ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಯೋತ್ಪಾದಕ ನೆಲೆ ಮೇಲೆ ವೈಮಾನಿಕ ದಾಳಿ; LET ಪ್ರಮುಖ ಕಮಾಂಡರ್‌ಫಿನಿಷ್‌

ಏ. 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 26 ಜನರ ಹತ್ಯೆಗೆ ಭಾರತ ಪ್ರತೀಕಾರ ತೆಗೆದುಕೊಂಡಿದೆ. ಪಾಕ್‌ ನೆಲದಲ್ಲಿರುವ 9 ಉಗ್ರರ ನೆಲೆ ಮೇಲೆ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನ ಹಾಗೂ POK ಅಲ್ಲಿರುವ 9 ಸ್ಥಳಗಳಾದ ಕೊಟ್ಪಿ, ಮುಜಾಫರ್‌ಬಾದ್, ಬಹವಲ್ಪುರ್‌ ಬಳಿ ಏರ್‌ಸ್ಟ್ರೈಕ್ ನಡೆದಿದೆ.

ವೈಮಾನಿಕ ದಾಳಿಯಲ್ಲಿ LET ಪ್ರಮುಖ ಕಮಾಂಡರ್‌ ಫಿನಿಷ್‌

Profile Vishakha Bhat May 7, 2025 10:32 AM

ಇಸ್ಲಾಮಾಬಾದ್‌: ಏ. 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 26 ಜನರ ಹತ್ಯೆಗೆ ಭಾರತ ಪ್ರತೀಕಾರ ತೆಗೆದುಕೊಂಡಿದೆ. ಪಾಕ್‌ ನೆಲದಲ್ಲಿರುವ 9 ಉಗ್ರರ ನೆಲೆ ಮೇಲೆ ವಾಯುಪಡೆ ವೈಮಾನಿಕ ದಾಳಿ (Operation Sindoor) ನಡೆಸಿದೆ. ಪಾಕಿಸ್ತಾನ ಹಾಗೂ POK ಅಲ್ಲಿರುವ 9 ಸ್ಥಳಗಳಾದ ಕೊಟ್ಪಿ, ಮುಜಾಫರ್‌ಬಾದ್, ಬಹವಲ್ಪುರ್‌ ಬಳಿ ಏರ್‌ಸ್ಟ್ರೈಕ್ ನಡೆದಿದೆ. ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ. ಇದೀಗ ದಾಳಿಯಲ್ಲಿ LET ಕಮಾಂಡರ್‌ ಮುಸಾದಿರ್‌, ಉಗ್ರ ಹಫೀಸ್‌ ಅಬ್ದುಲ್‌, ಬದ್ರುದ್ದೀನ್‌ ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಜೆಇಎಂನ ಪ್ರಬಲ ಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿಗಳನ್ನು ನಡೆಸಲಾಗಿದ್ದು, ಪ್ರತಿ ಸ್ಥಳದಲ್ಲಿ ಅಂದಾಜು 25–30 ಭಯೋತ್ಪಾದಕರು ಹತರಾಗಿದ್ದಾರೆ. ಮುರಿಡ್ಕೆಯಲ್ಲಿ, ಎಲ್‌ಇಟಿಯ ನರ ಕೇಂದ್ರ ಮತ್ತು ಸೈದ್ಧಾಂತಿಕ ಪ್ರಧಾನ ಕಚೇರಿಯಾದ ಮಸ್ಜಿದ್ ವಾ ಮರ್ಕಜ್ ತೈಬಾ ಗುರಿಯಾಗಿತ್ತು, ಇದನ್ನು ದೀರ್ಘಕಾಲದಿಂದ ಪಾಕಿಸ್ತಾನದ "ಭಯೋತ್ಪಾದನಾ ನರ್ಸರಿ" ಎಂದು ಪರಿಗಣಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Operation Sindoor: ಉಗ್ರರರನ್ನು ಸದೆ ಬಡಿದಿರುವುದು ಸಮಾಧಾನ ತಂದಿದೆ; ಆಪರೇಷನ್‌ ಸಿಂಧೂರ್‌ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಪಹಲ್ಗಾಮ್ ಸಂತ್ರಸ್ತನ ಪುತ್ರಿ

ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೋದಿ ಕೇಂದ್ರ ಸಚಿವ ಸಂಪುಟ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ಕರೆದಿದ್ದಾರೆ. ಸಂಪುಟ ಸಭೆ ಕರೆದಿದ್ದು, ಸಭೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದು, ಬಳಿಕ ಮುಂದಿನ ಕಾರ್ಯಚರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.