ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ವರ್ಷಗಳ ಬಳಿಕ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮರಳಿದ ವ್ಯಕ್ತಿ; ಘರ್ ವಾಪಸಿಗೆ ಕಾರಣವೇನು?

ಸುಮಾರು 20 ವರ್ಷಗಳ ಹಿಂದೆ ಒತ್ತಾಯ ಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಹೆಂಡತಿಯೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಪರಿವರ್ತನೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉದ್ಯೋಗಕ್ಕೆಂದು ಪಶ್ಚಿಮ ಬಂಗಾಳದ ಮಾಲ್ಡಾಗೆ ತೆರಳಿದ್ದ ರಾಜ್‌ಕುಮಾರ್ ಎಂಬವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿ ರಫೀಕ್ ಎಂದು ಗುರುತಿಸಿಕೊಂಡಿದ್ದರು.

ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿ ಮರಳಿ ಹಿಂದೂ ಧರ್ಮ ಸ್ವೀಕಾರ

ಸಂಗ್ರಹ ಚಿತ್ರ -

ಉತ್ತರ ಪ್ರದೇಶ: ಇಸ್ಲಾಂ (Islam) ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬರು ಹಿಂದೂ (Hindu) ಧರ್ಮಕ್ಕೆ ಮರಳಿದ ಘಟನೆ ಉತ್ತರ ಪ್ರದೇಶದಲ್ಲಿ (Uttar pradesh) ನಡೆದಿದೆ. ಸುಮಾರು 20 ವರ್ಷಗಳ ಹಿಂದೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಉದ್ಯೋಗ ಅರಸಿಕೊಂಡು ಪಶ್ಚಿಮ ಬಂಗಾಳಕ್ಕೆ (west bengal) ತೆರಳಿದ್ದು, ಅಲ್ಲಿ ಒತ್ತಾಯ ಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿದ್ದರು. ಇದೀಗ ಅವರು ತಮ್ಮ ಹೆಂಡತಿಯೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಝಾನ್ಸಿ ಮೂಲದ ರಾಜ್ ಕುಮಾರ್ ಎಂಬವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿ ರಫೀಕ್ ಎಂದು ಗುರುತಿಸಿಕೊಂಡಿದ್ದರು. ಇದೀಗ ಅವರು ಮತ್ತವರ ಪತ್ನಿ ಹಿಂದೂ ಧರ್ಮಕ್ಕೆ ಪರಿವರ್ತನೆಗೊಂಡಿದ್ದಾರೆ.

ರಾಜ್ ಕುಮಾರ್ ಅವರು ಸುಮಾರು ಎರಡು ದಶಕಗಳ ಹಿಂದೆ ಉದ್ಯೋಗಕ್ಕಾಗಿ ಪಶ್ಚಿಮ ಬಂಗಾಳದ ಮಾಲ್ಡಾಗೆ ತೆರಳಿದ್ದರು. ಅಲ್ಲಿ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಅವರು ತಮ್ಮ ಪತ್ನಿಯೊಂದಿಗೆ ಝಾನ್ಸಿಯ ಪ್ರಾಚೀನ ಶಿವ ದೇವಾಲಯವೊಂದರಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಪರಿವರ್ತನೆಗೊಂಡರು. ಈ ಸಂದರ್ಭದಲ್ಲಿ ಅರ್ಚಕರು ಮತ್ತು ಹಿಂದೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

“2016ರಲ್ಲಿ ಬಿಜೆಪಿ ಟಿಕೆಟ್ ನೀಡಲು ಜ್ಞಾನೇಶ್ ಕುಮಾರ್ ಮುಂದಾಗಿದ್ದರು”: ಚುನಾವಣಾ ಆಯುಕ್ತರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕೇರಳಂ ಮಾಜಿ ಮುಖ್ಯ ಕಾರ್ಯದರ್ಶಿ

ರಾಜ್‌ಕುಮಾರ್ ಅವರು ಸುಮಾರು 20 ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಮಾಲ್ಡಾಗೆ ತೆರಳಿ ಅಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಆಗ ಅವರು ತಮ್ಮ ಧರ್ಮವನ್ನು ಬದಲಾಯಿಸುವಂತೆ ಕೆಲವರು ಒತ್ತಡ ಹೇರಿದ್ದರಿಂದ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ರಫೀಕ್ ಎಂದು ಗುರುತಿಸಿಕೊಂಡರು. ಅನಂತರ ಸ್ಥಳೀಯ ಮುಸ್ಲಿಂ ಮಹಿಳೆ ಅಫ್ಸರಿ ಖಾತುನ್ ಅವರನ್ನು ವಿವಾಹವಾದರು.

