ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಲ್ಮಾನ್‌ ಖಾನ್‌- ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌; ದಾಳಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಪೋಸ್ಟ್‌ ಹಾಕೋದೇಕೆ? ಏನಿದರ ಉದ್ದೇಶ?

ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಕಾರನ್ನು ಗುರಿಯಾಗಿಸಿ 5 ಸುತ್ತು ಗುಂಡು ಹಾರಿಸಿದ್ದಾರೆ. ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಎಡಗೈಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸೋಶಿಯಲ್‌ ಮೀಡಿಯದಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಪೋಸ್ಟ್‌ ಹಾಕೋದೇಕೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 19, 2026 11:36 AM

ಮುಂಬೈ: ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಕಾರನ್ನು ಗುರಿಯಾಗಿಸಿ 5 ಸುತ್ತು ಗುಂಡು ಹಾರಿಸಿದ್ದಾರೆ. ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಎಡಗೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರ ಎನ್ನಲಾದ ಅನಿಲ್ ಪಂಡಿತ್ ಎಂಬಾತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮತ್ತು ಆಡಿಯೋ ಕ್ಲಿಪ್ ಹಂಚಿಕೊಳ್ಳುವ ಮೂಲಕ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮುಂದುವರಿಸುವವರು ಅಥವಾ ಅವರೊಂದಿಗೆ ಸಂಪರ್ಕದಲ್ಲಿ ಇರುವವರು ನಮ್ಮ ಮುಂದಿನ ಗುರಿಯಾಗಲಿದ್ದಾರೆ ಎಂದು ಚಿತ್ರರಂಗಕ್ಕೆ ಬಹಿರಂಗ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೇ ಟೈಗರ್ ಶ್ರಾಫ್ ಅವರಿಗೆ ಈ ಹಿಂದೆ ಸಂಪರ್ಕಿಸಿ ಎಚ್ಚರಿಕೆ ನೀಡಲಾಗಿತ್ತು, ಆದರೆ ಅವರು ನಮ್ಮ ಮಾತುಗಳನ್ನು ನಿರ್ಲಕ್ಷಿಸಿದರು. ಅವರಿಗೆ ಬುದ್ಧಿ ಹೇಳಲು ಪ್ರಯತ್ನಿಸಿದೆವು, ಆದರೆ ಅವರಿಗೆ ಅರ್ಥವಾಗಲಿಲ್ಲ. ಹಾಗಾಗಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಗ್ಯಾಂಗ್ ಹೇಳಿಕೊಂಡಿದೆ.

ಬಿಷ್ಣೋಯ್‌ ಗ್ಯಾಂಗ್‌ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಬೆದರಿಕೆ ಹಾಕುವುದು ಹೊಸದೇನಲ್ಲ. ಏಪ್ರಿಲ್ 2024 ರಲ್ಲಿ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಿಂದ ಹಿಡಿದು ಫೆಬ್ರವರಿ 2026 ರಲ್ಲಿ ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯವರೆಗೆ ಬಿಷ್ಣೋಯ್‌ ಗ್ಯಾಂಗ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಲೇ ಬಂದಿದೆ.

ಏನಿದರ ಉದ್ದೇಶ?

ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ಇಡೀ ದೇಶಾದ್ಯಂತ ಗ್ಯಾಂಗ್‌ನ ಹೆಸರನ್ನು ಹರಡುವುದು ಮತ್ತು ತಾವೇ ಅತ್ಯಂತ ಶಕ್ತಿಶಾಲಿ ಗ್ಯಾಂಗ್ ಎಂದು ಬಿಂಬಿಸಿಕೊಳ್ಳುವುದು ಇವರ ತಂತ್ರವಾಗಿದೆ. ಅಷ್ಟು ಮಾತ್ರವಲ್ಲ ತನಿಖೆಯ ದಿಕ್ಕು ತಪ್ಪಿಸಿ ತನಿಖಾಧಿಕಾರಿಗಳಿಗೆ ಅದನ್ನು ನಿಜವಾಗಿಯೂ ಯಾರು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ತನಿಖೆ ಮಾಡಿಸುವ ತಂತ್ರವೂ ಇದೆ.

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ: ಆಡಿಯೋ ಮೆಸೇಜ್‌ನಲ್ಲಿ ಸಲ್ಮಾನ್‌ ಖಾನ್‌ ಹೆಸರು ಉಲ್ಲೇಖಿಸಿದ ಬಿಷ್ಣೋಯ್‌ ಗ್ಯಾಂಗ್‌

ಈ ಗ್ಯಾಂಗ್ ಸಾಮಾಜಿಕ ಮಾಧ್ಯಮ ಖಾತೆಗಳು, ವೀಡಿಯೊಗಳು ಮತ್ತು ಪೋಸ್ಟ್‌ಗಳ ಮೂಲಕ ತನ್ನ ಸದಸ್ಯರನ್ನು ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದು ಬಿಂಬಿಸುವ ಮೂಲಕ ಸಾರ್ವಜನಿಕವಾಗಿ ಒಂದು ಇಮೇಜ್ ಅನ್ನು ಬೆಳೆಸಿಕೊಂಡಿದೆ. ಇಂಟರ್ನೆಟ್‌ನಲ್ಲಿ ತಾವೇ ಅತ್ಯಂತ ಶಕ್ತಿಶಾಲಿ ಮತ್ತು ಕಾನೂನಿಗಿಂತ ದೊಡ್ಡವರು ಎಂದು ಬಿಂಬಿಸಿಕೊಳ್ಳುವ ಮೂಲಕ, ದಾರಿ ತಪ್ಪಿದ ಯುವಕರನ್ನು ತಮ್ಮ ಗ್ಯಾಂಗ್‌ಗೆ ಆಕರ್ಷಿಸಲು ಈ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ. ತಾವು ನಡೆಸಿದ ಕೃತ್ಯವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ಇಡೀ ಸಮಾಜ, ಚಿತ್ರರಂಗ ಮತ್ತು ಉದ್ಯಮಿಗಳಲ್ಲಿ ತೀವ್ರವಾದ ಭಯವನ್ನು ಹುಟ್ಟಿಸುವುದು ಇವರ ಮೊದಲ ಉದ್ದೇಶ.