ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಲಾಖ್ ನೀಡಲು ವಕೀಲರು ಏಕೆ ಬೇಕು? ಸುಪ್ರೀಂ ಕೋರ್ಟ್ ಪಶ್ನೆ

ವಿಚ್ಛೇದನ ನೀಡಲು ಮೂರನೇ ವ್ಯಕ್ತಿ ನೊಟೀಸ್ ನೀಡುವ ಅಗತ್ಯವೇನಿದೆ ಎಂದು ಸುಪ್ರೀಂ ಕೋರ್ಟ್ (supreme Court) ಪ್ರಶ್ನಿಸಿದೆ. ಹೊಸ ತ್ರಿವಳಿ ತಲಾಖ್ ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯ ತಲಾಖ್-ಎ-ಹಸನ್‌ನ ಕಾನೂನುಬದ್ಧತೆ ಮತ್ತು ಸಾಮಾಜಿಕ ಪರಿಣಾಮವನ್ನು ಪ್ರಶ್ನಿಸಿದೆ. ಅಲ್ಲದೇ ವಿಚ್ಛೇದನಕ್ಕೆ ನೊಟೀಸ್‌ಗಳನ್ನು ನೀಡಲು ವಕೀಲರನ್ನು ಬಳಸುವುದನ್ನು ಆಕ್ಷೇಪಿಸಿದೆ.

ತಲಾಖ್-ಎ-ಹಸನ್‌ಗೆ ಏಕೆ ಅನುಮತಿಸಬೇಕು ಎಂದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -

ಬೆಂಗಳೂರು: ತಲಾಖ್ (Talaq) ನೀಡಲು ಮೂರನೇ ವ್ಯಕ್ತಿ ನೊಟೀಸ್ ಕಳುಹಿಸುವುದು ಮಹಿಳೆಯರ ಘನತೆಗೆ ಧಕ್ಕೆ ತರುವ ಕೃತ್ಯವಾಗಿದೆ. ಇದನ್ನು ಸುಪ್ರೀಂ ಕೋರ್ಟ್ (Supreme Court) ಮಾನ್ಯ ಮಾಡುವುದು ಸಾಧ್ಯವಿಲ್ಲ. ನೊಟೀಸ್ (Talaq notice) ಕಳುಹಿಸಲು ವಕೀಲರನ್ನು (lawyer) ಸಂಪರ್ಕಿಸಬಹುದಾದ ಪತಿ ಈ ಬಗ್ಗೆ ನೇರವಾಗಿ ತನ್ನ ಪತ್ನಿಯ ಬಳಿ ಯಾಕೆ ಸಂವಹನ ಮಾಡಬಾರದು ಎಂದು ಪ್ರಶ್ನಿಸಿದೆ. ಸುಸಂಸ್ಕೃತ ಆಧುನಿಕ ಸಮಾಜವು ಈ ರೀತಿಯ ಪದ್ಧತಿಯನ್ನು ಏಕೆ ಅನುಮತಿಸಬೇಕು? ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ (Justices Surya Kant) ಪ್ರಶ್ನಿಸಿದ್ದಾರೆ.

ವಿಚ್ಛೇದನ ವೈಯಕ್ತಿಕ ವಿಷಯ. ಇದರಲ್ಲಿ ಮೂರನೇ ವ್ಯಕ್ತಿ ನೊಟೀಸ್ ಕಳುಹಿಸುವುದರ ಸಾಮಾಜಿಕ ಪರಿಣಾಮದ ಬಗ್ಗೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ತಲಾಖ್-ಎ-ಹಸನ್‌ನ ಸಾಂವಿಧಾನಿಕ ಪುನರ್ ವಿಮರ್ಶೆಗೆ ಬುಧವಾರ ಸೂಚನೆ ನೀಡಿದೆ.

ಇದನ್ನೂ ಓದಿ: Bangalore Cabs KSP App: ಕ್ಯಾಬ್​ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್​ ಅಂಟಿಸಲು ಸೂಚನೆ; ಪೊಲೀಸರಿಂದ ಹೊಸ ಮಾರ್ಗ ಸೂಚಿ ಬಿಡುಗಡೆ

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಸೇರಿದಂತೆ ಐದು ನ್ಯಾಯಾಧೀಶರ ಪೀಠವು ತಲಾಖ್-ಎ-ಹಸನ್‌ನ ಸವಾಲಿನ ಬಗ್ಗೆ ಉಲ್ಲೇಖಿಸಿದ್ದಾರೆ.

