ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತಕ್ಕೆ ಮುಂದಿನ ವರ್ಷ ಭೇಟಿ ನೀಡ್ತಾರಾ ಟ್ರಂಪ್‌; ಅಮೆರಿಕದ ರಾಯಭಾರಿ ಹೇಳಿದ್ದೇನು?

ಅಮೆರಿಕೆಗೆ ಭಾರತಕ್ಕಿಂತ ಮಹತ್ವದ ದೇಶ ಮತ್ತೊಂದಿಲ್ಲ ಎಂದು ಅಮೆರಿಕದ ರಾಯಭಾರಿ ಕಚೇರಿ ಅಧಿಕಾರಿ ಹೇಳಿದ್ದಾರೆ. ವಾಷಿಂಗ್ಟನ್ ಮತ್ತು ನವದೆಹಲಿಯ ನಡುವಿನ ವ್ಯಾಪಾರ ಒಪ್ಪಂದದ ಮುಂದಿನ ಹಂತದ ಚರ್ಚೆಗಳು ಪುನರಾರಂಭವಾಗಲಿದ್ದು, ಮುಂದಿನ ವರ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಟ್ರಂಪ್ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ

ಸಾಂದರ್ಭಿಕ ಚಿತ್ರ -

Profile
Sushmitha Jain Jan 12, 2026 6:41 PM

ನವದೆಹಲಿ: ಅಮೆರಿಕಕ್ಕೆ (United States) ಭಾರತದಷ್ಟು(India) ಮಹತ್ವದ ದೇಶ ಮತ್ತೊಂದಿಲ್ಲ ಎಂದು ಅಮೆರಿಕದ ರಾಯಭಾರಿ ಕಚೇರಿ(US mbassador) ಅಧಿಕಾರಿ ಸರ್ಜಿಯೋ ಗೋರ್(Sergio Gor) ಹೇಳಿದ್ದಾರೆ. ವಾಷಿಂಗ್ಟನ್(Washington) ಮತ್ತು ನವದೆಹಲಿಯ ನಡುವೆ ಮುಂದಿನ ಹಂತದ ವ್ಯಾಪಾರ ಒಪ್ಪಂದ ಚರ್ಚೆಗಳು ಪುನರಾರಂಭವಾಗಲಿವೆ ಎಂದ ಅವರು, ಮುಂದಿನ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟ್ರಂಪ್ ಅವರ ಸ್ನೇಹ “ನಿಜವಾದದ್ದು” ಎಂದು ತಿಳಿಸಿದ್ದು, ನಿಜವಾದ ಸ್ನೇಹಿತರಾದವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.

ಭಾರತ-ಅಮೆರಿಕ ನಿಜವಾದ ಸ್ನೇಹಿತರು!

ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, "ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಿಜವಾದ ಸ್ನೇಹವಿದೆ, ನಿಜವಾದ ಸ್ನೇಹಿತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಲ್ಲರು. ಅಮೆರಿಕಾ ಮತ್ತು ಭಾರತ ಕೇವಲ ಹಿತಾಸಕ್ತಿಗಳಿಂದ ಮಾತ್ರವಲ್ಲ, ಉನ್ನತ ಮಟ್ಟದ ಸಂಬಂಧಗಳಿಂದ ಬಂಧಿತವಾಗಿವೆ," ಎಂದು ಹೇಳಿದರು.

"ಭಾರತವು ವಿಶ್ವದ ಅತಿದೊಡ್ಡ ದೇಶವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ ತಲುಪಿಸುವುದು ಸುಲಭವಲ್ಲ, ಆದರೆ ನಾವು ಅದನ್ನು ಸಾಧಿಸಲು ದೃಢನಿಶ್ಚಯ ಹೊಂದಿದ್ದೇವೆ," ಎಂದು ಗೋರ್ ತಿಳಿಸಿದರು. ವ್ಯಾಪಾರವು ನವದೆಹಲಿ–ವಾಷಿಂಗ್ಟನ್ ಸಂಬಂಧದಲ್ಲಿ ಬಹಳ ಮುಖ್ಯವಾದ ಅಂಶವಾದರೂ, ಭದ್ರತೆ, ಉಗ್ರವಿರೋಧ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಇತರ ಪ್ರಮುಖ ಕ್ಷೇತ್ರಗಳಲ್ಲಿಯೂ ಎರಡೂ ರಾಷ್ಟ್ರಗಳು ಸಹಕರಿಸುತ್ತಿವೆ ಎಂದು ಅವರು ಹೇಳಿದರು.

