ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ; ಪೊಲೀಸ್‌ ಕಮಿಷನರ್‌ ಹೇಳಿದ್ದೇನು?

Bengaluru Blast Case: ಘಟನಾ ಸ್ಥಳದಲ್ಲಿ ಸಿಕ್ಕಿದ ಸ್ಫೋಟಕ ಸಾಮಾಗ್ರಿಗಳ ಮಾದರಿಯನ್ನು ಸಂಗ್ರಹಿಸಿರುವ ಪೊಲೀಸರು, ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಸದ್ಯ ಪ್ರಕರಣವು ತನಿಖಾ ಹಂತದಲ್ಲಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸ್ಪೋಟಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ.

ಬೆಂಗಳೂರು ಸ್ಫೋಟದ ಬಗ್ಗೆ ಪೊಲೀಸ್‌ ಕಮಿಷನರ್‌ ಹೇಳಿದ್ದೇನು?

-

Prabhakara R
Prabhakara R Oct 21, 2026 7:00 PM

ಬೆಂಗಳೂರು: ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಸಿಕ್ಕಿದ ಸ್ಫೋಟಕ ಸಾಮಾಗ್ರಿಗಳ ಮಾದರಿಯನ್ನು ಸಂಗ್ರಹಿಸಿರುವ ಪೊಲೀಸರು, ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಸದ್ಯ ಪ್ರಕರಣವು ತನಿಖಾ ಹಂತದಲ್ಲಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸ್ಪೋಟಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ. ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದ್ದಾರೆ.

ಇನ್ನು ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್​ ಕಮಿಷನರ್​​ ಸೀಮಂತ್​ ಕುಮಾರ್​ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಒಂದು ಬ್ಲಾಸ್ಟ್ ಆಗಿದೆ ಅಂತ ಮಾಹಿತಿ ಬಂತು. ಆರಂಭದಲ್ಲಿ ಬ್ಯಾಟರಿ ಬ್ಲಾಸ್ಟ್ ಆಗಿದೆ ಎನ್ನಲಾಗಿತ್ತು. ಬಳಿಕ ಸ್ಥಳಕ್ಕೆ ಎಟಿಎಸ್, ಎಫ್​​ಎಸ್​ಎಲ್ ತಂಡ ಹೋಗಿ ಚೆಕ್ ಮಾಡಿದ್ದಾರೆ. ಕೆಲವು ವಸ್ತುಗಳು ಸೀಜ್ ಮಾಡಿ, ಎಫ್​​ಎಸ್​​ಎಲ್​​ಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಕಟ್ಟಡದ 5ನೇ ಫ್ಲೋರ್​​ನಲ್ಲಿ ಕಾಮಗಾರಿ ನಡೆಯುತ್ತಿತ್ತು. ಮೇಲ್ನೋಟಕ್ಕೆ ಒಂದು ಬ್ಯಾಟರಿ ಆನ್ ಮಾಡೋಕೆ ಹೋದಾಗ ಬ್ಲಾಸ್ಟ್ ಆಗಿದೆ ಎಂದು ಗೊತ್ತಾಗಿದೆ. ಕಟ್ಟಡ ಮಾಲೀಕನನ್ನೂ ಕೂಡ ವಿಚಾರಣೆ ಮಾಡಲಾಗಿದೆ. ಬ್ಲಾಸ್ಟ್ ಆಗುವಾಗ ಇಬ್ಬರು ವ್ಯಕ್ತಿಗಳು ಇದ್ದರು. ಅವರು ಯಾಕೆ ಬೇರೆಯವರ ಗಮನಕ್ಕೆ ತಂದಿಲ್ಲ ಎಂಬುವುದರ ಬಗ್ಗೆ ವಿಚಾರಿಸುತ್ತಿದ್ದೇವೆ. ಬ್ಲಾಸ್ಟ್ ಆಗಿರೋದು ನಿಜ, ಯಾಕೆ ಬ್ಲಾಸ್ಟ್ ಆಗಿದೆ ಅನ್ನೋ ರಿಪೋರ್ಟ್ ಬರಬೇಕು. ಯಾವುದೇ ಪಾರ್ಸಲ್ ಬಂದಿಲ್ಲ, ಬ್ಯಾಟರಿ ಇದ್ದದ್ದು ಬ್ಲಾಸ್ಟ್​ ಆಗಿದೆ ಎಂದು ಪೊಲೀಸ್​ ಕಮಿಷನರ್​​ ಮಾಹಿತಿ ನೀಡಿದ್ದಾರೆ.