ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಮದುವೆಯಾದ ಎರಡೇ ದಿನಕ್ಕೆ ಯುದ್ಧಕ್ಕೆ ತೆರಳಿದ ಯೋಧ; ಹೆಮ್ಮೆಯಿಂದ ಕಳುಹಿಸಿಕೊಟ್ಟ ಪತ್ನಿ!

Operation Sindoor: ಮಹಾರಾಷ್ಟ್ರದ ಜಲಗಾಂವ್‌ನ ನಾಚಂಖೇಡೆ ಯೋಧ, ಮದುವೆಯಾದ ಎರಡನೇ ದಿನಕ್ಕೆ ದೇಶ ರಕ್ಷಣೆಗಾಗಿ ಸೇವೆ ಸಲ್ಲಿಸಲು ಗಡಿಗೆ ತೆರಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ರಜೆ ಕಡಿತಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆ ಸೂಚನೆ ನೀಡಿತ್ತು. ಹೀಗಾಗಿ ಯೋಧ ಕರ್ತವ್ಯಕ್ಕೆ ತೆರಳಿದ್ದಾರೆ.

ಮದುವೆಯಾದ ಎರಡೇ ದಿನಕ್ಕೆ ಯುದ್ಧಕ್ಕೆ ತೆರಳಿದ ಯೋಧ!

Profile Prabhakara R May 10, 2025 4:38 PM

ಜಲಗಾಂವ್: ಮದುವೆಯಾದ ವಾರದವರೆಗೆ ಅರಿಶಿನ ಮೈ ಎಂದು ಮನೆಯವರು ಮದುಮಗನನ್ನು ಹೊರಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಎರಡನೇ ದಿನಕ್ಕೆ ದೇಶಕ್ಕಾಗೆ ಸೇವೆ ಸಲ್ಲಿಸಲು ಯೋಧ ಗಡಿಗೆ ತೆರಳಿರುವ ಅಪರೂಪದ ಘಟನೆ (Operation Sindoor) ಮಹಾರಾಷ್ಟ್ರದ ಜಲಗಾಂವ್‌ನ ನಾಚಂಖೇಡೆಯಲ್ಲಿ ನಡೆದಿದೆ.‌

ಯೋಧ ಮನೋಜ್ ಪಾಟೀಲ್ ಎಂಬುವವರಿಗೆ ಮೇ 5 ರಂದು ಯಾಮಿನಿ ಎಂಬುವವರ ಜತೆ ಮದುವೆಯಾಗಿತ್ತು. ಇದಾದ ಎರಡೇ ದಿನದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಸೇನೆ ಮನೋಜ್ ಅವದ ರಜೆ ಕಡಿತಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

soldier 1

ದೇಶ ಸೇವೆಗಾಗಿ ಸೈನ್ಯದಿಂದ ಕರೆ ಬಂದಿದ್ದೆ ತಡ ಯುವಕ ಬ್ಯಾಗ್ ಹಿಡಿದು ರೈಲು ಹತ್ತಿದ್ದಾನೆ.‌ ಇತ್ತ ಮದುವೆ ನಂತರದಲ್ಲಿ ಹತ್ತಾರು ಕನಸು ಹೊತ್ತಿದ್ದ ಬಾಳಸಂಗಾತಿ ಕಣ್ಣೀರು ಹಾಕುತ್ತಲೇ ಒಲ್ಲದ ಮನಸ್ಸಿನಿಂದ ಪತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನು ಪತ್ನಿ ಸೇರಿ ಕುಟುಂಬದವರು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಾಗ ಮಗ ಸೇವೆಗೆ ಹೊರಟ್ಡಿದ್ದು ಹೆಮ್ಮೆ ತರಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ 2017 ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮನೋಜ್ ಪಾಟೀಲ್ ಇದೇ ಮೇ 5 ರಂದು ಅದ್ಧೂರಿ ಮದುವೆಯಾಗಿದ್ದರು. ಮದುವೆ ಕಾರಣಕ್ಕೆ ಒಂದು ತಿಂಗಳ ರಜೆ ಮೇಲೆ ಬಂದಿದ್ದ ಇವರಿಗೆ ತಕ್ಷಣ ಸೇನೆ ವಾಪಸ್ ಬರುವಂತೆ ತಿಳಿಸಿದ ಹಿನ್ನಲೆಯಲ್ಲಿ ತೆರಳಿದ್ದಾರೆ. ಇನ್ನು ರೈಲು ನಿಲ್ದಾಣದಲ್ಲಿ ಮನೋಜ್ ಕುಟುಂಬದವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂತವರನ್ನೂ ನೋಯಿಸುವಂತಿತ್ತು.

ಒಟ್ಟಿನಲ್ಲಿ ತಾಯ್ನಾಡಿಗೆ ಸಂಕಷ್ಟದ ಪರಿಸ್ಥಿತಿ ಎದುರಾದರೆ ಪ್ರತಿಯೊಬ್ಬ ಸೈನಿಕನೂ ತನ್ನ ಮನೆ ತೊರೆದು ದೇಶದ ಜನರಿಗೆ ಹೋರಾಡುವ ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಈ ಸುದ್ದಿಯನ್ನೂ ಓದಿ | Operation Sindoor: ಭಾರತದ ಆಪರೇಷನ್ ಸಿಂದೂರ್‌ ಬಳಿಕ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಹುಡುಕುತ್ತಿರೋದು ಏನು?

ಭಾರತೀಯ ಸೈನಿಕರು ಶಿಬಿರ ತೊರೆಯುತ್ತಿರುವುದು ಸುಳ್ಳು‌

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ(India-Pakistan Tension) ಹೆಚ್ಚಾಗುತ್ತಿದ್ದಂತೆ, ಭಾರತೀಯ ಸೈನಿಕರು ತಮ್ಮ ಶಿಬಿರಗಳನ್ನು ತೊರೆಯುತ್ತಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಪಿಐಬಿ ಸತ್ಯಶೋಧನ (Fact Check) ವಿಭಾಗವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊ ಭಾರತೀಯ ಸೇನೆಗೆ ಸಂಬಂಧಿಸಿದ್ದಲ್ಲ ಎಂದು ಖಚಿತಪಡಿಸಿದೆ.

ಅಸಲಿಗೆ ಈ ವಿಡಿಯೊ ಖಾಸಗಿ ರಕ್ಷಣಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಸಂತೋಷದಿಂದ ಭಾವುಕರಾದ ವೇಳೆ ಚಿತ್ರಿಕರಿಸಿದ ವಿಡಿಯೊ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಏರ್‌ ಡಿಫೆನ್ಸ್‌ ಸಿಸ್ಟಂ(S-400 system) ಕ್ಷಿಪಣಿಗೆ ಹಾನಿಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇದೊಂದು ಆಧಾರರಹಿತ, ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಜತೆಗೆ ಭಾರತೀಯ ಸೇನೆಯ ಬಗ್ಗೆ ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುಳ್ಳು ಸುದ್ಧಿಗಳನ್ನು ಹಂಚಿಕೊಳ್ಳುತ್ತಿದ್ದು ಈ ಬಗ್ಗೆ ದೇಶದ ಜನರು ಚಿಂತಿಸುವ ಮತ್ತು ಭಯ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.