ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Yoga Day: 73 ವರ್ಷದ ರಾಜ್ಯಪಾಲ್ಯರ ಫಿಟ್‌ನೆಸ್‌ ಕಂಡು ಬೆರಗಾದ ಜನ; 51 ಪುಷ್‌ ಅಪ್‌ ಮಾಡಿದ ಗವರ್ನರ್‌!

ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ (International Yoga Day) ದಿನವನ್ನು ಆಚರಿಸಲಾಗುತ್ತದೆ. ಇಂದು ದೇಶಾದ್ಯಂತ ಯೋಗ (Tamil Nadu Governor) ದಿನಾಚರಣೆ ಮಾಡಲಾಗಿದೆ. ಮಧುರೈನ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ ಅವರ ಫಿಟ್‌ನೆಸ್‌ ನೋಡಿ ಎಲ್ಲರೂ ಬೆರಗಾಗಿದ್ದಾರೆ.

73 ವರ್ಷದ ರಾಜ್ಯಪಾಲ್ಯರ ಫಿಟ್‌ನೆಸ್‌ ಕಂಡು ಬೆರಗಾದ ಜನ; ವಿಡಿಯೋ ನೋಡಿ

Profile Vishakha Bhat Jun 21, 2025 1:10 PM

ಚೆನ್ನೈ: ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ (International Yoga Day) ದಿನವನ್ನು ಆಚರಿಸಲಾಗುತ್ತದೆ. ಇಂದು ದೇಶಾದ್ಯಂತ ಯೋಗ (Tamil Nadu Governor) ದಿನಾಚರಣೆ ಮಾಡಲಾಗಿದೆ. ಮಧುರೈನ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ ಅವರ ಫಿಟ್‌ನೆಸ್‌ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 73 ವರ್ಷದ ರಾಜ್ಯಪಾಲರು ಅದ್ಭುತ ಪ್ರದರ್ಶನ ನೀಡಿದರು.

ಟ್ರ್ಯಾಕ್‌ಸೂಟ್ ಮತ್ತು ವೆಸ್ಟ್ ಧರಿಸಿ ಬಂದಿದ್ದ ರಾಜ್ಯಪಾಲರು ಯೋಗ ಮಾಡಿದ್ದಾರೆ. ಯೋಗ ಅವಧಿಯ ನಂತರ ಅವರು ಸತತ 51 ಪುಷ್-ಅಪ್‌ಗಳನ್ನು ಸಲೀಸಾಗಿ ಮಾಡಿದ್ದಾರೆ. ಅವರು ಪುಷ್‌ ಅಪ್‌ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿದರು. ರವೀಂದ್ರ ನಾರಾಯಣ ರವಿ ಅವರು ಈ ಹಿಂದೆ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಅವರು ಪುಷಪ್‌ ಮಾಡುತ್ತಿದ್ದರೆ ಇವರಿಗೆ 70 ವರ್ಷವಾಗಿದೆಯೋ ಇಲ್ಲ 30 ಎಂದು ಜನ ಹೇಳಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ. ನಿಯಮಿತ ಯೋಗಾಭ್ಯಾಸ ದೈಹಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: International Yoga Day 2025: ರಾಜ್ಯಾದ್ಯಂತ ಯೋಗ ದಿನಾಚರಣೆ, ವಿಧಾನಸೌಧದ ಮುಂದೆ ಸಾವಿರಾರು ಮಂದಿಯ ಯೋಗ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ವಿಶಾಖಪಟ್ಟಣದಲ್ಲಿ (Visakhapatnam) 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ನೇತೃತ್ವ ವಹಿಸಿದರು. ವಿಶಾಖಪಟ್ಟಣದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ, ಯೋಗವನ್ನು ಮನುಕುಲದ 'ವಿರಾಮ ಬಟನ್' ಎಂದು ಕರೆದರು. ವಿಶಾಖಪಟ್ಟಣದಲ್ಲಿ ಸಾವಿರಾರು ಮಂದಿಯ ಜೊತೆಗೆ ಇಂದು ಮುಂಜಾನೆ ಯೋಗದಲ್ಲಿ ಅವರು ಪಾಲ್ಗೊಂಡರು. ನಂತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಯೋಗವನ್ನು "ಮಾನವೀಯತೆಯು ಉಸಿರಾಡಲು, ಸಮತೋಲನಗೊಳಿಸಲು ಮತ್ತು ಮತ್ತೆ ಪೂರ್ಣಗೊಳ್ಳಲು ಅಗತ್ಯವಿರುವ ವಿರಾಮ ಬಟನ್" ಎಂದು ಬಣ್ಣಿಸಿದರು.