89ನೇ ವಯಸ್ಸಿನಲ್ಲಿ ನಿಧನರಾದ ವಿಂಡೀಸ್ ದಿಗ್ಗಜ ಸರ್ ಗ್ಯಾರಿಫೀಲ್ಡ್ ಸೋಬರ್ಸ್!
ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೀಸ್ ದಿಗ್ಗಜ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರು ತಮ್ಮ 89ನೇ ವಯಸ್ಸಿನಲ್ಲಿ ವಿಧವಶರಾಗಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅವರು ಶ್ರೇಷ್ಠ ಪ್ರದರ್ಶನಗಳನ್ನು ತೋರುವ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ.
ವಿಂಡೀಸ್ ಕ್ರಿಕೆಟ್ ದಿಗ್ಗಜ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ನಿಧನ. -
ನವದೆಹಲಿ: ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೀಸ್‌ನ (West Indies) ದಿಗ್ಗಜ ಕ್ರಿಕೆಟಿಗ ಸರ್ ಗ್ಯಾರಿಫೀಲ್ಡ್ (ಗ್ಯಾರಿ) ಸೋಬರ್ಸ್ (Sir Garfield Sobers) ಅವರು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್—ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲೂ ಅಸಾಧಾರಣ ಸಾಮರ್ಥ್ಯ ಹೊಂದಿದ್ದ ಸೋಬರ್ಸ್, ವಿಶ್ವ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಅವರು 1954ರಿಂದ 1974ರವರೆಗೆ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು, 93 ಟೆಸ್ಟ್ ಪಂದ್ಯಗಳಲ್ಲಿ 8,032 ರನ್ ಗಳಿಸಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ಎಕ್ಸ್ ಖಾತೆಯಲ್ಲಿ ಈ ದಿಗ್ಗಜನ ನಿಧನದ ವಿಷಯವನ್ನು ತಿಳಿಸಿದೆ. "ಒಂದು ಶ್ರೇಷ್ಠ ಇನಿಂಗ್ಸ್ ಇದೀಗ ಕೊನೆಗೊಂಡಿದೆ. ನಮ್ಮ ಹೃದಯದಲ್ಲಿ ಈಗ ಹಾಗೂ ಮುಂದೆಯೂ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಶಾಶ್ವತವಾಗಿ ನೆಲೆಸಿರುತ್ತಾರೆ," ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಬರೆದುಕೊಂಡಿದೆ.
1936ರ ಜುಲೈ 28 ರಂದು ಬಾರ್ಬಡೋಸ್‌ನಲ್ಲಿ ಜನಿಸಿದ್ದ ಸೋಬರ್ಸ್ ಬಾಲ್ಯದಲ್ಲಿ ಕ್ರಿಕೆಟ್ ಕ್ರೀಡೆಯ ಅಪಾತ ಪ್ರತಿಭೆಯನ್ನು ಹೊಂದಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಅದ್ಭುತ ಕೌಶಲವನ್ನು ಹೊಂದಿದ್ದ ಅವರು, ಎಡಗೈ ಮಧ್ಯಮ ವೇಗಿಯಾಗಿ ಪರಿಣಾಮಕಾರಿಯಾಗಿದ್ದರು. ಇದರ ಜೊತೆಗೆ ಸ್ಪಿನ್ನರ್ ಕೂಡ ಆಗಿ ಗಮನ ಸೆಳೆದಿದ್ದರು. ಇನ್ನು ಅವರ ತಲೆಮಾರಿನಲ್ಲಿ ಅದ್ಭುತ ಫೀಲ್ಡರ್ ಕೂಡ ಹೌದು.
