ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

UP Dowry Case: ವರದಕ್ಷಿಣೆ ಕಿರುಕುಳ- ಸೊಸೆಗೆ ಎಚ್‌ಐವಿ ಇಂಜೆಕ್ಷನ್‌ ಚುಚ್ಚಿದ ನೀಚ ಅತ್ತೆ-ಮಾವ!

ವರದಕ್ಷಿಣೆ ಕೊಡದ ಕಾರಣಕ್ಕೆ ತಮ್ಮ ಸೊಸೆಗೆ ಚಿತ್ರ ಹಿಂಸೆ ನೀಡಿದ ಅತ್ತೆ-ಮಾವ ಬಲವಂತವಾಗಿ ಎಚ್‌ಐವಿ ಸೋಂಕಿತ ಇಂಜೆಕ್ಷನ್ ನೀಡಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ಈ ಆತಂಕಕಾರಿ ಘಟನೆಯು ಉತ್ತರಪ್ರದೇಶದಲ್ಲಿ ನಡದಿದ್ದು, ಹೆಣ್ಣಿನ ತಂದೆ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ: ಸೊಸೆಗೆ ಎಚ್‌ಐವಿ ಇಂಜೆಕ್ಷನ್‌ ಚುಚ್ಚಿದ ಅತ್ತೆ-ಮಾವ!

ಸಾಂದರ್ಭಿಕ ಚಿತ್ರ

Profile Deekshith Nair Feb 16, 2025 1:23 PM

ಲಖನೌ: ವರದಕ್ಷಿಣೆಯಾಗಿ(UP Dowry Case) 10 ಲಕ್ಷ ರೂಪಾಯಿ ಮತ್ತು ಕಾರು ಕೊಟ್ಟಿಲ್ಲವೆಂಬ ಕಾರಣಕ್ಕೆ ಅತ್ತೆ-ಮಾವ ತಮ್ಮ ಸೊಸೆಗೆ ಬಲವಂತವಾಗಿ ಎಚ್‌ಐವಿ ಸೋಂಕಿತ ಇಂಜೆಕ್ಷನ್(HIV Injection) ನೀಡಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ಈ ಆತಂಕಕಾರಿ ಘಟನೆಯು ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಡದಿದ್ದು, ಹೆಣ್ಣಿನ ತಂದೆ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸಹರಾನ್​ಪುರ ನಿವಾಸಿಯಾಗಿದ್ದು, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪ್ರಕಾರ, ಈ ಘಟನೆ ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಸಂತ್ರಸ್ತೆಯ ತಂದೆ ಮಾತನಾಡಿದ್ದು, 2023ರಲ್ಲಿ ತಮ್ಮ ಮಗಳ ಮದುವೆ ಮಾಡಿಕೊಟ್ಟಿದ್ದೆವು, ಮದುವೆಗೆ 45 ಲಕ್ಷ ರೂ. ಖರ್ಚು ಮಾಡಿದ್ದೆವು. ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಹಾಗೂ ಸಬ್​-ಕಾಂಪ್ಯಾಕ್ಟ್​ ಎಸ್​ಯುವಿ ನೀಡಿದ್ದೇವೆ, ಆದರೆ ಅವರು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ನಗದು ಮತ್ತು ದೊಡ್ಡ ಎಸ್​ಯುವಿ ಕೇಳಿದ್ದಾರೆ ಎಂದು ಹೇಳಿದ್ದಾರೆ. ಮದುವೆಯಾದ ದಿನದಿಂದಲೂ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ, ಮಗಳನ್ನು ಅವಮಾನಿಸಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿದ್ದರು. ಮಾರ್ಚ್​ 25, 2023ರಂದು ಆಕೆಯನ್ನು ಮನೆಯಿಂದ ಹೊರಹಾಕಿದರು. ಮೂರು ತಿಂಗಳುಗಳ ಕಾಲ ನಮ್ಮೊಂದಿಗೆ ಇದ್ದಳು. ನಂತರ ಹಿರಿಯರನ್ನು ಸೇರಿಸಿ ರಾಜಿ ಮಾಡಿ ಮತ್ತೆ ಆಕೆಯ ಗಂಡನ ಮನೆಗೆ ಕಳುಹಿಸಲಾಯಿತು. ಅಷ್ಟಾದರೂ ಅವರು ವರದಕ್ಷಿಣೆ ಕಿರುಕುಳ ನೀಡಿದರು ಎಂದು ತಿಳಿಸಿದ್ದಾರೆ.



ವರದಕ್ಷಿಣೆಗಾಗಿ ನಿರಂತರವಾಗಿ ಸೊಸೆಯನ್ನು ಹಿಂಸಿಸಿರುವ ನೀಚ ಅತ್ತೆ-ಮಾವ 2024ರ ಮೇ ತಿಂಗಳಲ್ಲಿ ಬಲವಂತವಾಗಿ ಆಕೆಗೆ ಎಚ್​ಐವಿ ಸೋಂಕಿತ ಇಂಜೆಕ್ಷನ್‌ ಚುಚಿದ್ದಾರೆ. ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆಗೆ ಎಚ್​ಐವಿ ಪಾಸಿಟಿವ್ ಬಂದಿದೆ. ಆದರೆ ಆಕೆಯ ಪತಿಗೆ ಎಚ್‌ಐವಿ-ನೆಗೆಟಿವ್ ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ:New Delhi Stampede : ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; 18 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ತನಿಖೆ ನಡೆಸಲಿದ್ದಾರೆ.