ಛತ್ತೀಸ್‍ಗಢ: ಮೂವರು ನಕ್ಸಲರ ಹತ್ಯೆ
ಛತ್ತೀಸ್‍ಗಢ: ಮೂವರು ನಕ್ಸಲರ ಹತ್ಯೆ
Vishwavani News
Jan 8, 2022 1:35 PM
ಛತ್ತೀಸ್‍ಗಢ: ಮೂವರು ನಕ್ಸಲರನ್ನು ಛತ್ತೀಸ್‍ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಗುಂಪಿಗೆ ಸೇರಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.
ಮೂವರು ನಕ್ಸಲರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಬಸ್ತರ್ ವಲಯದ ಐಜಿಪಿ ಮಾಹಿತಿ ನೀಡಿದ್ದಾರೆ. ಜ.6ರಂದು ನಡೆದ ಕಾರ್ಯಾಚರಣೆಯಲಿ ಈ ಮೂವರು ಮೃತಪಟ್ಟಿದ್ದಾರೆ. ಕಮ್ಲು ಪುನೆಂ ಮತ್ತು ಪುಂಗಿ ಎಂಬ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಅವರಿಬ್ಬರೂ ವಿವಾಹವಾಗಲು ನಕ್ಸಲ್ ಕ್ಯಾಂಪ್‍ನಿಂದ ಹೊರಬಂದಿದ್ದರು ಎಂದು ತಿಳಿದುಬಂದಿದೆ.
ಮೂರನೆ ನಕ್ಸಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಜಾಪುರ ಪೊಲೀಸರು ಮುಂದಾಗಿದ್ದಾರೆ.