ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್ ಯುದ್ಧದಲ್ಲಿ ನಮ್ಮ ನಾವಿಕರನ್ನು ಕಳೆದುಕೊಂಡಿದ್ದೇವೆ ಎಂದ ಭಾರತ

ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲ ಮಾರ್ಗವನ್ನು ಮುಚ್ಚಿತ್ತು. ಇದರ ಪರಿಣಾಮವಾಗಿ ಜಲ ಮಾರ್ಗದಲ್ಲಿದ್ದ ಹಲವು ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಭಾರತವು ತನ್ನ ಮೂವರು ನಾವಿಕರನ್ನು ಕಳೆದುಕೊಂಡಿತ್ತು. ಹೀಗಾಗಿ ಈ ಜಲ ಮಾರ್ಗದ ಸುರಕ್ಷತೆ ಮತ್ತು ಮುಕ್ತ ಸಂಚಾರಕ್ಕೆ ಒತ್ತು ನೀಡಲೇಬೇಕು ಎಂದು ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ ಯುಕೆ ಕರೆದ ಬಹುಪಕ್ಷೀಯ ಸಭೆಯಲ್ಲಿ ತಿಳಿಸಿದರು.

ಹೊರ್ಮುಜ್ ಜಲ ಮಾರ್ಗ ಸುರಕ್ಷತೆ ಬಗ್ಗೆ ಭಾರತ ಹೇಳಿದ್ದೇನು?

ಸಂಗ್ರಹ ಚಿತ್ರ -

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ (Middle East war) ಪ್ರಾರಂಭವಾದ ಮೇಲೆ ಹೊರ್ಮುಜ್ ಜಲ ಮಾರ್ಗದ (Hormuz Strait) ಸುರಕ್ಷತೆ ಮತ್ತು ಮುಕ್ತ ಸಂಚಾರಕ್ಕೆ ಖಚಿತತೆ ತೀರಾ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Foreign Secretary Vikram Misri ) ಅವರು ಗುರುವಾರ ನಡೆದ ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ಯುಕೆ (UK) ಕರೆದ ಬಹುಪಕ್ಷೀಯ ಸಭೆಯಲ್ಲಿ (multilateral meeting) ವರ್ಚುವಲ್ ಆಗಿ ಅವರು ಭಾಗವಹಿಸಿದ್ದರು. 60ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಇರಾನ್ ಯುದ್ಧದ ವೇಳೆ ಹೊರ್ಮುಜ್ ಜಲ ಮಾರ್ಗದಲ್ಲಿ ಮೂವರು ನಾವಿಕರನ್ನು ಭಾರತ ಕಳೆದುಕೊಂಡಿದೆ. ಹೀಗಾಗಿ ಜಲ ಮಾರ್ಗದ ಸುರಕ್ಷತೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕಿದೆ ಎಂದು ನವದೆಹಲಿಯ ಪರವಾಗಿ ಅವರು ಕರೆ ನೀಡಿದರು.

ಇರಾನ್ ಯುದ್ಧದ ಪರಿಣಾಮವಾಗಿ ಹೊರ್ಮುಜ್ ಜಲ ಮಾರ್ಗದಲ್ಲಿ ನಾವಿಕರನ್ನು ಕಳೆದುಕೊಂಡ ಏಕೈಕ ರಾಷ್ಟ್ರ ನಮ್ಮದು. ವಿದೇಶಿ ಧ್ವಜ ಹೊತ್ತ ಹಡಗುಗಳಲ್ಲಿದ್ದ ಕನಿಷ್ಠ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.

Jan Vishwas Bill 2026: ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಅಂತಾರಾಷ್ಟ್ರೀಯ ಜಲಮಾರ್ಗಗಳ ಸುರಕ್ಷತೆ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಈ ಸಭೆಯಲ್ಲಿ ಭಾರತವು ಎತ್ತಿ ತೋರಿಸಿದ್ದು, ನಡೆಯುತ್ತಿರುವ ಸಂಘರ್ಷ ಉಲ್ಬಣಗೊಳ್ಳದಂತೆ ತಡೆಯಲು ರಾಜತಾಂತ್ರಿಕತೆಯು ಅತ್ಯಂತ ಸುಲಭ ದಾರಿಯಾಗಿದೆ ಎನ್ನುವ ಭಾರತದ ನಿಲುವನ್ನು ಈ ಸಂದರ್ಭದಲ್ಲಿ ಮಿಶ್ರಿ ಪುನರುಚ್ಚರಿಸಿದರು.

ಸಂಘರ್ಷದ ಪರಿಣಾಮ ಭಾರತದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟು, ಇಂಧನ ಭದ್ರತೆಯ ಆತಂಕ, ವ್ಯಾಪಾರಿ ಹಡಗುಗಳ ಮೇಲಿನ ದಾಳಿ ಕುರಿತು ವಿಷಯ ಪ್ರಸ್ತಾಪಿಸಿರುವ ಮಿಶ್ರಿ, ಭಾರತವು ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಪ್ರದೇಶದಲ್ಲಿನ ಉದ್ವಿಗ್ನತೆಯು ಭಾರತದ ಮೇಲೆ ನೇರ ಪರಿಣಾಮ ಬಿರುವುದಾಗಿ ಅವರು ತಿಳಿಸಿದರು.

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳು ಗಗನಕ್ಕೇರಿದೆ. ಇದಕ್ಕೆ ಮುಖ್ಯ ಕಾರಣ ಇರಾನ್ ಹೊರ್ಮುಜ್ ಜಲ ಮಾರ್ಗವನ್ನು ನಿರ್ಬಂಧಿಸಿರುವುದಾಗಿದೆ. ಈ ಮಾರ್ಗವನ್ನು ಮತ್ತೆ ತೆರೆಯಲು ಭಾರತವು ಯುಕೆ ಆಯೋಜಿಸಿದ್ದ 60ಕ್ಕೂ ಹೆಚ್ಚು ದೇಶಗಳ ಸಭೆಯಲ್ಲಿ ಸೇರಿಕೊಂಡಿದೆ.

ಅಮೆರಿಕದಿಂದ ಅತಿ ದೊಡ್ಡ ಸೇತುವೆ ಧ್ವಂಸ: ಪ್ರತಿಯಾಗಿ ಗಲ್ಫ್ ರಾಷ್ಟ್ರಗಳ 8 ಸೇತುವೆ ನಾಶಪಡಿಸುವುದಾಗಿ ಗುಡುಗಿದ ಇರಾನ್

ಇರಾನ್ ಯುದ್ಧದ ಪರಿಣಾಮ ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟಾಗಿದ್ದು, ಇದು ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ ಸಮಸ್ಯೆ ಎದುರಾಗಿದೆ. ಇದು ತೈಲ ಬೆಲೆ ಏರಿಕೆ, ತೈಲ ಕೊರತೆಯ ಆತಂಕವನ್ನು ಹೆಚ್ಚಿಸಿದೆ.ಈ ನಿಟ್ಟಿನಲ್ಲಿ ಯುಕೆ ಈ ಸಭೆಯನ್ನು ಆಯೋಜಿಸಿತ್ತು. ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಈ ಸಂದರ್ಭದಲ್ಲಿ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೊರ್ಮುಜ್ ಜಲ ಮಾರ್ಗದಲ್ಲಿ ಸ್ಥಿರತೆಯನ್ನು ಕಾಪಾಡುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.