Pak attack India: ಭಾರತದ ವಿರುದ್ಧದ ದಾಳಿಗೆ ಪಾಕ್‌ಗೆ ಸಹಾಯ- ಟರ್ಕಿಯ ಕುಕೃತ್ಯ ಬಟಾಬಯಲು!
India-Pak tensions: ಆಪರೇಷನ್ ಸಿಂಧೂರ್ ನಂತರ ಭಾರತದ ಮೇಲಿನ ಡ್ರೋನ್ ದಾಳಿ ನಡೆಸಲು ಟರ್ಕಿಶ್ ಸೇನೆಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. ಪಾಕಿಸ್ತಾನವು ಭಾರತದ ವಿರುದ್ಧ ಬೇರಕ್ತಾರ್ ಟಿಬಿ2 ಮತ್ತು ಯಿಹಾ ಡ್ರೋನ್‌ಗಳನ್ನು ಬಳಸಿದೆ ಎಂದು ವರದಿಯಾಗಿದೆ. ಡ್ರೋನ್‌ಗಳನ್ನು ನಿರ್ದಿಷ್ಟ ಗುರಿಯನ್ನು ಗುರುತಿಸಲು ಮತ್ತು ಸಂಭಾವ್ಯವಾಗಿ ಕಾಮಿಕೇಜ್ ದಾಳಿಗಳಿಗೆ ಬಳಸಲಾಗುತ್ತದೆ. ಈ ಡ್ರೋನ್‌ಗಳನ್ನು ಟರ್ಕಿ ಪಾಕಿಸ್ತಾನಕ್ಕೆ ಪೂರೈಕೆ ಮಾಡಿತ್ತು ಎನ್ನಲಾಗಿದೆ. ಇದೀಗ ಈ ವಿಚಾರ ಬಯಲಾಗುತ್ತಿದ್ದಂತೆ ಟರ್ಕಿಯನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬರುತ್ತಿದೆ.


ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಪ್ರತೀಕಾರವಾಗಿ ಆಪರೇಷನ್ ಸಿಂದೂರ್ ನಡೆಸಿ ಉಗ್ರರನ್ನು ಸದೆಬಡಿದಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ(India-Pak tensions) ಪ್ರಕ್ಷುಬ್ದತೆ ಕ್ಷಣ ಕ್ಷಣ ಹೆಚ್ಚಾಗಿ, ಉಭಯ ರಾಷ್ಟ್ರಗಳ ನಡುವಿನ ದಾಳಿ-ಪ್ರತಿದಾಳಿಗಳು ಶುರುವಾದವು. ಇದೀಗ ಭಾರತದ ವಿರುದ್ಧ ದಾಳಿ ನಡೆಸಲು ಕುತಂತ್ರಿ ಪಾಕಿಸ್ತಾನಕ್ಕೆ ಟರ್ಕಿ ಸಹಾಯ ಮಾಡಿತ್ತು ಎಂಬ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂದೂರ್‌ನಲ್ಲಿ ಇಬ್ಬರು ಟರ್ಕಿಶ್ ಯೋಧರು ಸಾವನ್ನಪ್ಪಿದ್ದರು. ಇದರಿಂದಾಗಿ ಪಾಕ್‌ಗೆ ಟರ್ಕಿಗೆ ಸಹಾಯ ಮಾಡಿದ್ದ ಸಂಗತಿ ಸಾಕ್ಷಿ ಸಮೇತ ಬಯಲಾಗಿತ್ತು. ಟರ್ಕಿ 350 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನೀಡಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಮಾತ್ರವಲ್ಲದೆ, ಉಗ್ರರ ಜೊತೆಗೂ ಕೈ ಜೋಡಿಸಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ನಂತರ ಭಾರತದ ಮೇಲೆ ಡ್ರೋನ್ ದಾಳಿ ನಡೆಸಲು ಟರ್ಕಿಶ್ ಸೇನೆಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. ಪಾಕಿಸ್ತಾನವು ಭಾರತದ ವಿರುದ್ಧ ಬೇರಕ್ತಾರ್ ಟಿಬಿ2 ಮತ್ತು ಯಿಹಾ ಡ್ರೋನ್‌ಗಳನ್ನು ಬಳಸಿದೆ ಎಂದು ವರದಿಯಾಗಿದೆ. ಡ್ರೋನ್‌ಗಳನ್ನು ನಿರ್ದಿಷ್ಟ ಗುರಿಯನ್ನು ಗುರುತಿಸಲು ಮತ್ತು ಸಂಭಾವ್ಯವಾಗಿ ಕಾಮಿಕೇಜ್ ದಾಳಿಗಳಿಗೆ ಬಳಸಲಾಗುತ್ತದೆ. ಈ ಡ್ರೋನ್‌ಗಳನ್ನು ಟರ್ಕಿ ಪಾಕಿಸ್ತಾನಕ್ಕೆ ಪೂರೈಕೆ ಮಾಡಿತ್ತು ಎನ್ನಲಾಗಿದೆ. ಇದೀಗ ಈ ವಿಚಾರ ಬಯಲಾಗುತ್ತಿದ್ದಂತೆ ಟರ್ಕಿಯನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬರುತ್ತಿದೆ.
ಈ ಸುದ್ದಿಯನ್ನೂ ಓದಿ: Pakistan Diplomate Expels: ಪಾಕಿಸ್ತಾನಿ ರಾಜತಾಂತ್ರಿಕ ಅಧಿಕಾರಿಗೆ ಭಾರತ ತೊರೆಯಲು 24 ಗಂಟೆಗಳ ಗಡುವು
ಮೇ 7 ಮತ್ತು 8 ರ ಮಧ್ಯರಾತ್ರಿಯಲ್ಲಿ, ಪಾಕಿಸ್ತಾನ ಸೇನೆಯು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಭಾರತೀಯ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸುಮಾರು 300–400 ಡ್ರೋನ್‌ಗಳನ್ನು ಬಳಸಿತ್ತು. ಇದೀಗ ಡ್ರೋನ್‌ಗಳ ಅವಶೇಷಗಳ ಬಗ್ಗೆ ವಿಧಿವಿಜ್ಞಾನ ತನಿಖೆ ನಡೆಸಲಾಗುತ್ತಿದೆ. ಆರಂಭಿಕ ತನಿಖೆಯಲ್ಲಿ ಅವು ಟರ್ಕಿಶ್ ಆಸಿಸ್‌ಗಾರ್ಡ್ ಸೊಂಗರ್ ಡ್ರೋನ್‌ಗಳು ಎಂಬುದು ತಿಳಿದುಬಂದಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಆಪರೇಷನ್ ಸಿಂಧೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇನ್ನು ಪಾಕ್ ದಾಳಿ ನಡೆಸಿರುವ ಡ್ರೋನ್‌ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಲೆಹ್ ನಿಂದ ಸರ್ ಕ್ರೀಕ್‌ವರೆಗಿನ 36 ಸ್ಥಳಗಳಲ್ಲಿನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಪಾಕಿಸ್ತಾನ ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಬಳಸಿದೆ ಎಂದು ಸೇನೆ ತಿಳಿಸಿದೆ.