ಲಿವ್ ಇನ್ ಪಾರ್ಟ್ನರ್ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ!
ಸಿಕ್ಕಿಂನ 22 ವರ್ಷದ ಮಹಿಳೆಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿದ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಮೃತರನ್ನು ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಸುಬ್ಬಾ ಎಂದು ಗುರುತಿಸಲಾಗಿದ್ದು, ಆಕೆ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.
ನೀಟ್ ಪರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸದೇ ಕೋಟ್ಯಂತರ ವಿದ್ಯಾರ್ಥಿಗಳ ಜೀವನದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿಯು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೂನ್ 14ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಎ.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ.
ನಕ್ಸಲ್ ಚಟುವಟಿಕೆ ನಡೆಸಲು ವಿದೇಶದಿಂದ 92 ಕೋಟಿ ರೂ. ದೇಣಿಗೆ ನೀಡಿರುವ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಮೆರಿಕ ಮೂಲದ ದಿ ತಿಮೋತಿ ಇನಿಶಿಯೇಟಿವ್ (ಟಿಟಿಐ) ಎಂಬ ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಆಟಾಡಿಸುತ್ತಿದ್ದ ಅಧಿಕಾರಿಗಳ ವರ್ತನೆಗೆ ಬೇಸರಗೊಂಡ ಬಾಗಲಕೋಟೆ ರೈತರೊಬ್ಬರು ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ 2004 ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ರೈತ ಬಸವರಾಜ ದೊಡ್ಡಮನಿ ಎಂಬುವವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಹೈಕೋರ್ಟ್ಗೆ ನೀಡಿರುವ ಹೇಳಿಕೆಗಳನ್ನು ಯಾವುದೇ ಮಾಧ್ಯಮಗಳಿಗಾಗಲಿ ಅಥವಾ ಸಾಮಾಜಿಕ ಜಾಲತಾಣಗಳಿಗಾಗಲಿ ಬಹಿರಂಗಪಡಿಸಬಾರದು ಎಂಬ ಪ್ರಮುಖ ಷರತ್ತಿನ ಮೇರೆಗೆ ಚಿನ್ನಯ್ಯನಿಗೆ ಜಾಮೀನು ಮಂಜೂರಾಗಿತ್ತು. ಆದರೆ ಪ್ರಸ್ತುತ ಈ ಜಾಮೀನು ಷರತ್ತು ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸ ಲಾಗಿದೆ. ಹೀಗಾಗಿ, ಎಸ್ಐಟಿ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ ಚಿನ್ನಯ್ಯನ ಜಾಮೀನನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಮಟ್ಟಣ್ಣವರ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ನಲ್ಲಿನ ನಾಯಕತ್ವ ಬದಲಾದಂತೆ ಬಿಜೆಪಿಯಲ್ಲಿನ ರಾಜ್ಯಾ ಧ್ಯಕ್ಷರ ಆಯ್ಕೆ ಹಾಗೂ ಉಚ್ಚಾಟನೆಗೊಂಡವರ ಘರ್ವಾಪ್ಸಿಗೆ ವೇದಿಕೆ ಸಜ್ಜುಗೊಂಡಿದೆ. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್ಗೆ ಮತ್ತೆ ಪಕ್ಷದ ಬಾಗಿಲುಗಳು ತೆರೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.
ರಾಜ್ಯದ ಕರಾವಳಿಯಲ್ಲಿ ಗಂಟೆಗೆ 40-50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.
ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಶ್ರೀಮರಿಗಮ್ಮ ಹಾಗೂ ಸೊಲ್ಲಾ ಪುರಮ್ಮ ಗ್ರಾಮ ದೇವತೆಗಳಿಗೆ ಮತ್ತು ದೇವಸ್ಥಾನಕ್ಕೆ ಹೆಚ್ಚಿನ ಶಕ್ತಿ ಇದ್ದು, ಭಕ್ತಾದಿಗಳ ಇಷ್ಟಾರ್ಥ ಗಳನ್ನು ನೆರವೇರಿಸುವಂತಹ ಶಕ್ತಿಯನ್ನು ಹೊಂದಿವೆ, ಈ ದೇವಸ್ಥಾನದ ಬಗೆ ನನಗೆ ಭಾವನಾತ್ಮಕ ಸಂಬಂಧವಿದೆ ಎಂದು ಪ್ರವಚನ ಕಾರರಾದ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ ತಿಳಿಸಿದರು
ಒಂದು ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಒಟ್ಟು ಫಲಿತಾಂಶವನ್ನು ಅಗಲಗುರ್ಕಿ ಬಿಜಿಎಸ್ ಶಾಲೆಯ ಮಕ್ಕಳು ಪಡೆದಿದ್ದಾರೆ. 620 ಅಂಕಗಳನ್ನು 16 ಮಕ್ಕಳು ಪಡೆದಿದ್ದಾರೆ. ಇದು ತಾಲೂಕಿನ ಹೆಮ್ಮೆ ಮಾತ್ರ ವಲ್ಲ ಜಿಲ್ಲೆಯ ಹಿರಿಮೆಯಾಗಿದೆ.ಅಜ್ಞಾನದಿಂದ ಜ್ಞಾನದ ಕಡೆಗೆ ಭಯದಿಂದ ನಿರ್ಭಯದ ಕಡೆ ಮುನ್ನಡೆಸುವವರೇ ಗುರುಗಳಾಗುತ್ತಾರೆ. ಎಂದಿಗೂ ಮಕ್ಕಳನ್ನು ನಿರುತ್ಸಾಹಿಗಳನ್ನಾಗಿ ಮಾಡಬೇಡಿ
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರ ದಲ್ಲಿ ವಿದ್ಯುತ್ ಕಂಡು ಹಿಡಿದಗಿನಿಂದ ಮೊದಲಾಗಿ ಇಲ್ಲಿಯವರೆಗೆ ಬೆಸ್ಕಾಂ ನೌಕರರು ಈ ಕ್ಷೇತ್ರ ದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಜನಸಂಖ್ಯೆ ಬೆಳೆದಂತೆ ನಾಗರೀಕರ ಬೇಡಿಕೆಗಳನ್ನು ಆದ್ಯತಾನುಸಾರ ಶಿರಸಾ ವಹಿಸಿ ಮಾಡಿಕೊಂಡು ಬರಲಾಗುತ್ತಿದೆ. ಇಂತಹ ಬಲಿಷ್ಠ ಕ್ಷೇತ್ರವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ
ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಬೆಳೆಗಾರರು ಬೆಳೆ ನಷ್ಟ, ಬೆಲೆ ಕುಸಿತ ಹಾಗೂ ಮಾರುಕಟ್ಟೆ ಸಮಸ್ಯೆ ಗಳಿಂದ ಸಂಕಷ್ಟದಲ್ಲಿದ್ದಾರೆ. ರೈತರು ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗದೆ ಆತಂಕದಲ್ಲಿದ್ದರೂ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರಚಾರದಲ್ಲೇ ತೊಡಗಿಕೊಂಡಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿತು, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಆತ್ಮವಿಶ್ವಾಸ, ಪರಿಶ್ರಮ ಮತ್ತು ಗುರಿಯತ್ತದ ಬದ್ಧತೆಯೇ ವಿದ್ಯಾರ್ಥಿಗಳನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುವ ಮೂಲಮಂತ್ರಗಳಾಗಿವೆ
Pralhad Joshi: ಮುಂಗಾರು ಹಂಗಾಮಿಗೂ ಮುನ್ನವೇ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರವನ್ನು ಪೂರೈಸಲಾಗಿದೆ. ಮುಂಗಡ ದಾಸ್ತಾನಿಗೆ ಅನುವಾಗುವಂತೆ ಜನವರಿ-ಮಾರ್ಚ್ ಅವಧಿಯಲ್ಲೇ ಅಗತ್ಯಕ್ಕಿಂತ ಹೆಚ್ಚುವರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್ಪಿಕೆಎಸ್ ಅನ್ನು ನೀಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ರವರ ನಿವಾಸಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆ, ಅವರ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಪರಿಸರ ಸಂರಕ್ಷಣೆಯು ಕೇವಲ ಇಂದಿನ ಮಹತ್ವಕಾಂಕ್ಷಿ ಅಪೇಕ್ಷೆಯಾಗಿರದೆ ಅದು ಸಮಾಜದ ಹಾಗೂ ಸಮುದಾಯದ ಅಸ್ತಿತ್ವಕ್ಕೆ ಮೂಲಭೂತ ಅವಶ್ಯಕತೆಯಾಗಿದೆಯೆಂದು ಹೇಳಿದರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಇತರ ಎಲ್ಲಾ ಸಮಾಜಮುಖಿ ಸಂಸ್ಥೆಗಳೊಂದಿಗೆ ಈ ಕಾರ್ಯಕ್ರಮ] ಹಮ್ಮಿಕೊಂಡಿದ್ದು ಈ ಸಮಾಜಮುಖಿ ಕಾರ್ಯಕ್ರಮವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುವುದಾಗಿ ತಿಳಿಸಿದರು
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್" ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ. ಅಷ್ಟೇ ಅಲ್ಲದೆ, ದೇಶದ ಮೊದಲ ಪ್ರಧಾನಿ ನೆಹರೂ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ಪ್ರಧಾನಿ ದಾಖಲೆಯನ್ನು ಮುರಿದು ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಿರುವ ಸಂಭ್ರಮವನ್ನು ನಾವು ದೇಶವಾಸಿಗಳಿಗೆ ತಿಳಿಸಲು ಹೆಮ್ಮೆಯಿದೆ
ಸಿಂಗಾಟಕದಿರೇನಹಳ್ಳಿಯ ಹಳೆಯ ಸರ್ವೇ ನಂ.67 ಹಾಗೂ ಹೊಸ ಸರ್ವೇ ನಂ.81, 82, 83, 84, 85 ಮತ್ತು 86ರಲ್ಲಿ ಸಾಗುವಳಿ ಚೀಟಿ, ಪಹಣಿ ಮ್ಯುಟೇಷನ್, ಸರ್ವೆ ಸ್ಕೆಚ್ ಹಾಗೂ ಇತರೆ ದಾಖಲೆಗಳನ್ನು ಹೊಂದಿರುವ ಬಡ ರೈತರು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ವಿರುದ್ಧವೇ ಬಿಜೆಪಿ ಜನ್ಮ ತಾಳಿದ್ದು, ಇಂದು ದೇಶದ ಶೇ.75 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಸರ್ಕಾರಗಳು ಆಡಳಿತ ನಡೆಸುತ್ತಿವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮಾದರಿಯನ್ನು ದೇಶಕ್ಕೆ ನೀಡಿದ್ದು, ಈಗ ಮೋದಿ ಮಾದರಿಯ ಆಡಳಿತವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ
ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆಯೇ ಇಲ್ಲವೇ ಎಂದು ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿದೆ. ನಾವು ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಯಾರನ್ನೂ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
Chalavadi Narayanaswamy: ಪ್ರಧಾನಿ ಮೋದಿ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ದೀರ್ಘಕಾಲ ಆಳಿದ ದಾಖಲೆ ಹೊಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್ನವರು ಗೌರವಿಸುವುದನ್ನು ಕಲಿಯಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.