ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: "ದೆಹಲಿ ಸ್ಫೋಟ ಮಾಡಿದ್ದು ನಾವೇ"; ಎರಡು ವರ್ಷದ ಪ್ಲಾನ್‌ ವಿಫಲವಾಗಿದ್ದೆಲ್ಲಿ? ಕೊನೆಗೂ ಬಾಯ್ಬಿಟ್ಟ ಉಗ್ರ

Red Fort Blast: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಉಗ್ರರು ಕೆಲ ಮಹತ್ವ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ಸಹಚರ ಡಾ. ಮುಝಮ್ಮಿಲ್ ಶಕೀಲ್, ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

"ದೆಹಲಿ ಸ್ಫೋಟ ಮಾಡಿದ್ದು ನಾವೇʼ ತಪ್ಪೊಂಪ್ಪಿಕೊಂಡ ಉಗ್ರ

ದೆಹಲಿ ಸ್ಫೋಟ (ಸಂಗ್ರಹ ಚಿತ್ರ) -

Vishakha Bhat
Vishakha Bhat Nov 22, 2025 12:17 PM

ನವದೆಹಲಿ: ದೆಹಲಿ ಸ್ಫೋಟಕ್ಕೆ (Delhi Blast) ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಉಗ್ರರು ಕೆಲ ಮಹತ್ವ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈಶ್-ಸಂಬಂಧಿತ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಭಾರತದ ಹಲವಾರು ನಗರಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎಂದು ತಿಳಿದು ಬಂದಿದೆ. 10/11 ಸ್ಫೋಟದ ಹಿಂದಿನ ಪಿತೂರಿಯನ್ನು ತನಿಖಾಧಿಕಾರಿಗಳು ಡಿಕೋಡ್ ಮಾಡುತ್ತಿರುವಾಗ, ಭಯೋತ್ಪಾದಕ ಶಂಕಿತರಲ್ಲಿ ಒಬ್ಬ ಉಗ್ರ ತಮ್ಮ ಯೋಜನೆ ಕುರಿತು ಅಧಿಕಾರಿಗಳಿಗೆ ಹೇಳಿದ್ದಾನೆ.

ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ಸಹಚರ ಡಾ. ಮುಝಮ್ಮಿಲ್ ಶಕೀಲ್, ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ವಿಚಾರಣೆಯ ಸಮಯದಲ್ಲಿ, ಸ್ಫೋಟಗಳಿಗೆ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಎರಡು ವರ್ಷಗಳಲ್ಲಿ ಈತ ಸ್ಫೋಟಕಗಳು, ರಿಮೋಟ್‌ಗಳು ಮತ್ತು ಇತರ ಬಾಂಬ್ ತಯಾರಿಕೆ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದೆವು ಎಂದು ಆತ ಹೇಳಿಕೊಂಡಿದ್ದಾನೆ. ಯೂರಿಯಾ ಮತ್ತು ಅಮೋನಿಯಂ ನೈಟ್ರೇಟ್ ಅನ್ನು ಖರೀದಿಸುವ ಕೆಲಸವನ್ನು ವೈದ್ಯರು ಮಾಡುತ್ತಿದ್ದರು.

ಮುಜಮ್ಮಿಲ್ ಹರಿಯಾಣದ ಗುರುಗ್ರಾಮ್ ಮತ್ತು ನುಹ್ ನಿಂದ 3 ಲಕ್ಷ ರೂ.ಗಳಿಗೆ 26 ಕ್ವಿಂಟಾಲ್ ಎನ್‌ಪಿಕೆ ರಸಗೊಬ್ಬರವನ್ನು ಖರೀದಿಸಿದ್ದ. ತರ ಸ್ಫೋಟಕ ವಸ್ತುಗಳನ್ನು ನುಹ್ ನಿಂದ ಖರೀದಿಸಿದರೆ, ಎಲೆಕ್ಟ್ರಾನಿಕ್ ಘಟಕಗಳನ್ನು ಫರಿದಾಬಾದ್‌ನ ಎರಡು ವಿಭಿನ್ನ ಮಾರುಕಟ್ಟೆಗಳಿಂದ ಖರೀದಿಸಲಾಗಿದೆ ಎಂದು ಆತ ಹೇಳಿದ್ದಾನೆ. ರಾಸಾಯನಿಕಗಳನ್ನು ಸ್ಥಿರ ವಾತಾವರಣದಲ್ಲಿ ಸಂಗ್ರಹಿಸಲು ಆತ ಡೀಪ್‌ ಫ್ರೀಜರ್‌ ಬಳಸುತ್ತಿದ್ದೆವು ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿದ್ದಾನೆ.

ದೆಹಲಿ ಸ್ಫೋಟ: ಉಮರ್ ಭೇಟಿಯಾಗಿದ್ದ ಮೌಲಾನಾ, ಶಿಕ್ಷಕನ ಬಂಧನ

ಸ್ಫೋಟಕಗಳಲ್ಲಿ ಬಳಸಲು ರಸಗೊಬ್ಬರವನ್ನು ಸಂಸ್ಕರಿಸುವುದು ಮತ್ತು ರಾಸಾಯನಿಕಗಳು ಮತ್ತು ಇತರ ಪದಾರ್ಥಗಳನ್ನು ಜೋಡಿಸುವುದು ಆತನ ಸಹಚರ ಉಮರ್‌ನ ಕೆಲಸವಾಗಿತ್ತು. ರಾಸಾಯನಿಕಗಳನ್ನು ತಯಾರಿಸಲು ಯೂರಿಯಾವನ್ನು ಪುಡಿ ಮಾಡಲು ಮುಜಮ್ಮಿಲ್ ಬಳಸುತ್ತಿದ್ದ ಹಿಟ್ಟಿನ ಗಿರಣಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕ ಘಟಕದ ಸದಸ್ಯರು ಸ್ಫೋಟಕ ವಸ್ತುಗಳನ್ನು ಖರೀದಿಸಲು 26 ಲಕ್ಷ ರೂ. ಹಣವನ್ನು ಸಂಗ್ರಹಿಸಿದ್ದರು. ನಂತರ ಆ ಮೊತ್ತವನ್ನು ಉಮರ್‌ಗೆ ಹಸ್ತಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ, ಆತ್ಮಹತ್ಯಾ ಬಾಂಬರ್ ಸ್ವತಃ 2 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದ ಎಂದು ಹೇಳಲಾಗಿದೆ.

ಮುಝಮ್ಮಿಲ್ ಮತ್ತೆ 5 ಲಕ್ಷ ರೂ.ಗಳನ್ನು ನೀಡಿದರೆ, ಭಯೋತ್ಪಾದಕ ಸಂಘಟನೆಯ ಇತರ ಸದಸ್ಯರಾದ ಆದಿಲ್ ರಾಥರ್ ಮತ್ತು ಮುಜಾಫರ್ ರಾಥರ್ ಕ್ರಮವಾಗಿ 8 ಲಕ್ಷ ಮತ್ತು 6 ಲಕ್ಷ ರೂ.ಗಳನ್ನು ನೀಡಿದ್ದರು. ಡಾ ಶಹೀನ್‌ ಸಹ ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ್ದರು ಎನ್ನಲಾಗಿದೆ.