ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rupee symbol Row: ʻ₹ʼ ಚಿಹ್ನೆ ಡಿಸೈನ್‌ ಮಾಡಿದವರು ಯಾರು ಗೊತ್ತಾ? ಭುಗಿಲೆದ್ದಿರುವ ವಿವಾದದ ಬಗ್ಗೆ ಆತ ಹೇಳೋದೇನು?

Rupee symbol Row: ತಮಿಳುನಾಡು ಸರ್ಕಾರ ಇಂದು ಮಂಡನೆಯಾಗಲಿರುವ 2025ರ ಬಜೆಟ್‌ನಿಂದ ಅಧಿಕೃತ ರೂಪಾಯಿ ಚಿಹ್ನೆಯನ್ನು (₹) ತೆಗೆದು ಹಾಕಲು ನಿರ್ಧರಿಸಿದೆ. ಇದೀಗ ಇದರ ದೇಶಾದ್ಯಂತ ಬೆನ್ನಲ್ಲೇ ರೂಪಾಯಿಯ ಚಿಹ್ನೆ (₹) ಡಿಸೈನ್‌ ಮಾಡಿದ್ದ ಡಿಎಂಕೆ ಶಾಸಕನ ಪುತ್ರ ಡಿ. ಉದಯ್‌ ಕುಮಾರ್‌ ಈ ಬಗ್ಗೆ ಫಸ್ಟ್‌ ರಿಯಾಕ್ಷನ್‌ ನೀಡಿದ್ದಾರೆ.

ʻ₹ʼ ಚಿಹ್ನೆ ಡಿಸೈನ್ ಮಾಡಿದವರು ಯಾರು ಗೊತ್ತಾ?

Profile Rakshita Karkera Mar 14, 2025 12:14 PM

ಚೆನ್ನೈ: ಎಂ.ಕೆ.ಸ್ಟಾಲಿನ್‌ (MK Stalin) ನೇತೃತ್ವದ ಡಿಎಂಕೆ (DMK) ಸರ್ಕಾರ ರಾಷ್ಟ್ರೀಯ ಕರೆನ್ಸಿ ರೂಪಾಯಿಯ ಚಿಹ್ನೆ (₹) ದೇವನಾಗರಿ ಲಿಪಿಯಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಬಜೆಟ್‌ ಲೋಗೋದಲ್ಲಿ(Rupee symbol Row) ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದ್ದು, ಇದು ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಇದೀಗ ಇದರ ದೇಶಾದ್ಯಂತ ಬೆನ್ನಲ್ಲೇ ರೂಪಾಯಿಯ ಚಿಹ್ನೆ (₹) ಡಿಸೈನ್‌ ಮಾಡಿದ್ದ ಡಿಎಂಕೆ ಶಾಸಕನ ಪುತ್ರ ಡಿ. ಉದಯ್‌ ಕುಮಾರ್‌(D Udaya Kumar) ಈ ಬಗ್ಗೆ ಫಸ್ಟ್‌ ರಿಯಾಕ್ಷನ್‌ ನೀಡಿದ್ದಾರೆ. ಇದು ಇದು 2009ರಲ್ಲೇ ಮೂಡಿರುವ ಕಲ್ಪನೆ, ಸ್ಪರ್ಧೆಯ ಭಾಗವಾಗಿ ಆ ಲೋಗೋವನ್ನು ಕ್ರಿಯೇಟ್‌ ಮಾಡಿದ್ದೆ. ಒಬ್ಬ ಡಿಸೈನರ್‌ ಆಗಿ ಎಂತಹದ್ದೇ ಸವಾಲುಗಳನ್ನು ಎದುರಿಸಲು ಸಿದ್ದರಿರಬೇಕು ಎಂದು ಹೇಳಿದ್ದಾರೆ.

ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಡಿಎಂಕೆ ಸರ್ಕಾರ ಈ ನಿರ್ಧಾರದ ವಿರುದ್ದ ಗುಡುಗಿದ್ದರು. 2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್‌ನ ಲೋಗೋ ತಮಿಳಿಗನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬದಲಾಯಿಸಿದೆ. ಈ ಚಿಹ್ನೆಯನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿಯೂ ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಉದಯ್ ಕುಮಾರ್ ಮಾಜಿ ಡಿಎಂಕೆ ಶಾಸಕರ ಮಗ. ಎಂ.ಕೆ. ಸ್ಟಾಲಿನ್ ಅವರದ್ದು ಮೂರ್ಖತನದ ನಿರ್ಧಾರ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಇದರ ಬೆನ್ನಲ್ಲೇ ಉದಯ್‌ ಕುಮಾರ್‌ ಪ್ರತಿಕ್ರಿಯಿಸಿದ್ದು,ನಮ್ಮ ಕೆಲಸದ ಬಗ್ಗೆ ಹೆಮ್ಮೆಯಿದೆ. ಒಬ್ಬ ವಿನ್ಯಾಸಕನು ತನ್ನ ಕೆಲಸದಲ್ಲಿ ಅಂತಹ ಸವಾಲುಗಳನ್ನು ಎದುರಿಸಲು ಸಿದ್ಧನಾಗಿರಬೇಕು. ಟೀಕೆಗಳು ನನ್ನ ಕೆಲಸದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ನಮ್ಮ ಎಲ್ಲಾ ವಿನ್ಯಾಸಗಳು ಯಶಸ್ವಿಯಾಗಿಲ್ಲ ಅಥವಾ ಮೆಚ್ಚುಗೆ ಪಡೆದಿಲ್ಲ. ಹಲವು ಬಾರಿ ಟೀಕೆಗಳು ವ್ಯಕ್ತವಾಗಿವೆ. ಅವುಗಳಿಂದ ಪಾಠ ಕಲಿತಿದ್ದೇನೆ. ನಾನು ಇದನ್ನು ನನ್ನ ಕೆಲಸಕ್ಕೆ ಆಗಿರುವ ಅಪಮಾನ ಎಂದು ಯಾವತ್ತೂ ಭಾವಿಸುವುದಿಲ್ಲ. ಈ ಲೋಗೋವನ್ನು ವಿನ್ಯಾಸಗೊಳಿಸುವ ಸಮಯದಲ್ಲಿ ನಮಗಿದ್ದ ಏಕೈಕ ಗುರಿ ಎಂದರೆ ಹೊಸ ಮತ್ತು ವ್ಯಾಪಕ ಬಳಕೆಗೆ ಸರಳವಾಗಿರುವಂತಹ ಲೋಗೋವನ್ನು ತಯಾರಿಸುವುದಷ್ಟೇ ಆಗಿತ್ತು. ಅದು ಇಷ್ಟು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ.

ಈ ಸುದ್ದಿಯನ್ನೂ ಓದಿ:Nirmala Sitharaman: ಬಜೆಟ್‌ ಲೋಗೋದಲ್ಲಿ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರದ ವಿರುದ್ಧ ಸಚಿವೆ ನಿರ್ಮಲಾ ಗರಂ

ಏನಿದು ವಿವಾದ?

ತಮಿಳುನಾಡಿನಲ್ಲಿ ಭಾಷಾ ವಿವಾದ ಭುಗಿಲೆದ್ದಿದ್ದು, ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ನೇತೃತ್ವದ ಡಿಎಂಕೆ (DMK) ಸರ್ಕಾರ ಸಮರ ಸಾರಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳುನಾಡು ಸರ್ಕಾರ ಶುಕ್ರವಾರ (ಮಾ. 14) ಮಂಡನೆಯಾಗಲಿರುವ 2025ರ ಬಜೆಟ್‌ನಿಂದ ಅಧಿಕೃತ ರೂಪಾಯಿ ಚಿಹ್ನೆಯನ್ನು (₹) ತೆಗೆದು ಹಾಕಲು ನಿರ್ಧರಿಸಿದೆ. ಅದರ ಬದಲಿಗೆ ತಮಿಳು ಲಿಪಿಯನ್ನು ಅಳವಡಿಸಿಕೊಳ್ಳಲಿದೆ (Rupee Symbol). ಗುರುವಾರ ಬಜೆಟ್‌ನ ಹೊಸ ಲೋಗೋವನ್ನು ರಿಲೀಸ್‌ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy-NEP)ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರ ಕರೆನ್ಸಿ ಚಿಹ್ನೆಯನ್ನು ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ. ಇದುವರೆಗೆ ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ಅಧಿಕೃತ ರೂಪಾಯಿ ಚಿಹ್ನೆ (₹)ಯನ್ನೇ ಬಳಸುತ್ತಿತ್ತು. ಇದೀಗ ಮೊದಲ ಬಾರಿಗೆ ಬಜೆಟ್‌ ಲೋಗೋದಲ್ಲಿ ಎಂ.ಕೆ.ಸ್ಟಾಲಿನ್‌ ಸರ್ಕಾರ ತಮಿಳು ಚಿಹ್ನೆಯನ್ನು ಬಳಸಲಿದೆ. ರೂಪಾಯಿ ಚಿಹ್ನೆ ಬದಲು ತಮಿಳು ಅಕ್ಷರ ಇರಲಿದ್ದು, ʼʼಎಲ್ಲರಿಗೆ ಎಲ್ಲವೂʼʼ ಎನ್ನುವ ಟ್ಯಾಗ್‌ಲೈನ್‌ ಇದೆ.