧಿಸೂಚನೆಯಲ್ಲಿ ತಿಳಿಸಿತ್ತು. ಆದರೆ ಗಣ್ಯರಿಗೂ ಇತರ ಮತದಾರರಂತೆ ಸಮನ್ಸ್ ನೀಡಿರುವುದು ಟೀಕೆಗೆ ಕಾರಣವಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ರಾಜ್ಯದ ಸಿಇಒ ಕಚೇರಿ, ಗಣತಿ ನಮೂನೆಯ ಕಡ್ಡಾಯ ಕಾಲಮ್‌ಗಳನ್ನು ಕೆಲವು ಗಣ್ಯ ಮತದಾರರು ಖಾಲಿ ಬಿಟ್ಟಿದ್ದಾರೆ ಎಂದು ತಿಳಿಸಿದೆ.

ಮುಖ್ಯವಾಗಿ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಪ್ರಕರಣವನ್ನು ಉಲ್ಲೇಖಿಸಿರುವ ಸಿಇಒ ಕಚೇರಿಯು, ವಿದೇಶಿ ಮತದಾರರಾಗಿ ಎಣಿಕೆ ನಮೂನೆ ಸಲ್ಲಿಸಿರುವ ಅವರ ಕುಟುಂಬ ಸದಸ್ಯ ಶಾಂತಭಾನು ಸೇನ್ ಅವರು ತಮ್ಮ ತಾಯಿ ಎಂದು ಅಮಿತಾ ಸೇನ್ ಎಂದು ಹೇಳಿದ್ದಾರೆ. ಇವರ ನಡುವಿನ ವಯಸ್ಸಿನ ವ್ಯತ್ಯಾಸ 15 ವರ್ಷಗಳಿಗಿಂತ ಕಡಿಮೆ ಇದೆ. ಹೀಗಾಗಿ ಇಆರ್‌ಒ ನೆಟ್ ಪೋರ್ಟಲ್ ಈ ವ್ಯತ್ಯಾಸವನ್ನು ಗುರುತಿಸಿದೆ. ಹೀಗಾಗಿ ಈ ಕುರಿತು ಸ್ಪಷ್ಟಿಕರಣಕ್ಕಾಗಿ ಡಾ. ಅಮರ್ತ್ಯ ಸೇನ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಹೇಳಿದೆ.

ಕಡಲೇಬೀಜ ಸಿಲುಕಿ ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದ 10 ತಿಂಗಳ ಮಗು- ಕೆಎಂಸಿ ವೈದ್ಯರಿಂದ ರಕ್ಷಣೆ

ಮತದಾರ 85 ವರ್ಷಕ್ಕಿಂತ ಮೇಲ್ಪಟ್ಟವರಾಗಿರುವುದರಿಂದ ಇಆರ್‌ಒ/ಎಇಆರ್‌ಒ ಮತ್ತು ಬಿಎಲ್‌ಒ ಅವರ ನಿವಾಸಕ್ಕೆ ಭೇಟಿ ನೀಡಿ ಇದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿ ಒಂದೇ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಮನ್ಸ್ ನೀಡುವುದು ಯಾವುದೇ ವಿಶೇಷ ಕ್ರಮವಲ್ಲ ಎಂದು ಅದು ಹೇಳಿದೆ.