ತಲಾಖ್-ಎ-ಹಸನ್‌ ಧಾರ್ಮಿಕ ಆಚರಣೆಯನ್ನು ರದ್ದುಗೊಳಿಸುವುದರ ಬಗ್ಗೆ ಅಲ್ಲ. ಅದು ಸಾಂವಿಧಾನಿಕ ತತ್ತ್ವಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ. ಇಸ್ಲಾಮಿಕ್ ಕಾನೂನಿನಲ್ಲಿ ತಲಾಖ್‌ ವಿವರಣೆಗಳು ಮತ್ತು ಅಗತ್ಯವಿರುವ ಕಾನೂನು ಪ್ರಶ್ನೆಗಳ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ಹೊಸ ತ್ರಿವಳಿ ತಲಾಖ್ ಪ್ರಕರಣದಲ್ಲಿ ಪುರುಷರು ತಮ್ಮ ಪತ್ನಿಗೆ ವಕೀಲರ ಮೂಲಕ ನೊಟೀಸ್ ಗಳನ್ನು ಕಳುಹಿಸುತ್ತಿದ್ದರು. ತಲಾಖ್-ಎ-ಹಸನ್ ಮೂಲಕ ಪತಿಗೆ ಮೂರು ತಿಂಗಳ ಅವಧಿಯಲ್ಲಿ ತಿಂಗಳಿಗೊಮ್ಮೆ ತಲಾಖ್ ಎಂದು ಹೇಳಲು ಅವಕಾಶವಿದೆ. ಒಂದು ವೇಳೆ ದಂಪತಿ ಒಟ್ಟಿಗೆ ವಾಸಿಸಲು ಇಚ್ಛೆ ಪಡದೇ ಇದ್ದರೆ ಮೂರನೇ ಬಾರಿ ತಲಾಖ್ ಘೋಷಣೆ ಬಳಿಕ ವಿಚ್ಛೇದನವು ಅಂತಿಮವಾಗುತ್ತದೆ. ಮೊದಲ ಅಥವಾ ಎರಡನೇ ಬಾರಿ ತಲಾಖ್ ಹೇಳಿದ ಮೇಲೆ ರದ್ದುಗೊಳಿಸುವ ಅವಕಾಶವಿರುತ್ತಿತ್ತು. 2017ರಲ್ಲಿ ನ್ಯಾಯಾಲಯವು ಈ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಹೇಳಿ ರದ್ದುಪಡಿಸಿತ್ತು.

ಪತ್ರಕರ್ತೆ ಬೆನಜೀರ್ ಹೀನಾ ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಪತಿ ಮರುಮದುವೆಯಾದ ಮೇಲೆ ಮೂರನೇ ವ್ಯಕ್ತಿಯಿಂದ ಬಂದ ನೊಟೀಸ್ ನಿಂದಾಗಿ ನಾವು ನಮ್ಮ ವೈವಾಹಿಕ ಸ್ಥಿತಿಯನ್ನು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳ ಶಾಲಾ ಪ್ರವೇಶಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ನ್ಯಾಯಪೀಠದ ಮುಂದೆ ತಿಳಿಸಿದ್ದಾರೆ. ಇದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ.

ನ್ಯಾಯಾಲಯದಲ್ಲಿ ಹೀನಾ ಅವರ ಉಪಸ್ಥಿತಿಯು ಸಮಸ್ಯೆಯ ಆಳದ ಬಗ್ಗೆ ಒತ್ತಿ ಹೇಳುತ್ತದೆ ಎಂದ ನ್ಯಾಯಮೂರ್ತಿ ಕಾಂತ್, ಇಂದು ನಮ್ಮ ಮುಂದೆ ಒಬ್ಬ ಪತ್ರಕರ್ತ, ವೈದ್ಯರು ಇದ್ದಾರೆ. ಹೀಗಾದರೆ ದೂರದ ಪ್ರದೇಶಗಳಲ್ಲಿ ವಾಸಿಸುವ ಯಾರೂ ಕೇಳಲಾಗದ ಧ್ವನಿಗಳ ಬಗ್ಗೆ ಯೋಚಿಸಬೇಕಿದೆ. ನ್ಯಾಯಲಯ ಪ್ರವೇಶವು ಧ್ವನಿ ಎತ್ತಬಲ್ಲವರಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಕೂಡ ಅವರು ತಿಳಿಸಿದ್ದಾರೆ.

ಈ ಪ್ರಕರಣ ಕೇವಲ ವೈಯಕ್ತಿಕವಾದದ್ದು ಅಲ್ಲ. ಇದು ತೀವ್ರ ತಾರತಮ್ಯವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: MLA S.R. Srinivas: ಕಂದಾಯ ಗ್ರಾಮ ರಚನೆಗೆ ದಾಖಲಾತಿ ಸಿದ್ದ: ಶಾಸಕ ಎಸ್.ಆರ್.ಶ್ರೀನಿವಾಸ್

ಹೀನಾ ಅವರ ಮಾಜಿ ಪತಿಯ ಪರವಾಗಿ ಹಿರಿಯ ವಕೀಲ ಎಂ.ಆರ್. ಶಂಶಾದ್ ಇದನ್ನು ಸಮರ್ಥಿಸಿಕೊಂಡರೆ ನ್ಯಾಯಪೀಠವು ಮುಂದಿನ ವಿಚಾರಣೆಗೆ ಅವರ ಪತಿ ಹಾಜರಾಗುವಂತೆ ನ್ಯಾಯಪೀಠ ಆದೇಶಿಸಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಸಮಸ್ತ ಕೇರಳ ಜಮಿಯಾತುಲ್ ಉಲಮಾ ಮಧ್ಯಪ್ರವೇಶಿಸಲು ಪೀಠವು ಅನುಮತಿ ನೀಡಿತು. ಅಲ್ಲದೇ ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ, ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಕೂಡ ಅಭಿಪ್ರಾಯ ಸಲ್ಲಿಸುವಂತೆ ತಿಳಿಸಿದೆ.