ಆಧಾರ್ ಕಾರ್ಡ್ ಸೇರಿದಂತೆ ಅಧಿಕೃತ ದಾಖಲೆಗಳನ್ನು ರಫೀಕ್ ಹೆಸರಿನಲ್ಲೇ ಪಡೆದ ಅವರು ಪತ್ನಿ ಮತ್ತು ತಮ್ಮ ನಾಲ್ವರು ಮಕ್ಕಳೊಂದಿಗೆ ಝಾನ್ಸಿಯ ರಾಕ್ಸಾ ಪ್ರದೇಶದಲ್ಲಿರುವ ತಮ್ಮ ಸ್ವಗ್ರಾಮವಾದ ರಾಜಾಪುರಕ್ಕೆ ಮರಳಿದ್ದಾರೆ.

ಅವರ ಸಂಬಂಧಿಕರು ಆರಂಭದಲ್ಲಿ ಅವರನ್ನು ಸ್ವೀಕರಿಸಲು ನಿರಾಕರಿಸಿದರು. ಅನಂತರ ಅವರು ಹಿಂದೂ ಧರ್ಮಕ್ಕೆ ಮರಳಲು ಅನುಮತಿ ಕೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದರು. ಅವರ ಮನವಿ ಮೇರೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಸನಾತನ ಏಕತಾ ಸಂಘದ ಸದಸ್ಯರ ಸಮ್ಮುಖದಲ್ಲಿ ಝಾನ್ಸಿಯ ಸಿದ್ದೇಶ್ವರ ದೇವಾಲಯದಲ್ಲಿ ಸಮಾರಂಭವೊಂದನ್ನು ಆಯೋಜಿಸಿ ದಂಪತಿಗೆ ಹಿಂದೂ ಧರ್ಮಕ್ಕೆ ಮರಳಿ ಕರೆ ತರಲಾಯಿತು.

ದೇವಾಲಯದ ಅರ್ಚಕ ಪಂಡಿತ್ ರಾಜೀವ್ ಪಾಠಕ್ ಮತ್ತು ಇತರ ಬ್ರಾಹ್ಮಣರು ಹವನ ಮತ್ತು ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ರಾಜ್‌ಕುಮಾರ್ ಅವರಿಗೆ ಯಜ್ಞೋಪವೀತವನ್ನು ಧಾರಣೆ ಮಾಡಿಸಲಾಯಿತು. ದಂಪತಿಯ ಮಣಿಕಟ್ಟುಗಳಿಗೆ ರಕ್ಷಾ ಸೂತ್ರವನ್ನು ಕಟ್ಟಿ ಶಿವನಿಗೆ ಆರತಿ ಬೆಳಗಿಸಲಾಯಿತು.

“2016ರಲ್ಲಿ ಬಿಜೆಪಿ ಟಿಕೆಟ್ ನೀಡಲು ಜ್ಞಾನೇಶ್ ಕುಮಾರ್ ಮುಂದಾಗಿದ್ದರು”: ಚುನಾವಣಾ ಆಯುಕ್ತರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕೇರಳಂ ಮಾಜಿ ಮುಖ್ಯ ಕಾರ್ಯದರ್ಶಿ

ಇದರ ಬಳಿಕ ರಫೀಕ್ ಅವರಿಗೆ ರಾಜ್‌ಕುಮಾರ್ ಎಂಬ ಮೊದಲ ಹೆಸರನ್ನು ನೀಡಲಾಯಿತು. ಅವರ ಪತ್ನಿ ಅಫ್ಸರಿ ಅವರಿಗೆ ಅನಿತಾ ಎನ್ನುವ ಹೆಸರು ನೀಡಲಾಯಿತು. ಹಿಂದೂ ಧರ್ಮಕ್ಕೆ ಮರಳಿದ ಬಳಿಕ ಮಾತನಾಡಿದ ರಾಜಕುಮಾರ್, ತಮಗೆ ಈಗ ನೆಮ್ಮದಿಯ ಭಾವನೆ ಉಂಟಾಗಿದೆ ಎಂದು ತಿಳಿಸಿದರು. ಪತಿಯೊಂದಿಗೆ ಇರಬೇಕೆಂಬ ಕಾರಣದಿಂದಾಗಿ ತಾನು ಹಿಂದೂ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದ್ದಾಗಿ ಅವರ ಪತ್ನಿ ಅನಿತಾ ತಿಳಿಸಿದರು.