A great innings has come to an end. In our hearts, now and forever, Sir Garfield Sobers. 🖤🏏 pic.twitter.com/bv2MO1SJgz
— Windies Cricket (@windiescricket) July 17, 2026
ಗ್ಯಾರಿ ಸೋಬರ್ಸ್‌ರ ಟೆಸ್ಟ್ ಅಂಕಿ ಅಂಶಗಳು
ತಮ್ಮ 17ನೇ ವಯಸ್ಸಿನಲ್ಲಿಯೇ ಗ್ಯಾರಿ ಸೋಬರ್ಸ್ ಅವರು ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ ಹಾಗೂ ಅವರು ತಮ್ಮ ವೃತ್ತಿ ಜೀವನದಲ್ಲಿ ಆಡಿದ 93 ಟೆಸ್ಟ್ ಪಂದ್ಯಗಳಿಂದ 57.78ರ ಸರಾಸರಿಯಲ್ಲಿ 8,032 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 26 ಶತಕಗಳನ್ನು ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 235 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಫೀಲ್ಡಿಂಗ್‌ನಲ್ಲಿ 109 ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಕಮ್‌ಬ್ಯಾಕ್ ಮಾಡಲಿದ್ದಾರೆಂದ ಪಾರ್ಥಿವ್ ಪಟೇಲ್!
ಪಾಕಿಸ್ತಾನ ಎದುರು ಅಜೇಯ 365 ರನ್
1958ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 365 ರನ್ ಗಳಿಸುವ ಮೂಲಕ ಸೋಬರ್ಸ್ ಅಂದಿನ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆ ನಿರ್ಮಿಸಿದ್ದರು. 1968ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. 1975ರಲ್ಲಿ ಅವರಿಗೆ ಬ್ರಿಟನ್‌ನಿಂದ ನೈಟ್‌ಹುಡ್ (Sir) ಗೌರವ ನೀಡಲಾಗಿತ್ತು. ಅವರ ಹೆಸರಿನಲ್ಲಿ ಐಸಿಸಿ ವರ್ಷದ ಶ್ರೇಷ್ಠ ಆಟಗಾರರಿಗೆ ನೀಡುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ ಕೂಡ ಇದೆ.
The BCCI mourns the passing of Sir Garfield Sobers, a true icon of the game and one of cricket's greatest-ever all-rounders.
— BCCI (@BCCI) July 17, 2026
His extraordinary achievements, lasting influence on Caribbean cricket and immeasurable contribution to the global game have left an enduring legacy that… pic.twitter.com/5263SNLezn
ಸರ್ ಗ್ಯಾರಿಫೀಲ್ಡ್ ಸೋಬರ್ಸ್ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದು, ಕೆರಿಬಿಯನ್ ಸೇರಿದಂತೆ ವಿಶ್ವದಾದ್ಯಂತ ಹಲವು ತಲೆಮಾರಿನ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದರು. ಅಂಕಿ-ಅಂಶಗಳನ್ನು ಮೀರಿ ಅವರ ಪ್ರಭಾವ ವ್ಯಾಪಿಸಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಆಟದ ಪ್ರತಿಯೊಂದು ವಿಭಾಗದಲ್ಲೂ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸುವ ಅವರ ಸಾಮರ್ಥ್ಯವು ಮುಂದಿನ ಪೀಳಿಗೆಯ ಆಲ್‌ರೌಂಡರ್‌ಗಳಿಗೆ ಸ್ಪೂರ್ತಿ ನೀಡಿತ್ತು.
ಕ್ರಿಕೆಟ್‌ಗೆ ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ಬ್ರಿಟನ್ ಸರ್ಕಾರ 'ನೈಟ್‌ಹುಡ್' ಗೌರವ ನೀಡಿ ಸನ್ಮಾನಿಸಿತ್ತು. ಜೊತೆಗೆ, ವಿಸ್ಡನ್‌ನ 'ಕ್ರಿಕೆಟರ್ಸ್ ಆಫ್ ದಿ ಸೆಂಚುರಿ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು, `ಐಸಿಸಿ ಹಾಲ್ ಆಫ್ ಫೇಮ್ʼ ಗೌರವನ್ನೂ ಭಾಜನರಾಗಿದ್ದರು.