ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ಇವನೇ ನೋಡಿ ತಹವ್ವೂರ್ ರಾಣಾ; ಮುಂಬೈ ದಾಳಿ ಆರೋಪಿಯ ಮೊದಲ ಫೋಟೊ ರಿಲೀಸ್‌

ಅಮೆರಿಕದಿಂದ ಹಸ್ತಾಂತರಿಸಲಾದ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಗುರುವಾರ (ಏ. 10) ಭಾರತಕ್ಕೆ ಕರೆತರಲಾಗಿದ್ದು, ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಂಧಿಸಲಾಗಿದೆ. ರಾಣಾನನ್ನು ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಪಟಿಯಾಲಾ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಇವನೇ ನೋಡಿ ತಹವ್ವೂರ್ ರಾಣಾ

ತಹಾವ್ವುರ್‌ ರಾಣಾನನ್ನು ಕರೆದೊಯ್ದ ಅಧಿಕಾರಿಗಳು.

Profile Ramesh B Apr 10, 2025 11:31 PM

ಹೊಸದಿಲ್ಲಿ: ಅಮೆರಿಕದಿಂದ ಹಸ್ತಾಂತರಿಸಲಾದ 26/11 ಮುಂಬೈ ಭಯೋತ್ಪಾದಕ ದಾಳಿ (26/11 Mumbai terror attacks)ಯ ಆರೋಪಿ ತಹವ್ವೂರ್ ರಾಣಾ (Tahawwur Rana)ನನ್ನು ಗುರುವಾರ (ಏ. 10) ಭಾರತಕ್ಕೆ ಕರೆತರಲಾಗಿದ್ದು, ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಂಧಿಸಲಾಗಿದೆ. ರಾಣಾನನ್ನು ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಕಾರಿಗಳು ಪಟಿಯಾಲಾ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ರಾಣಾ ಭಾರತಕ್ಕೆ ಬಂದ ನಂತರ ಇದೀಗ ಆತನ ಮೊದಲ ಫೋಟೊ ಹೊರ ಬಿದ್ದಿದೆ. ಕೈದಿಯ ಸಮವಸ್ತ್ರ ಧರಿಸಿದ್ದ ಆತನನ್ನು ಕೋರ್ಟ್‌ಗೆ ಕರೆಯೊಯ್ಯುತ್ತಿರುವ ಫೋಟೊ ಇದಾಗಿದೆ. 2008ರಲ್ಲಿ 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯಲ್ಲಿ ರಾಣಾನ ಪಾತ್ರವಿರುವ ಬಗ್ಗೆ ತಮಿಖೆ ನಡೆಯಲಿದೆ.



ರಾಣಾ ದಿಲ್ಲಿಗೆ ಬಂದಾಗಿನಿಂದ ನಡೆದ ಪ್ರಮುಖ ಬೆಳವಣಿಗಗಳು

  • ತಹವ್ವೂರ್ ರಾಣಾ (64)ನನ್ನು ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬುಧವಾರ ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟ ರಾಣಾ ಇದ್ದ ವಿಮಾನ ಗುರುವಾರ ದಿಲ್ಲಿಯ ಪಾಲಂನಲ್ಲಿ ಬಂದಿಳಿಯಿತು. ಆತನನ್ನು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
  • ಬಳಿಕ ಈತನನ್ನು ಹೆಚ್ಚಿನ ಭದ್ರತೆಯೊಂದಿಗೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ಇರಿಸುವ ಸಾಧ್ಯತೆ ಇದೆ. ಅಂತಿಮವಾಗಿ ವಿಚಾರಣೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
  • ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ, ಕೊಲೆ, ಫೋರ್ಜರಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  • ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ತಮ್ಮ ಆಡಳಿತವು ಅನುಮೋದನೆ ನೀಡಿದೆ ಎಂದು ಘೋಷಿಸಿದ್ದರು. ಅದಾದ 2 ತಿಂಗಳ ನಂತರ ರಾಣಾನ ಹಸ್ತಾಂತರ ನಡೆದಿದೆ. "ಇದಕ್ಕಾಗಿ ನಾನು ದೇಶದ ಪ್ರಧಾನಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ" ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
  • ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವೂರ್ ರಾಣಾ, 2008ರಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ನಡೆದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ. ದಾಳಿಯ ಪ್ರಮುಖ ಆರೋಪಿ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಗೆ ರಾಣಾ ಆರ್ಥಿಕ ಬೆಂಬಲವನ್ನು ನೀಡಿದ್ದಾನೆ ಎನ್ನುವ ಆರೋಪವಿದೆ.

ಈ ಸುದ್ದಿಯನ್ನೂ ಓದಿ: Tahawwur Rana: ಯುಎಪಿಎ ಕಾಯ್ದೆಯಡಿ ಉಗ್ರ ರಾಣಾ ಅರೆಸ್ಟ್‌; NIA ಹೇಳಿದ್ದೇನು?

  • 2008ರ ನವೆಂಬರ್‌ನಲ್ಲಿ ರಾಣಾ ಭಾರತಕ್ಕೆ ಭೇಟಿ ನೀಡಿದ್ದ ಎನ್ನಲಾಗಿದೆ.
  • 2009ರ ಅಕ್ಟೋಬರ್‌ನಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ಕೋಪನ್ ಹ್ಯಾಗನ್‌ನಲ್ಲಿ ಪತ್ರಿಕೆಯ ಮೇಲೆ ದಾಳಿ ಮಾಡುವ ವಿಫಲ ಯೋಜನೆಗೆ ಬೆಂಬಲ ನೀಡಿದ್ದಕ್ಕಾಗಿ ಮತ್ತು ಮುಂಬೈ ದಾಳಿಗೆ ಕಾರಣವಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾಗೆ ಭೌತಿಕ ಬೆಂಬಲವನ್ನು ಒದಗಿಸಿದ್ದಕ್ಕಾಗಿ ರಾಣಾನನ್ನು ಚಿಕಾಗೋದಲ್ಲಿ ಬಂಧಿಸಿದ್ದರು.
  • 2008ರ ಮುಂಬೈ ದಾಳಿಯಲ್ಲಿ ನಡೆಸಿದ್ದ 10 ಭಯೋತ್ಪಾದಕರಲ್ಲಿ ಅಜ್ಮಲ್ ಕಸಬ್ ಒಬ್ಬನನ್ನು ಮಾತ್ರ ಜೀವಂತವಾಗಿ ಹಿಡಿದು 2012ರಲ್ಲಿ ಗಲ್ಲಿಗೇರಿಸಲಾಗಿತ್ತು.
  • ರಾಣಾ ಎರಡು ದಶಕಗಳಿಂದ ತನ್ನ ಪಾಕಿಸ್ತಾನದ ದಾಖಲೆಗಳನ್ನು ನವೀಕರಿಸಿಲ್ಲ ಮತ್ತು ಆತ ಕೆನಡಾದ ಪ್ರಜೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.