ಕಳಚಿದ ಪ್ರಮುಖ ಸಾಂಸ್ಕೃತಿಕ ಕೊಂಡಿ: ಐತಿಹಾಸಿಕ ಸೆಂಗೋಲ್ ನಿರ್ಮಿಸಿದ ಆಭರಣ ವ್ಯಾಪಾರಿ ವುಮ್ಮಿಡಿ ಎಥಿರಾಜ್ ನಿಧನ; ಪ್ರಧಾನಿ ನರೇಂದ್ರ ಮೋದಿ ಸಂತಾಪ
Vummidi Ethiraj Passed Away: ತಮಿಳುನಾಡಿನ ಖ್ಯಾತ ಆಭರಣ ವ್ಯಾಪಾರಿ ಹಾಗೂ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಕುಟುಂಬದ ಹಿರಿಯರಾದ ವುಮ್ಮಿಡಿ ಎಥಿರಾಜ್ (99) ನಿಧನರಾಗಿದ್ದಾರೆ. 1947ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲಾದ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಂತಾಪ ಸೂಚಿಸಿದ್ದಾರೆ.
ವುಮ್ಮಿಡಿ ಎಥಿರಾಜ್ ಜತೆ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ಚೆನ್ನೈ, ಅ. 21: ಭಾರತದ ಖ್ಯಾತ ಆಭರಣ ವ್ಯಾಪಾರಿ, 125 ವರ್ಷಗಳ ಇತಿಹಾಸ ಹೊಂದಿರುವ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ನ (Vummidi Bangaru Jewellers) ಹಿರಿಯರಾದ ವುಮ್ಮಿಡಿ ಎಥಿರಾಜ್ (Vummidi Ethiraj) ಬುಧವಾರ ತಮಿಳುನಾಡಿನ ಚೆನ್ನೈನಲ್ಲಿ ನಿಧನರಾಗಿದ್ದಾರೆ (Vummidi Ethiraj Passed Away). ಅವರಿಗೆ 99 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಸೇರಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸೂಚಿಸಿ, ಭಾರತದ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಎಥಿರಾಜ್ ವಹಿಸಿದ್ದ ಪಾತ್ರವನ್ನು ಸ್ಮರಿಸಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲಾದ ಐತಿಹಾಸಿಕ ಸೆಂಗೋಲ್ (ರಾಜದಂಡ) ನಿರ್ಮಾಣಕ್ಕೆ ಸಹಕರಿಸಿದ್ದಕ್ಕಾಗಿ ಎಥಿರಾಜ್ ಸದಾ ಸ್ಮರಣೀಯರಾಗಿರುತ್ತಾರೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್:
Deeply saddened by the passing of Thiru Vummidi Ethiraj Ji. Hailing from a distinguished family based in Tamil Nadu, he will always be remembered for his efforts in crafting the historic Sengol that was presented to Former Prime Minister Nehru. Many years later, in 2023, it was our Government which had the honour of giving the Sengol a place of pride in the new Parliament building. During that time, I had the honour of meeting Thiru Vummidi Ethiraj Ji and expressing gratitude for what he has done for our nation and culture. His life and craftsmanship represent a remarkable connection between India's glorious traditions and our national journey. My heartfelt condolences to his family and admirers. Om Shanti. திரு உம்மிடி எத்திராஜ் அவர்களின் மறைவை அறிந்து மிகவும் வேதனையடைந்தேன். தமிழ்நாட்டை பூர்வீகமாகக் கொண்ட ஒரு பாரம்பரியமிக்க குடும்பத்திலிருந்து வந்த இவர், முன்னாள் பிரதமர் நேருவுக்கு வழங்கப்பட்ட வரலாற்றுச் சிறப்புமிக்க செங்கோலை வடிவமைத்தமைக்காக என்றும் நினைவுகூரப்படுவார். பல ஆண்டுகளுக்குப் பின்பு, 2023-ல், புதிய நாடாளுமன்றக் கட்டடத்தில் அந்த செங்கோலுக்கு உரிய கௌரவத்தை வழங்கி சிறப்பிக்கும் வாய்ப்பு எங்கள் அரசுக்கு கிடைத்தது. அப்போது திரு உம்மிடி எத்திராஜ் அவர்களை சந்தித்து, நமது நாட்டிற்கும் கலாச்சாரத்திற்கும் அவர் ஆற்றிய பங்களிப்பிற்காக நன்றி தெரிவிக்கும் பாக்கியம் எனக்குக் கிடைத்தது. அவரது வாழ்க்கையும், கலைத்திறனும், இந்தியாவின் பெருமைமிக்க வளமான பாரம்பரியத்திற்கும் நமது நாட்டின் வளர்ச்சிப் பயணத்திற்கும் இடையிலான போற்றத்தக்க தொடர்பை பிரதிபலிக்கின்றன. அவரது குடும்பத்தினருக்கும், ஆதரவாளர்களுக்கும் எனது ஆழ்ந்த இரங்கலைத் தெரிவித்துக் கொள்கிறேன். ஓம் சாந்தி.
— Narendra Modi (@narendramodi) October 21, 2026
ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಥಿರಾಜ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. 2023ರಲ್ಲಿ ಹೊಸ ಸಂಸತ್ ಭವನದಲ್ಲಿ ಸೆಂಗೋಲ್ಗೆ ಗೌರವಯುತ ಸ್ಥಾನ ಕಲ್ಪಿಸುವ ಅವಕಾಶ ನಮ್ಮ ಸರ್ಕಾರಕ್ಕೆ ದೊರೆತಿತ್ತು. ಆ ಸಂದರ್ಭದಲ್ಲಿ ಎಥಿರಾಜ್ ಅವರನ್ನು ಭೇಟಿಯಾಗಿ ದೇಶ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ಗೌರವವೂ ನನಗೆ ಲಭಿಸಿತ್ತು ಎಂದು ಮೋದಿ ತಿಳಿಸಿದ್ದಾರೆ.
ಅವರ ಜೀವನ ಮತ್ತು ಕರಕುಶಲ ಕೌಶಲ್ಯ ಭಾರತದ ಶ್ರೀಮಂತ ಪರಂಪರೆ ಹಾಗೂ ದೇಶದ ಐತಿಹಾಸಿಕ ಪಯಣದ ನಡುವಿನ ಮಹತ್ವದ ಕೊಂಡಿಯಾಗಿವೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಪ್ರಧಾನಿ ಹೇಳಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಎಥಿರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತದ ನಾಗರಿಕತೆಯ ಪರಂಪರೆಯ ಪವಿತ್ರ ಸಂಕೇತ ಐತಿಹಾಸಿಕ ಸೆಂಗೋಲ್ ನಿರ್ಮಾಣದಲ್ಲಿ ಅವರು ನೀಡಿದ ಕೊಡುಗೆ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ ಎಂದು ತಿಳಿಸಿದ್ದಾರೆ.
CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ
ಭಾರತದ ಶ್ರೀಮಂತ ಆಭರಣ ತಯಾರಿಕಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಥಿರಾಜ್ ಅವರ ಕೊಡುಗೆ ಅಮೂಲ್ಯವಾದುದು. ಅವರ ಸಾಧನೆ ಶಾಶ್ವತ ಪರಂಪರೆಯಾಗಿ ಉಳಿಯಲಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಯಾರು ಈ ವುಮ್ಮಿಡಿ ಎಥಿರಾಜ್?
ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ವುಮ್ಮಿಡಿ ಎಥಿರಾಜ್ 125 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಕುಟುಂಬದ ಹಿರಿಯರಾಗಿದ್ದರು. ಆಭರಣ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅವರು, ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹತ್ವ ಪಡೆದಿರುವ ಸೆಂಗೋಲ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಏನಿದು ಸೆಂಗೋಲ್?
ಸೆಂಗೋಲ್ ಎಂಬುದು ಚಿನ್ನದ ಲೇಪನ ಹೊಂದಿರುವ ಬೆಳ್ಳಿಯ ರಾಜದಂಡ. 1947ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ಸಂದರ್ಭದ ಸಂಕೇತವಾಗಿ ಇದನ್ನು ರೂಪಿಸಲಾಗಿತ್ತು. ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನಾದಿನ ತಮಿಳುನಾಡಿನ ತಿರುವಾವಡುವತ್ತುರೈ ಅಧೀನಂ ಮಠದ ಧಾರ್ಮಿಕ ಮುಖಂಡರು ವಿಶೇಷವಾಗಿ ಪ್ರಯಾಣಿಸಿ ಈ ಸೆಂಗೋಲ್ ಅನ್ನು ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಿದ್ದರು.
ದಶಕಗಳ ಬಳಿಕ, 2023ರಲ್ಲಿ ನೂತನ ಸಂಸತ್ ಭವನದಲ್ಲಿ ಸೆಂಗೋಲ್ಗೆ ಗೌರವಯುತ ಸ್ಥಾನ ಕಲ್ಪಿಸಲಾಯಿತು. ಭಾರತದ ಐತಿಹಾಸಿಕ ಪರಂಪರೆ ಮತ್ತು ಸ್ವಾತಂತ್ರ್ಯದ ನೆನಪನ್ನು ಪ್ರತಿನಿಧಿಸುವ ಈ ಸೆಂಗೋಲ್ ನಿರ್ಮಾಣದಲ್ಲಿ ಎಥಿರಾಜ್ ಅವರ ಕೊಡುಗೆ ಮಹತ್ವದ್ದಾಗಿದೆ.