ಟ್ರಂಪ್ ಭಾರತ ಭೇಟಿ

ಎರಡು ದೇಶಗಳ ನಡುವಿನ ಸಹಭಾಗಿತ್ವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದೇ ನಮ್ಮ ಉದ್ದೇಶವಾಗಿದೆ ಎಂದು ಗೋರ್ ಹೇಳಿದ್ದಾರೆ. ಅಲ್ಲದೇ, ಅಧ್ಯಕ್ಷ ಟ್ರಂಪ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದರು.

"ಇದು ವಿಶ್ವದ ಅತಿಪುರಾತನ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ಸಂಗಮವಾಗಿದೆ. ನನ್ನ ಕೊನೆಯ ಭೋಜನ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಈ ಹಿಂದೆ ಭಾರತಕ್ಕೆ ನೀಡಿದ ಭೇಟಿ ಮತ್ತು ಭಾರತದ ಮಹಾನ್ ಪ್ರಧಾನಿಯೊಂದಿಗಿನ ಆಳವಾದ ಸ್ನೇಹವನ್ನು ಸ್ಮರಿಸಿದ್ದರು. ಟ್ರಂಪ್ ಅವರಿಗೆ ಬೆಳಗಿನ 2 ಗಂಟೆಗೆ ಕರೆ ಮಾಡುವ ಅಭ್ಯಾಸವಿದೆ... ನವದೆಹಲಿಯ ಸಮಯ ವ್ಯತ್ಯಾಸವನ್ನು ನೋಡಿದರೆ, ಅದು ಚೆನ್ನಾಗಿ ಹೊಂದಿಕೊಳ್ಳಬಹುದು," ಎಂದು ಗೋರ್ ಹೇಳಿದರು.

ಕನ್ನಡಿಗರಿಗೆ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ; ಉದ್ಯಮಿ ಕಿರಣ್‌ ಮಜುಂದಾರ್‌ ಶಾ ವಿರೋಧ

'ಭಾರತ ಮಹತ್ವದ ಪಾಲುದಾರ'

"ಭಾರತಕ್ಕಿಂತ ಹೆಚ್ಚು ಮಹತ್ವದ ಪಾಲುದಾರ ಮತ್ತಾರೂ ಇಲ್ಲ. ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ, ರಾಯಭಾರಿಯಾಗಿ ನಾನು ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಸೂಚಿಯನ್ನು ಅನುಸರಿಸುವ ಗುರಿ ಹೊಂದಿದ್ದೇನೆ ಎಂದು ಗೋರ್ ಹೇಳಿದರು. ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, ಅದು ಸವಾಲಿನ ಕೆಲಸ. ಆದರೂ ಅದನ್ನು ಅಂತಿಮ ಹಂತಕ್ಕೆ ತಲುಪಿಸುವ ದೃಢಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.

"ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಗಳ ಕುರಿತು ಅನೇಕರು ನನ್ನಿಂದ ಮಾಹಿತಿ ಕೇಳಿದ್ದಾರೆ. ಎರಡೂ ದೇಶಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಾಸ್ತವವಾಗಿ ವ್ಯಾಪಾರದ ಕುರಿತ ನಾಳೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಭಾರತವು ವಿಶ್ವದ ಅತಿದೊಡ್ಡ ದೇಶವಾಗಿರುವುದರಿಂದ, ಈ ಒಪ್ಪಂದವನ್ನು ಅಂತಿಮಗೊಳಿಸುವುದು ಸುಲಭವಲ್ಲ," ಎಂದು ಅವರು ಹೇಳಿದರು.

ಪ್ಯಾಕ್ಸ್ ಸಿಲಿಕಾ ಮೈತ್ರಿ

ಭಾರತವು ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟದ ಸದಸ್ಯವಾಗಲಿದೆ ಎಂದು ಗೋರ್ ಘೋಷಿಸಿದ್ದಾರೆ. ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟವು ಸುರಕ್ಷಿತ, ಸ್ಥಿರ ಮತ್ತು ನಾವೀನ್ಯತೆ ಆಧಾರಿತ ಸಿಲಿಕಾನ್ ಸರಬರಾಜು ಸರಪಳಿಯನ್ನು ನಿರ್ಮಿಸುವ ಉದ್ದೇಶದ ಅಮೆರಿಕಾ ನೇತೃತ್ವದ ತಂತ್ರಾತ್ಮಕ ಉಪಕ್ರಮವಾಗಿದೆ