ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಎನ್‌ಎಚ್‌ಎಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.28 ರಂದು ಬೃಹತ್ ಕಾಲ್ನಡಿಗೆ ಜಾಥಾ: ಮಮಿತ್ ಗಾಯಕವಾಡ್

ಸೆ.28 ರಂದು ನಗರದ ಸಿದ್ದಗಂಗಾ ಮಠದಿಂದ ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಹೇಳಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಸಾವಿರಕ್ಕೂ ಅಧಿಕ ಎಚ್‌ಒಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಎನ್‌ಎಚ್‌ಎಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಾಥಾ

-

Profile
Ashok Nayak Sep 27, 2026 3:56 PM

​ತುಮಕೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾ ಯ ಆರೋಗ್ಯ ಅಧಿಕಾರಿಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಸೆ.28 ರಂದು ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಉಳಿಕೆ ನೌಕರರ ಸಂಘದ ರಾಜ್ಯ ಅಧ್ಯಕ್ಷ ಮಮಿತ್ ಗಾಯಕವಾಡ್ ತಿಳಿಸಿದರು.

​ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.28 ರಂದು ನಗರದ ಸಿದ್ದಗಂಗಾ ಮಠದಿಂದ ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಹೇಳಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಸಾವಿರಕ್ಕೂ ಅಧಿಕ ಎಚ್‌ಒಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಇದನ್ನೂ ಓದಿ: Tumkur News: ಆಮಿಷಗಳಿಂದ ದೂರವಿರಲು ಗುರಿಯ ಹಠ ಅಗತ್ಯ: ನ್ಯಾಯಾಧೀಶ ಜಯಂತ ಕುಮಾರ್‌

​ಪ್ರಮುಖ ಬೇಡಿಕೆಗಳು ಹಾಗೂ ಮುಖ್ಯಾಂಶಗಳು:

​ಬಿ.ಎಸ್‌ಸಿ ನರ್ಸಿಂಗ್ ವಿದ್ಯಾರ್ಹತೆ ಹಿಂಪಡೆಯಲು ಆಗ್ರಹ: ಸಿಎಚ್‌ಒ ಮತ್ತು ಎಚ್‌ಎನ್‌ಒ ಹುದ್ದೆಗಳಿಗೆ ಬಿ.ಎಸ್‌ಸಿ ನರ್ಸಿಂಗ್ ಅರ್ಹತೆ ನೀಡಿರುವುದನ್ನು ಹಿಂಪಡೆಯಬೇಕು. ಇದರಿಂದ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನೌಕರರ ಉದ್ಯೋಗ ಭದ್ರತೆಗೆ ಧಕ್ಕೆಯಾಗಲಿದೆ.

​ಅಧಿಕಾರಿಗಳ ಮೌನಕ್ಕೆ ಆಕ್ರೋಶ: ಸೆ.9ರಂದು ಎನ್‌ಎಚ್‌ಎಂ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿಕೊಂಡರೂ, ಸೆ. 15 ರಂದು ಅಂತಿಮ ಗೆಜೆಟ್ ನೋಟಿಫಿಕೇಶನ್ ಪ್ರಕಟಗೊಂಡಿದ್ದು, ಸಲ್ಲಿಸಿದ ಆಕ್ಷೇಪಣೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ದೂರಿದರು.

​ಸ್ಥಳಾಂತರ ಪ್ರಕ್ರಿಯೆ ಮುಂದೂಡಿಕೆ: ಪ್ರಸ್ತುತ ಸಿಎಚ್‌ಒಗಳ ಸ್ಥಳಾಂತರ ಪ್ರಕ್ರಿಯೆಯನ್ನು ಹೋರಾಟ ಮುಕ್ತಾಯವಾಗುವವರೆಗೆ ತಾತ್ಕಾಲಿಕವಾಗಿ ಮುಂದೂಡಬೇಕು ಮತ್ತು ಯಾವುದೇ ಸ್ಥಳಾಂತರ ಆದೇಶಗಳನ್ನು ಕೈಗೊಳ್ಳಬಾರದು.

​ಉದ್ಯೋಗ ಭದ್ರತೆ ಮತ್ತು ವೇತನ ಪರಿಷ್ಕರಣೆ: ಸಿಎಚ್‌ಒಗಳ ಸೇವೆಯನ್ನು ಕಾಯಂಗೊಳಿಸುವು ದರ ಜೊತೆಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಅವರ ಸೇವೆ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿ ಸೂಕ್ತ ವೇತನ ಪರಿಷ್ಕರಣೆ ಮಾಡಬೇಕು.

​ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯರ್ಶಿ ಚನ್ನಪ್ಪ ಬಣಕಾರ್, ಖಜಾಂಚಿ ಗಿಡ್ಡೇಗೌಡ ಬಿ., ರಾಜ್ಯ ಸಂಘಟನಾ ಕಾರ್ಯರ್ಶಿ ಮಲ್ಲಿಕಾರ್ಜುನ್ ಹಾಗೂ ಸಹ ಸಂಘಟನಾ ಕಾರ್ಯರ್ಶಿಗಳಾದ ಸಂಜೀವ ಅರಬಾವಿ, ಗೋವಿಂದ, ರವಿನಾಯಕ್, ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.