ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Modi In US : ಬ್ಲೇರ್ ಹೌಸ್‌ನಲ್ಲಿ ಎಲಾನ್‌ ಮಸ್ಕ್‌ , ವಿವೇಕ್‌ ರಾಮಸ್ವಾಮಿಯನ್ನು ಭೇಟಿ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಶ್ವೇತ ಭವನದಲ್ಲಿ ನಿನ್ನೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದಾರೆ. ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಅವರು ಟೆಸ್ಲಾ ಮತ್ತು ಡಾಗ್ ಮುಖ್ಯಸ್ಥ ಎಲಾನ್ ಮಸ್ಕ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಮೋದಿ;  ಹಲವು ಮಹತ್ವದ ಸಭೆಗಳಲ್ಲಿ ಭಾಗಿ

ವಿವೇಕ್‌ ರಾಮಸ್ವಾಮಿ ಮತ್ತು ಅವರ ಮಾವನೊಡನೆ ಮೋದಿ

Profile Vishakha Bhat Feb 14, 2025 9:32 AM

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ (Modi In US) ಅವರು ಅಮೆರಿಕ ಪ್ರವಾಸದಲ್ಲಿದ್ದು, ಶ್ವೇತ ಭವನದಲ್ಲಿ ನಿನ್ನೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಭೇಟಿಯಾಗಿದ್ದಾರೆ. ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಅವರು ಟೆಸ್ಲಾ ಮತ್ತು ಡಾಗ್ ಮುಖ್ಯಸ್ಥ ಎಲಾನ್ ಮಸ್ಕ್ (Elan Musk) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದೇ ಸಂದರ್ಭದಲ್ಲಿ ಪ್ರಧಾನಿ ಅಮೆರಿಕದಲ್ಲಿ ಪ್ರಧಾನಿ ಮೋದಿ ವಿವೇಕ್ ರಾಮಸ್ವಾಮಿ (Vivek Ramaswamy) ಹಾಗೂ ಅವರ ಮಾವನನ್ನು ಭೇಟಿ ಮಾಡಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಮಾತನಾಡಿದ ವಿವೇಕ್‌ ರಾಮಸ್ವಾಮಿ, ಅಮೆರಿಕಕ್ಕೆ ಅವರನ್ನು ಸ್ವಾಗತಿಸಲು ತುಂಬಾ ಸಂತೋಷವಾಯಿತು. ಅವರೊಂದಿಗೆ ಉತ್ತಮ ಸಭೆ ನಡೆದಿದೆ ಎಂದು ಹೇಳಿದ್ದಾರೆ.



ಈ ಹಿಂದೆ ಅಮೆರಿದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ರಾಮಸ್ವಾಮಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡು ಟ್ರಂಪ್‌ಗೆ ಬೆಂಬಲ ಸೂಚಿಸಿದ್ದರು. ನಂತರ ಟ್ರಂಪ್‌ ಅಧಿಕಾರಕ್ಕೆ ಬಂದಾಗ ಡಾಗ್‌ನಲ್ಲಿ ವಿವೇಕ್‌ ಅವರಿಗೆ ಸ್ಥಾನವನ್ನು ನೀಡಲಾಗಿತ್ತು. ಇತ್ತೀಚೆಗೆ ಡಾಗ್‌ ಮುಖ್ಯಸ್ಥ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ.

ಗುರುವಾರ ಎಲೋನ್ ಮಸ್ಕ್ ಅವರು ತಮ್ಮ ಗೆಳತಿ ಶಿವೋನ್ ಜಿಲಿಸ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಷಿಂಗ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಮೋದಿ ಎಲಾನ್‌ ಮಸ್ಕ್‌ ಅವರ ಮಕ್ಕಳಿಗೆ ಉಡುಗೊರೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ "ದಿ ಕ್ರೆಸೆಂಟ್ ಮೂನ್", ದಿ ಗ್ರೇಟ್ ಆರ್‌ಕೆ ನಾರಾಯಣ್ ಕಲೆಕ್ಷನ್ ಮತ್ತು ಪಂಡಿತ್ ವಿಷ್ಣು ಶರ್ಮಾ ಅವರ ಪಂಚತಂತ್ರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ ಎಲೋನ್ ಮಸ್ಕ್ ಅವರ ಕುಟುಂಬವನ್ನು ಭೇಟಿಯಾಗಲು ಮತ್ತು ವಿವಿಧ ವಿಷಯಗಳ ಬಗ್ಗೆ ಮಾತನಾಡಲು ಸಂತೋಷವಾಯಿತು ಎಂದು ಹೇಳಿದ್ದಾರೆ.



ಎಲಾನ್‌ ಮಸ್ಕ್‌ ಜೊತೆಯಲ್ಲಿ ಮೋದಿ ಬಾಹ್ಯಾಕಾಶ ಪರಿಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ

ಟ್ರಂಪ್‌ ಅವರನ್ನು ಭೇಟಿಯಾದ ಮೋದಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 2030 ರ ವೇಳೆಗೆ ಭಾರತ-ಅಮೆರಿಕ ವ್ಯಾಪಾರವನ್ನು ದ್ವಿಗುಣಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡಿದರು. 2030 ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಿ 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗುವ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ನಮ್ಮ ತಂಡಗಳು ಶೀಘ್ರದಲ್ಲೇ ಕೆಲಸ ಮಾಡುತ್ತವೆ. ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ತೈಲ ಮತ್ತು ಅನಿಲ ವ್ಯಾಪಾರವನ್ನು ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು.