ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Yashwant Rayagouda Patil: ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಯಶವಂತರಾಯಗೌಡ ಪಾಟೀಲ.

ಇಂದಿನ ದಿನಮಾನಗಳಲ್ಲಿ ಮನೆ ನಡೆಸುವುದೇ ಕಷ್ಟ. ಇಂತಹದರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಕರ ವೇತನ, ಸಿಬ್ಬಂದಿಗಳ ವೇತನ ಹಾಗೂ ಭವ್ಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಸರಕಾರಗಳಿಂದ ಅಸಾಧ್ಯದ ಮಾತು. ಆದರೆ, ಸರಕಾರ ಮಾಡದೆ ಇರುವ ಪವಿತ್ರ ಕಾರ್ಯ ಹಜರತ ನಾಸಿರಜಂಗ ಸಾಹೇಬ ದರ್ಗಾ ದಿಂದ ನಡೆಸಿಕೊಂಡು ಬಂದಿರುವುದು ಖುಷಿ ತಂದಿದೆ

ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಪಾಟೀಲ

ಬರಗುಡಿ ಗ್ರಾಮದ ಹಜರತ ನಾಸಿರಜಂಗ ಸಾಹೇಬ ಹಿರಿಯ ಪ್ರಾಥಮಿಕ ಕನ್ನಡ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಶ್ನೇಹ ಸಮ್ಮೇಳನ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. -

Ashok Nayak
Ashok Nayak Mar 22, 2026 11:35 PM

ಇಂಡಿ: ಮನುಷ್ಯನಿಂದ ಆಗದೆ ಇರುವ ಅನೇಕ ನಿಗೂಢ ಶಕ್ತಿಗಳು ಈ ಪ್ರಕೃತಿಯಲ್ಲಿ ಸದಾ ಗೋಚರಿಸುತ್ತವೆ. ನಾವು ಕೇವಲ ನೆಪ ಮಾತ್ರ. ಎಲ್ಲವೂ ದೇವರ ಲೀಲೆ. ನಮ್ಮಿಂದಲೇ ಎನ್ನುವುದಕ್ಕಿಂತ ಕಾಲ ಪರಿಪಕ್ವವಾದಾಗ ಸರ್ವ ಕೆಲಸಗಳು ನಡೆದು ಹೋಗುತ್ತವೆ. ಇಂದು ಈ ಶಿಕ್ಷಣ ಸಂಸ್ಥೆ ನಡೆಯಬೇಕಾದರೆ ಭಗವಂತನ ಕೃಪೆ ಇಲ್ಲದೆ ಅಸಾಧ್ಯೆ ದೇವರ ಶಕ್ತಿ ಇಲ್ಲದಿದ್ದರೆ ಹುಲ್ಲಕಡ್ಡಿ ಅಲುಗಾಡದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ(
MLA Yashwant Rayagouda Patil) ಹೇಳಿದರು.

ತಾಲೂಕಿನ ಬಡಗುಡಿ ಗ್ರಾಮದ ಹಜರತ್ ನಾಸಿರಜಂಗ್‌ಸಾಹೇಬ ದರ್ಗಾ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ದಿ ಸಂಘ (ರಿ) ಬರಗುಡಿ, ಇವರ ಸಂಯುಕ್ತಾಶ್ರಯದಲ್ಲಿ ಆಂಗ್ಲ, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂಡಿ ಮತಕ್ಷೇತ್ರದ ಅತ್ಯಂತ ಕಟ್ಟಕಡೆಯ ಗಡಿಭಾಗ ಬರುಗುಡಿ ಗ್ರಾಮ ಇಲ್ಲಿ ಹಜರತ್‌ ನಾಸಿರಜಂಗ್ ಹಾಸೇಬರ ಗದ್ದುಗೆ ನಿರ್ಮಾಣ ಆಗಿರುವುದಲ್ಲದೆ ಬಡವ ಶ್ರೀಮಂತ ಎನ್ನದೆ ಉಚಿತ ಶಿಕ್ಷಣ ನೀಡುತ್ತಿರುವ ಕಾರ್ಯ ‌ಶ್ಲಾಘನೀಯ.

ಇದನ್ನೂ ಓದಿ: MLA Yashwant Rayagouda Patil: ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ: ಧರ್ಮರಾಜ ಅವುಜಿ ಆಗ್ರಹ

ಇಂದಿನ ದಿನಮಾನಗಳಲ್ಲಿ ಮನೆ ನಡೆಸುವುದೇ ಕಷ್ಟ. ಇಂತಹದರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಕರ ವೇತನ, ಸಿಬ್ಬಂದಿಗಳ ವೇತನ ಹಾಗೂ ಭವ್ಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಸರಕಾರಗಳಿಂದ ಅಸಾಧ್ಯದ ಮಾತು. ಆದರೆ, ಸರಕಾರ ಮಾಡದೆ ಇರುವ ಪವಿತ್ರ ಕಾರ್ಯ ಹಜರತ ನಾಸಿರಜಂಗ ಸಾಹೇಬ ದರ್ಗಾ ದಿಂದ ನಡೆಸಿಕೊಂಡು ಬಂದಿರುವುದು ಖುಷಿ ತಂದಿದೆ. ನಾಡಿನಾದ್ಯಂತ ತುಮಕೂರ ಶ್ರೀಸಿದ್ದಗಂಗೆ ಕ್ಷೇತ್ರ, ಬಂಥನಾಳದ ಶ್ರೀಸಂಗನ ಬಸವೇಶ್ವರ ಶ್ರೀಗಳು, ಚಿತ್ರದುರ್ಗ ಶ್ರೀಮುರುಘಾಮಠ ಇಂತಹ ಅನೇಕ ಪವಿತ್ರ ಮಠಗಳು ನಾಡಿನಲ್ಲಿ ಶಿಕ್ಷಣ ದಾಸೋಹ ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆ ಇಂತಹ ಮಠಮಾನ್ಯ ಗಳ ಸಾಲಿನಲ್ಲಿ ಗಡಿಭಾಗದ ದರ್ಗಾ ಕೂಡಾ ಮುಂಬರುವ ದಿನಗಳಲ್ಲಿ ಶಿಕ್ಷಣ ಕಾಶಿಯಾಗಿ ಹೊರಹೊಮ್ಮಲ್ಲಿ ಎಂದು ಆಶಿಸಿದರು.

ಪ್ರಾಸ್ತಾವಿಕ ವಿಜಯಪೂರ ಕಾಲೇಜಿನ ಡೈಯಟ್ ಉಪನ್ಯಾಸಕ ಎ.ಆರ್ ಮುಜಾವರ ಪ್ರಾಸ್ತಾವಿಕ ಮಾತನಾಡಿದರು.

ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣಾಕೌಲಗಿ, ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ, ಕಲಬುರ್ಗಿ ಬಿಸಿಎಂ ಅಧಿಕಾರಿ ಈರಣ್ಣಾ ಆಶಾಪೂರ, ಖಾದರ ಗುಲಬರ್ಗ ಮಾತನಾಡಿದರು. ಮದ್ದಾನೆ ಮಹಾರಾಜ ದಿವ್ಯಸಾನಿಧ್ಯ ವಹಿಸಿದರು.

ಸಂಸ್ಥಾಪಕ ಅಧ್ಯಕ್ಷ ಮಹಿಬೂಬಸಾಹೇಬ ಎಸ್ ಇಂಗಳಗಿ, ರಸೂಲಖಾನ್ ಬಿರಾದಾರ ದರ್ಗಾ ನಂದ್ರಾಳ ಸಾನಿಧ್ಯ ವಹಿಸಿದರು.

ಸಂಸ್ಥೆಯ ಉಪಾಧ್ಯಕ್ಷ ವೇಂಕಟೇಶ ಕುಲಕರ್ಣಿ, ಎಸ್,ಎಸ್ ಪಟ್ಟಣಶೆಟ್ಟಿ, ಹಸನ ಶೇಖ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೇಪ್ಪ ಚನಗೊಂಡ, ಸದಾಶಿವ ಪ್ಯಾಟಿ, ಎಸ್.ಆಯ್ ರೇವೂರಕರ್, ಚಂದ್ರಶೇಖರ ಇಂಡಿ, ಎಸ್ ವ್ಹಿ ಹರಳಯ್ಯಾ, ಎಸ್.ಡಿ ಪಾಟೀಲ, ಅಣ್ಣಾರಾಯಗೌಡ ಪಾಟೀಲ, ಹುಸೇನ ಬಿರಾದಾರ , ಮುಖ್ಯಗುರು ಎಸ್. ಬಿ ಪಾಟೀಲ ನಿಜಣ್ಣಾ ಕಾಳೆ ವೇದಿಕೆಯಲ್ಲಿದ್ದರು.

ಶೇಖರ ಶಿವಶರಣ, ಅಶೋಕ ಬಡಿಗೇರ, ಹೂವಣ್ಣಾ ಡಂಗಿ, ರವಿಕಾಂತ ಬಿರಾದಾರ, ರಾಜು ಪಟೇಲ ,ಖಾಜಸಾಬ ಲಿಂಗಸೂರ, ಶಿವಾನಂದ ಬ್ಯಾಗೇಳಿ, ರಸೂಲ ಶೇಖ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಹಾಗೂ ಬರಡಗುಡಿ ಗ್ರಾಮದ ಮುಖಂಡರು, ಶಿಕ್ಷಕ, ಸಿಬಂದ್ದಿ ಉಪಸ್ಥಿತರಿದ್ದರು.

ಉಪನ್ಯಾಸಕ ಎ.ಆರ್ ಮುಜಾವರ ಸ್ವಾಗತಿಸಿ, ಶಿಕ್ಷಕ ಶ್ಯಾಮನವರ್ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಎನ್ ,ಕೆ ಬಿರಾದಾರ ವಂದಿಸಿದರು.