ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನನ್ನಿಂದ ಟಿಪ್ಸ್‌ ತೆಗೆದುಕೊಂಡು ಈಗ ಪಾಕಿಸ್ತಾನವನ್ನೇ ಟೀಕಿಸುತ್ತಿದ್ದಾರೆʼ: ಇರ್ಫಾನ್‌ ಪಠಾಣ್‌ಗೆ ವಸೀಮ್‌ ಅಕ್ರಮ್‌ ತಿರುಗೇಟು!

ಸದ್ಯ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಸಾಕಷ್ಟು ಅಚ್ಚರಿ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚಿನ ಪಾಕಿಸ್ತಾನ ತಂಡದ ಪ್ರದರ್ಶನವೇ ಇದಕ್ಕೆ ಕಾರಣ. ಇದಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ ಅವರು ಪ್ರತಿಕ್ರಿಯೆ ನೀಡಿ ಟೀಕಿಸಿದ್ದರು. ಇದಕ್ಕೆ ಇದೀಗ ಪಾಕ್‌ ದಿಗ್ಗಜ ವಸೀಮ್‌ ಅಕ್ರಮ್‌ ತಿರುಗೇಟು ನೀಡಿದ್ದಾರೆ.

ನನ್ನಿಂದ ಟಿಪ್ಸ್‌ ತೆಗೆದುಕೊಂಡು ನಮ್ಮನ್ನೇ ಟೀಕಿಸುತ್ತೀರಾ: ಅಕ್ರಮ್‌!

ಇರ್ಫಾನ್‌ ಪಠಾಣ್‌ ವಿರುದ್ಧ ವಸೀಮ್‌ ಅಕ್ರಮ್‌ ಆಕ್ರೋಶ. -

Profile
Ramesh Kote Sep 4, 2026 7:59 PM

ನವದೆಹಲಿ: ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಪಾಕಿಸ್ತಾನ ತಂಡ (Pakistan Cricket team) ಇದೀಗ ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಅದರಂತೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (Irfan Pathan) ಕೂಡ ಟೀಕಿಸಿದ್ದಾರೆ. ಈಗ ಮಾತ್ರವಲ್ಲ, ಹಿಂದಿನಿಂದಲೂ ಪಾಕ್‌ ತಂಡದ ಕಳಪೆ ಪ್ರದರ್ಶನವನ್ನು ಪಠಾಣ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಟೀಕಿಸುತ್ತಾ ಬಂದಿದ್ದಾರೆ. ಇದೀಗ ಪಾಕ್‌ ಮಾಜಿ ನಾಯಕ ಹಾಗೂ ದಿಗ್ಗಜ ವೇಗದ ಬೌಲರ್‌ ವಸೀಮ್‌ ಅಕ್ರಮ್‌ (Wasim Akram), ಇರ್ಫಾನ್‌ ಪಠಾಣ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಇರ್ಫಾನ್‌ ಪಠಾಣ್‌ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಪಾಕ್‌ ದಿಗ್ಗಜ ವಸೀಮ್‌ ಅಕ್ರಮ್‌ ಅವರ ಬಳಿ ಬೌಲಿಂಗ್‌ ಟಿಪ್ಸ್‌ ಪಡೆದಿದ್ದರು. ಇದರ ಸಹಾಯದಿಂದ ಪಠಾಣ್‌ ಹಲವು ವರ್ಷಗಳ ಕಾಲ ಭಾರತ ತಂಡದ ಪ್ರಮುಖ ವೇಗದ ಬೌಲರ್‌ ಆಗಿ ಆಡಿದ್ದರು. ಮೂಲಕ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಳಲ್ಲಿ ಒಬ್ಬರಾಗಿ ದೊಡ್ಡ ಹೆಸರು ಮಾಡಿದ್ದಾರೆ. 2007ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಠಾಣ್‌, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಅಂದಿನಿಂದ ಇರ್ಫಾನ್‌ ಪಠಾಣ್‌, ಕ್ರಿಕೆಟ್‌ ಕಾಮೆಂಟೇಟರ್‌, ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮುಂದುವರಿಯುತ್ತಿದ್ದಾರೆ. ಅವರು ತಮ್ಮ ಸೋಶಿಯಲ್‌ ಮೀಡಿಯಾ ಮೂಲಕ ತಮ್ಮದೇ ಅದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಪಾಕಿಸ್ತಾನ ತಂಡದ ಟೀಕೆಗಳಿಂದ ವಸೀಮ್‌ ಅಕ್ರಮ್‌ ಕೆರಳಿದ್ದಾರೆ. ಒಮ್ಮೆ ನನ್ನಿಂದ ಟಿಪ್ಸ್‌ ತೆಗೆದುಕೊಂಡು ಇದೀಗ ನಮ್ಮ ತಂಡದ ವಿರುದ್ಧವೇ ಮಾತನಾಡುತ್ತಿದ್ದಾರೆ ದಿಗ್ಗಜ ವೇಗಿ ತಿರುಗೇಟು ನೀಡಿದ್ದಾರೆ.

ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್‌-19 ತಂಡದ ರೋಹಿತ್‌ ಯಾದವ್‌ಗೆ 2 ವರ್ಷ ನಿಷೇಧ!

"ಇರ್ಫಾನ್ ಪಠಾಣ್ 2004ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ನನ್ನನ್ನು ಭೇಟಿಯಾಗಿದ್ದರು. ಆಗ ನಾನು ಇಎಸ್‌ಪಿಎನ್‌ ಸ್ಟಾರ್‌ ಪರವಾಗಿ ಕಾಮೆಂಟರಿ ಮಾಡುತ್ತಿದ್ದೆ. ಇರ್ಫಾನ್ ನನ್ನ ದೊಡ್ಡ ಅಭಿಮಾನಿಯಾಗಿದ್ದರು. ಅವರು ನಮ್ಮ ಆಟವನ್ನು ನೋಡುತ್ತಲೇ ಬೆಳೆದಿದ್ದರು,” ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಸೀಮ್‌ ಅಕ್ರಮ್ ಹೇಳಿದ್ದಾರೆ.

