ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿ ಮಡಿಲಲ್ಲಿ ಆಟವಾಡಿದ ಮಗು ಯಾರು? ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಪುಟಾಣಿಯ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಗುವಿನೊಂದಿಗೆ ಆಟವಾಡುವ ಚಿತ್ರವೊಂದನ್ನು ಹಂಚಿಕೊಂಡರು. ಇದು ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಯಾರ ಮಗುವಿದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲಯಾಳಂ ನಟ-ರಾಜಕಾರಣಿ ಕೃಷ್ಣಕುಮಾರ್ ಅವರ ಮೊಮ್ಮಗನೊಂದಿಗೆ ಆಟವಾಡುವುದನ್ನು ತೋರಿಸಲಾಗಿದೆ.

ಪ್ರಧಾನಿ ಮೋದಿಯ ಹೊಸ ಸ್ನೇಹಿತ

ಸಂಗ್ರಹ ಚಿತ್ರ -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮಕ್ಕಳೆಂದರೆ ಪ್ರೀತಿ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರತಿ ವರ್ಷ ಅವರು ರಕ್ಷಾ ಬಂಧನವನ್ನು ಮಕ್ಕಳೊಂದಿಗೆ ಆಚರಿಸುತ್ತಾರೆ. ಆಗಾಗ್ಗೆ ಅವರು ಮಕ್ಕಳೊಂದಿಗೆ ಆಟವಾಡುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ (Viral news) ಆಗುತ್ತಿರುತ್ತವೆ. ಇದೀಗ ಹೊಸ ಚಿತ್ರವೊಂದನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವರು ಮಲಯಾಳಂ ನಟ, ರಾಜಕಾರಣಿ ಕೃಷ್ಣಕುಮಾರ್ ಅವರ ಮೊಮ್ಮಗನೊಂದಿಗೆ ಆಟವಾಡುವುದನ್ನು ಕಾಣಬಹುದು.

ಪ್ರಧಾನಿ ಮೋದಿ ಅವರ ನಿವಾಸಕ್ಕೆ ನಟ, ರಾಜಕಾರಣಿ ಕೃಷ್ಣಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ತೆರಳಿ ಕೆಲವು ಕಾಲ ಅವರೊಂದಿಗೆ ಸಮಯ ಕಳೆದರು. ಇದರ ಚಿತ್ರವನ್ನು ಬಳಿಕ ಪ್ರಧಾನಿ ಮೋದಿ ಸೇರಿದಂತೆ ಕೃಷ್ಣ ಕುಮಾರ್ ಅವರ ಕುಟುಂಬ ಸದಸ್ಯರು ಈ ಚಿತ್ರಗಳನ್ನು ತಮ್ಮತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಕಚ್ಚಾ ತೈಲ, ಅನಿಲ, ವಿದ್ಯುತ್, ರಸಗೊಬ್ಬರ ಲಭ್ಯತೆ ಕುರಿತು ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಚಿಕ್ಕ ಮಗುವಿನೊಂದಿಗೆ ಆಟವಾಡುತ್ತಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಕುತೂಹಲವನ್ನು ಹುಟ್ಟುಹಾಕಿತು. ಈ ಚಿತ್ರವು ತ್ವರಿತವಾಗಿ ವೈರಲ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಇದು 1.7 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿತ್ತು ಮತ್ತು ದೇಶಾದ್ಯಂತ ಗಮನ ಸೆಳೆಯಿತು.

ವೈರಲ್ ಫೋಟೋದಲ್ಲಿರುವ ಮಗುವನ್ನು ನೀಮ್ ಅಶ್ವಿನ್ ಕೃಷ್ಣ ಎಂದು ಗುರುತಿಸಲಾಗಿದ್ದು, ಪ್ರೀತಿಯಿಂದ "ಓಮಿ" ಎಂದು ಕರೆಯಲಾಗುತ್ತದೆ. ಸಾಮಾಜಿಕ ಮಾಧ್ಯಮ ಪ್ರಭಾವಿ ದಿಯಾ ಕೃಷ್ಣ ಅವರ ಮಗನಾಗಿರುವ ನೀಮ್ ಅಶ್ವಿನ್ ಕೃಷ್ಣ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಕೇರಳ ಮೂಲದ ನಟ ಮತ್ತು ರಾಜಕಾರಣಿ ಕೃಷ್ಣಕುಮಾರ್ ಅವರ ಮೊಮ್ಮಗ.

ಪ್ರಧಾನ ಮಂತ್ರಿಯವರ ನಿವಾಸಕ್ಕೆ ಕೃಷ್ಣ ಕುಮಾರ್ ಅವರ ಕುಟುಂಬ ಭೇಟಿ ನೀಡಿದ್ದು, ಈ ವೇಳೆ ಅವರ ಪತ್ನಿ ಸಿಂಧು ಕೃಷ್ಣಕುಮಾರ್ ಮತ್ತು ಪುತ್ರಿಯರಾದ ಅಹಾನಾ, ದಿಯಾ, ಇಶಾನಿ ಮತ್ತು ಹನ್ಸಿಕಾ ಇದ್ದರು. ಅವರೆಲ್ಲ ಸುಮಾರು ಒಂದು ಗಂಟೆ ಪ್ರಧಾನಿ ಮೋದಿ ಅವರೊಂದಿಗೆ ಕಳೆದರು. ಬಳಿಕ ಅವರ ಕುಟುಂಬ ಸದಸ್ಯರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸಂವಾದದ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡರು.

ದಿಯಾ ಕೃಷ್ಣ ಅವರು ಇಂದೊಂದು "ಅಭಿಮಾನಿಗಳ ಕ್ಷಣ" ಎಂದು ಕರೆದು ಭಾವನಾತ್ಮಕ ಪೋಸ್ಟ್‌ ಮಾಡಿದ್ದರು. ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಳೆದ ಈ ದಿನವನ್ನು ನಾನು ಎಂದಿಗೂ ಮರೆಯದ ದಿನ ಎಂದು ಹೇಳಿದ್ದಾರೆ. ನಟಿ ಅಹಾನಾ ಕೃಷ್ಣ ಅವರು ಇದೊಂದು ಸ್ಪೂರ್ತಿದಾಯಕ ಅನುಭವ ಎಂದು ಹೇಳಿದ್ದಾರೆ.

ಇಸ್ರೇಲ್-ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ಹೊರ್ಮುಜ್‌ ಜಲಮಾರ್ಗ ಮುಕ್ತ: ಟ್ರಂಪ್ ಬೆದರಿಕೆ ಬೆನ್ನಲ್ಲೇ ಇರಾನ್ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಂದು ಅತ್ಯಂತ ಸ್ಪೂರ್ತಿದಾಯಕ ಬೆಳಗ್ಗೆ ಎಂದು ಬಣ್ಣಿಸಿರುವ ಅವರು, ಉನ್ನತ ಸ್ಥಾನದಲ್ಲಿರುವ ಅವರು ನಮ್ಮನ್ನು ತುಂಬಾ ಆತ್ಮೀಯತೆಯಿಂದ ಸ್ವಾಗತಿಸಿದ್ದನ್ನು ನೋಡಿ ನಾನು ಸಂಪೂರ್ಣ ವಿಸ್ಮಯಗೊಂಡೆ. ನಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು. ನಮ್ಮ ಅನೇಕ ಸಣ್ಣ ಪ್ರಶ್ನೆಗಳಿಗೂ ಉತ್ತರಿಸಿದರು.