“ಆಗ ನಾನು ಅವರಿಗೆ ಅಲ್ಲಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ ತಮ್ಮ ವೃತ್ತಿಜೀವನದ ಆರಂಭದಲ್ಲೇ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಅವರ ಬೌಲಿಂಗ್ ಆ್ಯಕ್ಷನ್ ಆರಂಭದಿಂದಲೂ ನನ್ನ ಬೌಲಿಂಗ್‌ ಶೈಲಿಗೆ ಸಾಕಷ್ಟು ಹೋಲಿಕೆಯಾಗುತ್ತಿತ್ತು,” ಎಂದು ಅವರು ನೆನಪಿಸಿಕೊಂಡಿದ್ದಾರೆ.

“ಆಟಗಾರರು ನಿಮ್ಮ ಬಳಿ ಯಾವುದಾದರೂ ವಿಚಾರದ ಬಗ್ಗೆ ಸಲಹೆ ಕೇಳಿದಾಗ, ನೀವು ಮುಖ್ಯವಾಗಿ ಅವರ ಮನಸ್ಥಿತಿಯ ಬಗ್ಗೆ ಹೇಳುತ್ತೀರಿ. ಆ್ಯಕ್ಷನ್‌ನಂತಹ ವಿಚಾರಗಳು ಆ ಹಂತದಲ್ಲಿ ದೊಡ್ಡ ಸಮಸ್ಯೆಯಾಗಿರುವುದಿಲ್ಲ. ಏಕೆಂದರೆ ಅವರು ಈಗಾಗಲೇ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪಿರುತ್ತಾರೆ. ಮಣಿಕಟ್ಟಿನ ಸ್ಥಾನ ಹೇಗಿರಬೇಕು, ಬ್ಯಾಟರ್‌ನ ಆಟವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ವೈವಿಧ್ಯಮಯ ಎಸೆತಗಳನ್ನು ಬಳಸಬೇಕು, ಯಾವಾಗ ಬಳಸಬಾರದು ಎಂಬಂತಹ ವಿಚಾರಗಳ ಬಗ್ಗೆ ಸಲಹೆ ನೀಡಬಹುದು,” ಎಂದು ಅವರು ವಿವರಿಸಿದ್ದಾರೆ.

ತಮ್ಮ ದೊಡ್ಡ ದಾಖಲೆ ಮುರಿದ ಸ್ಮೃತಿ ಮಂಧಾನಾಗೆ ಮಿಥಾಲಿ ರಾಜ್‌ ವಿಶೇಷ ಸಂದೇಶ!

“ಹೀಗಾಗಿ, ಇರ್ಫಾನ್ ಜೊತೆಗಿನ ಆ ಸಮಯ ತುಂಬಾ ಖುಷಿಯದ್ದಾಗಿತ್ತು. ಇರ್ಫಾನ್ ಒಳ್ಳೆಯ ಹುಡುಗ. ಈಗಲೂ ಅವರು ನನ್ನನ್ನು ಭೇಟಿಯಾಗುತ್ತಿರುತ್ತಾರೆ. ಆದರೆ ಪಾಕಿಸ್ತಾನದ ವಿರುದ್ಧ ಒಂದಲ್ಲ ಒಂದು ವಿಷಯವನ್ನು ಟ್ವೀಟ್ ಮಾಡುತ್ತಲೇ ಇರುತ್ತಾರೆ ಎಂಬುದು ಬೇರೆ ವಿಚಾರ. ಆದರೆ ನಮ್ಮ ಅಭಿಮಾನಿಗಳೂ ಸಿದ್ಧರಾಗಿರುತ್ತಾರೆ. ಅವರು ಕೂಡ ಯಾವುದನ್ನೂ ಸುಮ್ಮನೆ ಬಿಟ್ಟುಬಿಡುವ ಸ್ವಭಾವ ಹೊಂದಿಲ್ಲ. ಅವರು ಪ್ರತಿಕ್ರಿಯಿಸಲೇಬೇಕು,” ಎಂದು ವಸೀಮ್‌ ಅಕ್ರಮ್ 1 ಮಿಂಟ್‌ ಪಾಡ್‌ಕಾಸ್ಟ್‌ನಲ್ಲಿ ಗುಡುಗಿದ್ದಾರೆ.

ಪಾಕ್‌ ಎದುರು ಇರ್ಫಾನ್‌ ಪಠಾಣ್‌ ಅಂಕಿಅಂಶಗಳು

ಇರ್ಫಾನ್‌ ಪಠಾಣ್ ಪಾಕಿಸ್ತಾನದ ವಿರುದ್ಧ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 27 ಟೆಸ್ಟ್‌, 34 ಏಕದಿನ ಪಂದ್ಯಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 6 ವಿಕೆಟ್‌ಗಳು ಸೇರಿವೆ. 2006ರಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಠಾಣ್ ಹ್ಯಾಟ್ರಿಕ್ ವಿಕೆಟ್‌ ಸಾಧಿಸಿದ್ದರು. ಪಂದ್ಯದ ಮೊದಲ ಓವರ್‌ನಲ್ಲೇ ಸಲ್ಮಾನ್ ಬಟ್, ಯೂನಿಸ್ ಖಾನ್ ಹಾಗೂ ಮೊಹಮ್ಮದ್ ಯೂಸುಫ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದರು.